ಬ್ರೇಕಪ್​ ನೋವಿನಲ್ಲಿ ನಟಸಾರ್ವಭೌಮ ನಟಿ; ಅಭಿಮಾನಿಗಳ ಎದುರು ಮೌನ ಮುರಿದ ಅನುಪಮಾ ಪರಮೇಶ್ವರನ್

| Updated By: ರಾಜೇಶ್ ದುಗ್ಗುಮನೆ

Updated on: Jul 10, 2021 | 5:24 PM

ಅನುಪಮಾ ಬಗ್ಗೆ ಈ ಮೊದಲು ಸಾಕಷ್ಟು ವದಂತಿಗಳು ಹರಿದಾಡಿದ್ದವು. ಟೀಂ ಇಂಡಿಯಾ ವೇಗಿ ಜಸ್ಪ್ರೀತ್​ ಬೂಮ್ರಾ ಜತೆ ಅವರು ಮದುವೆ ಆಗಲಿದ್ದಾರೆ ಎನ್ನುವ ವದಂತಿ ಹರಿದಾಡಿತ್ತು. ಆದರೆ, ಅನುಪಮಾ ಈ ಬಗ್ಗೆ ತುಟಿ ಬಿಚ್ಚಿಲ್ಲ.

ಬ್ರೇಕಪ್​ ನೋವಿನಲ್ಲಿ ನಟಸಾರ್ವಭೌಮ ನಟಿ; ಅಭಿಮಾನಿಗಳ ಎದುರು ಮೌನ ಮುರಿದ ಅನುಪಮಾ ಪರಮೇಶ್ವರನ್
ನಟಿ ಅನುಪಮಾ ಪರಮೇಶ್ವರನ್.
Follow us on

ಸೆಲೆಬ್ರಿಟಿಗಳು ಪ್ರೀತಿ, ಪ್ರೇಮ ಹಾಗೂ ಬ್ರೇಕಪ್​ ವಿಚಾರದ ಬಗ್ಗೆ ಆದಷ್ಟು ಗೌಪ್ಯತೆ ಕಾಯ್ದುಕೊಳ್ಳುತ್ತಾರೆ. ಅವರು ಪ್ರೀತಿ ವಿಚಾರದ ಬಗ್ಗೆ ಹೊರಗೆ ಮಾತನಾಡುವುದು ತುಂಬಾನೇ ಕಡಿಮೆ. ಹೀಗೆ ಮಾತನಾಡಿದರೆ ಅನಗತ್ಯ ಗಾಸಿಪ್​ ಆಗುತ್ತದೆ ಎನ್ನುವ ಭಯ ಅವರಿಗೆ ಕಾಡುತ್ತಿರುತ್ತದೆ. ಇದರ ಮಧ್ಯೆಯೂ ನಟಸಾರ್ವಭೌಮ ನಟಿ ಅನುಪಮಾ ಪರಮೇಶ್ವರನ್​ ಈಗ ತಮ್ಮ ಬ್ರೇಕಪ್​ ವಿಚಾರದ ಬಗ್ಗೆ ಹೇಳಿಕೊಂಡಿದ್ದಾರೆ.

ಅನುಪಮಾ ಬಗ್ಗೆ ಈ ಮೊದಲು ಸಾಕಷ್ಟು ವದಂತಿಗಳು ಹರಿದಾಡಿದ್ದವು. ಟೀಂ ಇಂಡಿಯಾ ವೇಗಿ ಜಸ್ಪ್ರೀತ್​ ಬೂಮ್ರಾ ಜತೆ ಅವರು ಮದುವೆ ಆಗಲಿದ್ದಾರೆ ಎನ್ನುವ ವದಂತಿ ಹರಿದಾಡಿತ್ತು. ಆದರೆ, ಅನುಪಮಾ ಈ ಬಗ್ಗೆ ತುಟಿ ಬಿಚ್ಚಿಲ್ಲ. ಇದೇ ಮೊದಲ ಬಾರಿಗೆ ಅವರು ಲವ್​ ಲೈಫ್​ ಬಗ್ಗೆ ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಅನುಪಮಾ ಇನ್​ಸ್ಟಾಗ್ರಾಮ್​ನಲ್ಲಿ ಆಸ್ಕ್​ ಮಿ ಎನಿಥಿಂಗ್​ ಸೆಷನ್​ ಆರಂಭಿಸಿದ್ದರು. ಈ ವೇಳೆ ಅಭಿಮಾನಿಗಳು ನಾನಾ ಪ್ರಶ್ನೆಗಳು ಕೇಳಿದ್ದಾರೆ. ಅದರಲ್ಲಿ ಓರ್ವ ಅಭಿಮಾನಿ ನೀವು ನಿಜವಾದ ಪ್ರೀತಿಯನ್ನು ನೋಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಉತ್ತರಿಸಿರುವ ಅನುಪಮಾ, ‘ನನಗೆ ನಿಜವಾದ ಪ್ರೀತಿಯೂ ಆಗಿದೆ ಮತ್ತು ನಿಜವಾದ ಬ್ರೇಕಪ್​ ಕೂಡ ಆಗಿದೆ’ ಎಂದಿದ್ದಾರೆ.

ಅನುಪಮಾ ಹೇಳಿರುವ ವಿಚಾರ ಸಾಕಷ್ಟು ಕುತೂಹಲ ಮೂಡಿಸಿದೆ. ಅಂದಹಾಗೆ, ಅವರು ಯಾರ ಜತೆ ಬ್ರೇಕಪ್​ ಮಾಡಿಕೊಂಡಿದ್ದರು ಎಂಬಿತ್ಯಾದಿ ವಿಚಾರದ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ. ಇನ್ನು, ಕನ್ನಡ ಸಿನಿಮಾ ಯಾವಾಗ ಮಾಡುತ್ತೀರಿ ಎನ್ನುವ ಪ್ರಶ್ನೆಯೂ ಅನುಪಮಾ ಅವರಿಗೆ ಕೇಳಲಾಯಿತು. ಒಳ್ಳೆಯ ಕಥೆ ಸಿಕ್ಕರೆ ಖಂಡಿತವಾಗಿಯೂ ನಟಿಸುತ್ತೇನೆ ಎಂದರು.

ಮಲಯಾಳಂ ಮಾತ್ರವಲ್ಲದೆ, ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲೂ ಅನುಪಮಾ ಗುರುತಿಸಿಕೊಂಡಿದ್ದಾರೆ.  ಪುನೀತ್ ರಾಜ್​ಕುಮಾರ್ ನಟನೆಯ ನಟಸಾರ್ವಭೌಮ ಸಿನಿಮಾ ಮೂಲಕ ಅನುಪಮಾ ಕನ್ನಡಕ್ಕೂ ಕಾಲಿಟ್ಟರು. ಈ ಮೂಲಕ ಕನ್ನಡದಲ್ಲೂ ಅವರಿಗೆ ದೊಡ್ಡ ಅಭಿಮಾನಿ ಬಳಗ ಹುಟ್ಟಿಕೊಂಡಿತ್ತು.

ಇದನ್ನೂ ಓದಿ: Anupama Parameswaran: ವೈರಲ್ ಆಯ್ತು ಅನುಪಮಾ ಪರಮೇಶ್ವರನ್ ಕ್ಯೂಟ್ ಫೋಟೋಸ್

ಅನುಪಮಾ ಪರಮೇಶ್ವರನ್​ ನಕಲಿ ಮಾರ್ಕ್ಸ್​ ಕಾರ್ಡ್​ ವೈರಲ್​; ಈ ಹಗರಣದ ಹಿಂದೆ ಯಾರೆಲ್ಲ ಇದ್ದಾರೆ?