‘ಶೆಫ್​ ಚಿದಂಬರ’ ಸಿನಿಮಾದ ಮೊದಲ ಹಾಡಿಗಾಗಿ ಮೈಕ್​ ಹಿಡಿದ ಅನಿರುದ್ಧ್​

|

Updated on: May 12, 2024 | 4:38 PM

ಅನಿರುದ್ಧ್​ ಜತ್ಕರ್​ ಅವರು ಸಿನಿಮಾ ಮತ್ತು ಕಿರುತೆರೆ ಎರಡರಲ್ಲೂ ಬ್ಯುಸಿ ಆಗಿದ್ದಾರೆ. ಅವರು ನಟಿಸಿರುವ ‘ಶೆಫ್​ ಚಿದಂಬರ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈಗ ಈ ಸಿನಿಮಾದ ಮೊದಲ ಹಾಡನ್ನು ರಿಲೀಸ್​ ಮಾಡಲಾಗಿದೆ. ಸ್ವತಃ ಅನಿರುದ್ಧ್​ ಅವರೇ ಈ ಹಾಡಿಗೆ ಧ್ವನಿ ನೀಡಿದ್ದಾರೆ. ರಿತ್ವಿಕ್​ ಮುರಳಿಧರ್​ ಸಂಗೀತ ನೀಡಿದ್ದು, ಗಣೇಶ್ ಪರಶುರಾಮ್ ಸಾಹಿತ್ಯ ಬರೆದಿದ್ದಾರೆ.

‘ಶೆಫ್​ ಚಿದಂಬರ’ ಸಿನಿಮಾದ ಮೊದಲ ಹಾಡಿಗಾಗಿ ಮೈಕ್​ ಹಿಡಿದ ಅನಿರುದ್ಧ್​
ಅನಿರುದ್ಧ್​ ಜತ್ಕರ್​
Follow us on

ಒಂದಷ್ಟು ಕಾರಣಗಳಿಂದ ‘ಶೆಫ್​ ಚಿದಂಬರ’ (Chef Chidambara) ಸಿನಿಮಾ ಸುದ್ದಿ ಆಗುತ್ತಿದೆ. ಈ ಸಿನಿಮಾದಲ್ಲಿ ನಟ ಅನಿರುದ್ಧ್​ ಜತ್ಕರ್​ (Anirudh Jatkar) ಅವರು ಮುಖ್ಯ ಪಾತ್ರ ಮಾಡುತ್ತಿದ್ದಾರೆ. ಅವರಿಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಮತ್ತು ‘ಲವ್ ಮಾಕ್ಟೇಲ್ 2’ ಸಿನಿಮಾದ ಖ್ಯಾತಿಯ ರೆಚೆಲ್ ಡೇವಿಡ್‌ ಅವರು ನಟಿಸುತ್ತಿದ್ದಾರೆ. ಕೆ.ಎಸ್. ಶ್ರೀಧರ್‌, ಶರತ್ ಲೋಹಿತಾಶ್ವ, ಶಿವಮಣಿ ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ‘ಶೆಫ್​ ಚಿದಂಬರ’ ಸಿನಿಮಾದ ಮೊದಲ ಹಾಡು (Chef Chidambara Movie Song) ಬಿಡುಗಡೆ ಆಗಿದೆ.

‘ಶೆಫ್​ ಚಿದಂಬರ’ ಸಿನಿಮಾಗೆ ಎಂ. ಆನಂದರಾಜ್ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಮತ್ತು ಪೊಸ್ಟ್ ಪ್ರೊಡಕ್ಷನ್ ಕೆಲಸ ಪೂರ್ಣಗೊಂಡಿದೆ. ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ. ಆರಂಭದಲ್ಲೇ ಫಸ್ಟ್ ಲುಕ್ ಪೋಸ್ಟರ್ ಮೂಲಕ ಈ ಸಿನಿಮಾ ಸಾಕಷ್ಟು ಕೌತುಕ ಮೂಡಿಸಿತ್ತು. ಈಗ ಶೀರ್ಷಿಕೆ ಗೀತೆ ಬಿಡುಗಡೆ ಆಗಿದ್ದು, ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿಸಿದೆ.

‘A2 music’ ಮೂಲಕ ‘ಶೆಫ್​ ಚಿದಂಬರ’ ಸಿನಿಮಾದ ಮೊದಲ ಹಾಡು ಬಿಡುಗಡೆ ಆಗಿದೆ. ಗಣೇಶ್ ಪರಶುರಾಮ್ ಅವರು ಈ ಸಾಂಗ್​ ಬರೆದಿದ್ದಾರೆ. ರಿತ್ವಿಕ್ ಮುರಳಿಧರ್ ಅವರು ಸಂಗೀತ ನೀಡಿದ್ದಾರೆ. ಈ ಹಾಡಿಗೆ ಸ್ವತಃ ಅನಿರುದ್ಧ್ ಜತ್ಕರ್​ ಅವರೇ ಧ್ವನಿ ನೀಡಿದ್ದಾರೆ ಎಂಬುದು ವಿಶೇಷ. ಅನಿರುದ್ದ್ ಅವರ ಕಂಠದಲ್ಲಿ ಮೂಡಿ ಬಂದ ಈ ಹಾಡು ಅವರ ಅಭಿಮಾನಿಗಳಿಗೆ ಇಷ್ಟ ಆಗಿದೆ.

ಈ ಹಾಡಿನ ಕೆಲವು ಭಾಗ ರ‍್ಯಾಪ್​ ಶೈಲಿಯಲ್ಲಿದೆ. ಇದನ್ನು ರೋಹಿತ್ ಹಾಡಿದ್ದಾರೆ. ‘ಶೆಫ್​ ಚಿದಂಬರ’ ಸಿನಿಮಾದ ಟೈಟಲ್​ ಟ್ರ್ಯಾಕ್​ಗೆ ಮೆಚ್ಚುಗೆ ಸಿಕ್ಕಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ. ‘ದಮ್ತಿ ಪಿಕ್ಚರ್ಸ್’ ಮೂಕಲ ರೂಪಾ ಡಿ.ಎನ್. ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಈ ಸಿನಿಮಾಗೆ ನಿರ್ದೇಶಕ ಎಂ. ಆನಂದರಾಜ್ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಗಣೇಶ್ ಪರಶುರಾಮ್ ಅವರು ಸಂಭಾಷಣೆ ಬರೆದಿದ್ದಾರೆ.

ಇದನ್ನೂ ಓದಿ: ‘ಸಿಂಹ ಗುಹೆ’ ಸಿನಿಮಾದ ಹಾಡು ಬಿಡುಗಡೆ ಮಾಡಿ ಶುಭ ಹಾರೈಸಿದ ಅನಿರುದ್ಧ್​ ಜತ್ಕರ್​

ಈ ಚಿತ್ರಕ್ಕೆ ಉದಯಲೀಲಾ ಅವರು ಛಾಯಾಗ್ರಹಣ ಮಾಡಿದ್ದಾರೆ. ರಿತ್ವಿಕ್ ಮುರಳಿಧರ್ ಅವರು ಸಂಗೀತ ನೀಡಿದ್ದಾರೆ. ವಿಜೇತ್ ಚಂದ್ರ ಅವರ ಸಂಕಲನ ಈ ಚಿತ್ರಕ್ಕಿದೆ. ಆಶಿಕ್ ಕುಸುಗೊಳ್ಳಿ ಅವರು ಡಿ.ಐ. ಕೆಲಸ ಮಾಡಿದ್ದಾರೆ. ಮಾಧುರಿ ಪರಶುರಾಮ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ನರಸಿಂಹಮೂರ್ತಿ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.