ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಅವರ ಜೊತೆ ನಟಿಸಿದ ಅನೇಕ ಕಲಾವಿದರು ಇಂದು ಯಶಸ್ಸಿನ ಉತ್ತಂಗದಲ್ಲಿ ಇದ್ದಾರೆ. ಅವರನ್ನು ನೆನಪಿಸಿಕೊಳ್ಳುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ದರ್ಶನ್ ಜೊತೆ ಅನುಪಮಾ ಗೌಡ ಕೂಡ ನಟಿಸಿದ್ದರು ಎನ್ನುವ ವಿಚಾರ ಗೊತ್ತೇ? ಹೌದು, ದರ್ಶನ್ ಜೊತೆ ಅನುಪಮಾ ಗೌಡ ಅವರು ತೆರೆ ಹಂಚಿಕೊಂಡಿದ್ದರು. ಆ ಬಗ್ಗೆ ಇಲ್ಲಿದೆ ವಿವರ.
ಅದು 2003ನೇ ಇಸ್ವಿ. ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಲಂಕೇಶ್ ಪತ್ರಿಕೆ’ ಸಿನಿಮಾ ರಿಲೀಸ್ ಆಗಿತ್ತು. ಈ ಚಿತ್ರದಲ್ಲಿ ದರ್ಶನ್ ಅವರು ಹೀರೋ ಆಗಿ ನಟಿಸಿದ್ದರು. ವಸುಂದರಾ ದಾಸ್ ಅವರು ನಾಯಕಿ ಆಗಿ ಕಾಣಿಸಿಕೊಂಡಿದ್ದರು. ಅನಂತ್ ನಾಗ್, ದೇವರಾಜ್, ಚಿತ್ರಾ ಶೆಣೋಯ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಅನುಪಮಾ ಗೌಡ ಕೂಡ ಕಾಣಿಸಿಕೊಂಡಿದ್ದರು.
ಹೌದು, ಅನುಪಮಾ ಗೌಡ ಅವರು ಹುಟ್ಟಿದ್ದು 1991ರಲ್ಲಿ. ಈ ಸಿನಿಮಾ ಮಾಡುವಾಗ ಅವರಿಗೆ ಕೇವಲ 12 ವರ್ಷ. ಅವರು ಬಾಲ ಕಲಾವಿದೆಯಾಗಿ ಒಂದು ದೃಶ್ಯದಲ್ಲಿ ಬಂದು ಹೋಗುತ್ತಾರೆ. ದರ್ಶನ್ ಜೊತೆ ಅವರು ತೆರೆ ಹಂಚಿಕೊಂಡಿದ್ದರು. ಈ ದೃಶ್ಯವನ್ನು ಫ್ಯಾನ್ಸ್ ವೈರಲ್ ಮಾಡುತ್ತಿದ್ದಾರೆ.
ಅನುಪಮಾ ಗೌಡ ಅವರು ನಂತರ ನಾಯಕಿ ಆಗಿ ಮಿಂಚಿದರು. ಅವರು ‘ಚಿ ಸೌ ಸಾವಿತ್ರಿ’, ‘ಅಕ್ಕ’ ಧಾರಾವಾಹಿಗಳಲ್ಲಿ ನಟಿಸಿದರು. ಸ್ಪರ್ಧಿ ಆಗಿ ಎರಡು ಬಾರಿ ‘ಬಿಗ್ ಬಾಸ್ ಕನ್ನಡ’ ಪ್ರವೇಶಿಸಿದ ಖ್ಯಾತಿ ಕೂಡ ಅವರಿಗೆ ಸಿಕ್ಕಿದೆ. ಚಿತ್ರರಂಗದಲ್ಲೂ ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ. 2015ರಲ್ಲಿ ರಿಲೀಸ್ ಆದ ‘ನಗಾರಿ’ ಸಿನಿಮಾದಲ್ಲಿ ಅನುಪಮಾ ನಟಿಸಿದರು. 2018ರ ‘ಆ ಕರಾಳ ರಾತ್ರಿ’ ಚಿತ್ರದಲ್ಲಿ ನಟಿಸಿದ ಬಳಿಕ ಅವರ ಖ್ಯಾತಿ ಹೆಚ್ಚಾಗಿದೆ. ಸದ್ಯ ಅನೇಕ ಶೋಗಳನ್ನು ನಡೆಸಿಕೊಟ್ಟಿದ್ದಾರೆ.
ಇದನ್ನೂ ಓದಿ: ದರ್ಶನ್ ಕೇಸ್ನಲ್ಲಿ ನಟ ಚಿಕ್ಕಣ್ಣಗೆ ಮತ್ತೆ ಬರಲಿದೆ ಪೊಲೀಸರ ನೋಟೀಸ್?
ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿದ್ದಾರೆ. ಅವರು ಜೈಲು ಸೇರೆ ಎರಡೂವರೆ ತಿಂಗಳು ಕಳೆದಿದೆ. ಇನ್ನೂ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಆಗಿಲ್ಲ. ಪೊಲೀಸರು ದರ್ಶನ್ ವಿರುದ್ಧ ಪ್ರಮುಖ ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.