AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ‘ಎಕ್ಕ’ ಜೊತೆ ‘ಜೂನಿಯರ್’ ರಿಲೀಸ್; ನಿಮ್ಮ ಆಯ್ಕೆ ಯಾವುದು?

ಹಾಡುಗಳ ಮೂಲಕ ‘ಎಕ್ಕ’ ಮತ್ತು ‘ಜೂನಿಯರ್’ ಸಿನಿಮಾಗಳು ಸದ್ದು ಮಾಡಿವೆ. ಜುಲೈ 18ರಂದು ಬಿಡುಗಡೆ ಆಗುವ ಈ ಚಿತ್ರಗಳ ಮೇಲೆ ನಿರೀಕ್ಷೆ ಇದೆ. ಎರಡೂ ಸಿನಿಮಾಗಳ ಟ್ರೇಲರ್​ಗಳು ಜನಮೆಚ್ಚುಗೆ ಗಳಿಸಿವೆ. ಈ ಚಿತ್ರಗಳ ಜೊತೆಗೆ ಬಾಲಿವುಡ್​ನ ‘ತನ್ವಿ: ದಿ ಗ್ರೇಟ್’ ಸಿನಿಮಾ ಕೂಡ ತೆರೆಕಾಣುತ್ತಿದೆ.

ಈ ವಾರ ‘ಎಕ್ಕ’ ಜೊತೆ ‘ಜೂನಿಯರ್’ ರಿಲೀಸ್; ನಿಮ್ಮ ಆಯ್ಕೆ ಯಾವುದು?
Yuva Rajkumar, Kireeti Reddy, Sreeleela
ಮದನ್​ ಕುಮಾರ್​
|

Updated on: Jul 17, 2025 | 7:05 PM

Share

ಕನ್ನಡ ಸಿನಿಮಾ ಪ್ರಿಯರಿಗೆ ಈ ವಾರ (ಜುಲೈ 18) ಎರಡು ಪ್ರಮುಖ ಆಯ್ಕೆಗಳಿವೆ. ಯುವ ರಾಜ್​ಕುಮಾರ್ (Yuva Rajkumar) ನಟನೆಯ ‘ಎಕ್ಕ’ ಸಿನಿಮಾ ತೆರೆ ಕಾಣುತ್ತಿದೆ. ಜೊತೆಗೆ ಕಿರೀಟಿ ರೆಡ್ಡಿ ನಟನೆಯ ‘ಜೂನಿಯರ್’ ಸಿನಿಮಾ (Junior Movie) ಕೂಡ ಬಿಡುಗಡೆ ಆಗುತ್ತಿದೆ. ಬೇರೆ ಬೇರೆ ಕಾರಣಗಳಿಂದಾಗಿ ಈ ಎರಡೂ ಸಿನಿಮಾಗಳು ನಿರೀಕ್ಷೆ ಮೂಡಿಸಿವೆ. ‘ಎಕ್ಕ’ (Ekka Movie) ಮತ್ತು ‘ಜೂನಿಯರ್’ ಸಿನಿಮಾಗಳ ಟ್ರೇಲರ್​ಗಳು ಗಮನ ಸೆಳೆದಿವೆ. ಈ ಎರಡು ಸಿನಿಮಾಗಳ ಪೈಕಿ ಯಾವ ಚಿತ್ರಕ್ಕೆ ಪ್ರೇಕ್ಷಕರು ಹೆಚ್ಚು ಒಲವು ತೋರಿಸುತ್ತಾರೆ ಎಂಬುದು ಶುಕ್ರವಾರ (ಜುಲೈ 18) ಗೊತ್ತಾಗಲಿದೆ.

ಯುವ ರಾಜ್​ಕುಮಾರ್ ಅವರ ಅಭಿಮಾನಿಗಳಿಗೆ ‘ಎಕ್ಕ’ ಸಿನಿಮಾ ಮೇಲೆ ದೊಡ್ಡ ನಿರೀಕ್ಷೆ ಇದೆ. ಇದು ಯುವ ರಾಜ್​ಕುಮಾರ್ ನಟನೆಯ ಎರಡನೇ ಸಿನಿಮಾ. ‘ಯುವ’ ಸಿನಿಮಾದ ಬಳಿಕ ಅವರು ‘ಎಕ್ಕ’ ಚಿತ್ರದಲ್ಲಿ ನಟಿಸಿದ್ದಾರೆ. ಟ್ರೇಲರ್​ನಲ್ಲಿ ಅವರ ಮಾಸ್ ಅವತಾರ ಕಾಣಿಸಿದೆ. ಅವರಿಗೆ ಜೋಡಿಯಾಗಿ ಸಂಪದಾ ಮತ್ತು ಸಂಜನಾ ಆನಂದ್ ಅವರು ನಟಿಸಿದ್ದಾರೆ.

ರೋಹಿತ್ ಪದಕಿ ಅವರು ‘ಎಕ್ಕ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ಪಿಆರ್​ಕೆ ಪ್ರೊಡಕ್ಸನ್ಸ್’, ‘ಜಯಣ್ಣ ಫಿಲ್ಮ್ಸ್’ ಮತ್ತು ‘ಕೆಆರ್ಜಿ ಸ್ಟುಡಿಯೋಸ್’ ಒಟ್ಟಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿವೆ. ಶ್ರುತಿ, ಸಾಧು ಕೋಕಿಲ, ಅತುಲ್ ಕುಲಕರ್ಣಿ, ಆದಿತ್ಯ, ಪೂರ್ಣಚಂದ್ರ ಮೈಸೂರು ಮುಂತಾದ ಕಲಾವಿದರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಆ ಕಾರಣದಿಂದಲೂ ಸಿನಿಮಾ ನಿರೀಕ್ಷೆ ಮೂಡಿಸಿದೆ.

ಇದನ್ನೂ ಓದಿ
Image
‘ಸ್ಯಾಂಡಲ್​​ವುಡ್ ಸಣ್ಣ ಇಂಡಸ್ಟ್ರಿ ಆಗಿತ್ತು, ಈಗ ಹೇಗೆ ಬೆಳೆದಿದೆ ನೋಡಿ’
Image
ಸಿನಿಮಾ ರಂಗದವರಿಗೆ ಡಿಕೆ ಶಿವಕುಮಾರ್ ಎಚ್ಚರಿಕೆ ಉಮಾಪತಿ ಹೇಳಿದ್ದೇನು?
Image
4 ಚಿತ್ರಮಂದಿರ, 23 ಸಿನಿಮಾ ಸ್ಕ್ರೀನ್​, ಡಿಸಿಎಂ ಡಿಕೆಶಿಯ ಸಿನಿಮಾ ನಂಟು
Image
‘ನೆಟ್ಟು, ಬೋಲ್ಟ್ ಟೈಟ್ ಮಾಡುವೆ’: ನಟರಿಗೆ ನೇರ ಎಚ್ಚರಿಕೆ ಕೊಟ್ಟ ಡಿಕೆಶಿ

ಇನ್ನು, ‘ಜೂನಿಯರ್’ ಸಿನಿಮಾ ಮೂಲಕ ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ರೆಡ್ಡಿ ಅವರು ಚಿತ್ರರಂಗಕ್ಕೆ ಪ್ರವೇಶ ಪಡೆಯುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರಿಗೆ ಜೋಡಿಯಾಗಿ ಶ್ರೀಲೀಲಾ ಅಭಿನಯಿಸಿದ್ದಾರೆ. ಜೆನಿಲಿಯಾ ದೇಶಮುಖ್, ರವಿಚಂದ್ರನ್, ಸುಧಾರಾಣಿ, ರಾವ್ ರಮೇಶ್, ಅಚ್ಯುತ್ ಕುಮಾರ್ ಅವರಂತಹ ಪ್ರತಿಭಾವಂತ ಕಲಾವಿದರು ಈ ಸಿನಿಮಾದಲ್ಲಿ ಇದ್ದಾರೆ.

ಇದನ್ನೂ ಓದಿ: ‘ಬ್ಯಾಂಗಲ್ ಬಂಗಾರಿ ಹಾಡು ಸಿಎಂ ತನಕ ತಲುಪಿದೆ’: ಯುವ ರಾಜ್​ಕುಮಾರ್

ಬಿಡುಗಡೆಗೂ ಮೊದಲೇ ಹಾಡುಗಳ ಮೂಲಕ ‘ಎಕ್ಕ’ ಮತ್ತು ‘ಜೂನಿಯರ್’ ಸಿನಿಮಾಗಳು ಸದ್ದು ಮಾಡಿವೆ. ‘ಎಕ್ಕ’ ಸಿನಿಮಾದ ‘ಬ್ಯಾಂಗಲ್ ಬಂಗಾರಿ..’ ಹಾಡು ಧೂಳೆಬ್ಬಿಸಿದೆ. ಅದೇ ರೀತಿ, ‘ಜೂನಿಯರ್’ ಚಿತ್ರದ ‘ವೈರಲ್ ವೈಯ್ಯಾರಿ..’ ಹಾಡು ಕೂಡ ಸೂಪರ್ ಹಿಟ್ ಆಗಿದೆ. ದೊಡ್ಡ ಪರದೆಯಲ್ಲಿ ಈ ಹಾಡುಗಳನ್ನು ನೋಡಿ ಎಂಜಾಯ್ ಮಾಡಲು ಫ್ಯಾನ್ಸ್ ಸಜ್ಜಾಗಿದ್ದಾರೆ.

ಬಾಲಿವುಡ್​ನಲ್ಲಿ ‘ತನ್ವಿ: ದ ಗ್ರೇಟ್’ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಸಿನಿಮಾಗೆ ಅನುಪಮ್ ಖೇರ್ ಅವರು ನಿರ್ದೇಶನ ಮಾಡಿದ್ದಾರೆ. ಶುಭಾಂಗಿ ದತ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಅನುಪಮ್ ಖೇರ್, ಪಲ್ಲವಿ ಜೋಶಿ, ಜಾಕಿ ಶ್ರಾಫ್, ಅರವಿಂದ್ ಸ್ವಾಮಿ ಮುಂತಾದ ಕಲಾವಿದರು ಪಾತ್ರವರ್ಗದಲ್ಲಿ ಇದ್ದಾರೆ. ಈ ಚಿತ್ರ ಕೂಡ ಜುಲೈ 18ರಂದು ಬಿಡುಗಡೆ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More