
ನಟಿ ಅನುಶ್ರೀ (Anushree) ಅವರು ವಿವಾಹ ರೋಷನ್ ಎಂಬ ಕೊಡಗು ಮೂಲದ ವ್ಯಕ್ತಿ ಜೊತೆ ನಡೆಯಲಿದೆ ಎಂಬ ಸುದ್ದಿ ವೈರಲ್ ಆಗಿತ್ತು. ಈ ಮೊದಲು ಕೂಡ ಇದೇ ರೀತಿಯ ಸುದ್ದಿ ಹರಿದಾಡಿದ್ದರಿಂದ ಇದನ್ನು ಅನೇಕರು ನಂಬಿರಲಿಲ್ಲ. ಆದರೆ, ಈಗ ಇದು ನಿಜ ಎಂಬುದು ಸಾಬೀತಾಗಿದೆ. ವಿವಾಹ ಆಗುವ ಹುಡುಗನ ಜೊತೆ ಅನುಶ್ರೀ ಅವರು ಇರೋ ಫೋಟೋ ವೈರಲ್ ಆಗಿದೆ. ಇದು ರೋಷನ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಲಾಗುತ್ತಿದೆ.
ರೋಷನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಖಾತೆ ಹೊಂದಿದ್ದಾರೆ. ಅನುಶ್ರೀ ಅವರು ಇನ್ಸ್ಟಾಗ್ರಾಮ್ನಲ್ಲಿ ರೋಷನ್ನ ಫಾಲೋ ಕೂಡ ಮಾಡುತ್ತಿದ್ದಾರೆ. ಆದರೆ, ಅವರು ಡಿಪಿಗೆ ತಮ್ಮ ಫೋಟೋನ ಹಾಕಿಲ್ಲ. ಒಂದು ನಾಯಿ ಮರಿ ಫೋಟೋ ಡಿಸ್ಪ್ಲೇನಲ್ಲಿ ಇದೆ. ಹೀಗಾಗಿ, ಅವರ ಗುರುತು ಯಾರಿಗೂ ಸಿಕ್ಕಿರಲಿಲ್ಲ. ಈಗ ರೋಷನ್ ಜೊತೆ ಅನುಶ್ರೀ ಇರೋ ಫೋಟೋ ವೈರಲ್ ಆಗಿದೆ.
ಅನುಶ್ರೀ
ಕಾರ್ಯಕ್ರಮ ಒಂದರಲ್ಲಿ ಅನುಶ್ರೀ ಹಾಗೂ ರೋಷನ್ ಕಾಣಿಸಿಕೊಂಡಿದ್ದಾರೆ. ಪೂಜೆ ಮಾಡಿಸುವಾಗ ಕೆಲವರು ಇದರ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಎಲ್ಲ ಕಡೆಗಳಲ್ಲಿ ಇದು ವೈರಲ್ ಆಗಿದೆ. ಈ ಫೋಟೋ ಫ್ಯಾನ್ ಪೇಜ್ಗಳಲ್ಲಿ ಹರಿದಾಡುತ್ತಿದೆ. ಈ ವಿಚಾರ ತಿಳಿದು ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಆಗಸ್ಟ್ 28ರಂದು ಅನುಶ್ರೀ ಹಾಗೂ ರೋಷನ್ ವಿವಾಹ ನೆರವೇರಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಇನ್ನೂ ಈ ವಿಚಾರವನ್ನು ಅನುಶ್ರೀ ಅವರು ಅಧಿಕೃತ ಮಾಡಿಲ್ಲ. ಈ ಬಗ್ಗೆ ಅವರ ಕಡೆಯಿಂದ ಅಧಿಕೃತ ಮಾಹಿತಿ ಸಿಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಶೀಘ್ರವೇ ಈ ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ಅವರು ಮಾಹಿತಿ ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಆ್ಯಂಕರ್ ಅನುಶ್ರೀ ಮದುವೆಗೆ ದಿನಾಂಕ ಫಿಕ್ಸ್? ಇದು ಪಕ್ಕಾ ಅರೇಂಜ್ ಮ್ಯಾರೇಜ್
ಅವರು ಕೊನೆಯದಾಗಿ ಜೀ ಕನ್ನಡದ ‘ಸರಿಗಮಪ’ ಆ್ಯಂಕರಿಂಗ್ನಲ್ಲಿ ಕಾಣಿಸಿಕೊಂಡಿದ್ದರು. ಅವರು ಜೀ ಕನ್ನಡದ ಹಲವು ಶೋಗಳನ್ನು ನಿರೂಪಣೆ ಮಾಡುತ್ತಾರೆ. ಅವರು ಹೆದರದೆ, ಯಾವುದೇ ಸ್ಕ್ರಿಪ್ಟ್ ಇಲ್ಲದೆ ಕಾರ್ಯಕ್ರಮ ನಡೆಸಿಕೊಡುವಷ್ಟು ಸಾಮರ್ಥ್ಯ ಹೊಂದಿದ್ದಾರೆ. ಈ ಕಾರಣದಿಂದಲೇ ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:42 am, Fri, 18 July 25