ಚಿತ್ರಮಂದಿರಕ್ಕೆ ಬ್ಯಾಂಗಲ್ ಬಂಗಾರಿ ಎಂಟ್ರಿ; ಹೇಗಿದೆ ‘ಎಕ್ಕ’ ಸಿನಿಮಾ ಫಸ್ಟ್ ಹಾಫ್?
ಯುವ ರಾಜ್‌ಕುಮಾರ್ ನಟನೆಯ ‘ಎಕ್ಕ’ ಸಿನಿಮಾ ಇಂದು (ಜುಲೈ 18) ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಈ ಸಿನಿಮಾಗೆ ರೋಹಿತ್ ಪದಕಿ ಅವರು ನಿರ್ದೇಶನ ಮಾಡಿದ್ದಾರೆ. ಸಂಜನಾ ಆನಂದ್, ಸಂಪದಾ, ಅದಿತ್ಯ, ಅತುಲ್ ಕುಲಕರ್ಣಿ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ. ‘ಎಕ್ಕ’ ಸಿನಿಮಾದ ಫಸ್ಟ್ ಹಾಫ್ ಹೇಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ..

Yuva Rajkumar
ಹಲವು ಕಾರಣಗಳಿಂದಾಗಿ ‘ಎಕ್ಕ’ ಸಿನಿಮಾ (Ekka Movie) ನಿರೀಕ್ಷೆ ಮೂಡಿಸಿತ್ತು. ಈ ಸಿನಿಮಾದ ‘ಬ್ಯಾಂಗಲ್ ಬಂಗಾರಿ..’ (Bangle Bangari) ಹಾಡು ಸಖತ್ ಸದ್ದು ಮಾಡಿದೆ. ಈಗ ಈ ಹಾಡನ್ನು ದೊಡ್ಡ ಪರದೆಯಲ್ಲಿ ನೋಡಿ ಜನರು ಎಂಜಾಯ್ ಮಾಡುತ್ತಿದ್ದಾರೆ. ‘ಎಕ್ಕ’ ಸಿನಿಮಾ ಅದ್ದೂರಿಯಾಗಿ ತೆರೆಕಂಡಿದ್ದು, ಯುವ ರಾಜ್‌ಕುಮಾರ್ (Yuva Rajkumar) ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿದೆ. ರೋಹಿತ್ ಪದಕಿ ನಿರ್ದೇಶನದ ಈ ಸಿನಿಮಾವನ್ನು ಪಿಆರ್ಕೆ ಪ್ರೊಡಕ್ಷನ್ಸ್, ಕೆಆರ್ಜಿ ಸ್ಟುಡಿಯೋಸ್, ಜಯಣ್ಣ ಫಿಲ್ಮ್ಸ್ ಮೂಲಕ ನಿರ್ಮಾಣ ಮಾಡಲಾಗಿದೆ. ‘ಎಕ್ಕ’ ಸಿನಿಮಾ ಫಸ್ಟ್ ಹಾಫ್ ವಿಮರ್ಶೆ ಇಲ್ಲಿದೆ..
- ವಾರಾಣಸಿಯಲ್ಲಿ ಶುರು ಆಗುತ್ತದೆ ಎಕ್ಕ ಕಥೆ. ಮೊದಲ ಸೀನ್‌ನಲ್ಲೇ ದರ್ಶನ ನೀಡುವ ಯುವ ರಾಜ್‌ಕುಮಾರ್, ಸಂಪದಾ.
- ‘ಎಕ್ಕ ಮಾರ್..’ ಹಾಡಿನಲ್ಲಿ ಯುವ ರಾಜ್‌ಕುಮಾರ್ ಮಾಸ್ ಡ್ಯಾನ್ಸ್. ಸಾಂಗ್ ಮೂಲಕ ಫ್ಲ್ಯಾಶ್‌ಬ್ಯಾಕ್ ಕತೆ ಓಪನ್.
- ಶ್ರುತಿ-ಯುವ ನಡುವಿನ ಸೆಂಟಿಮೆಂಟ್ ದೃಶ್ಯಗಳು, ಯುವ-ಸಂಜನಾ ನಡುವಿನ ಪ್ರೇಮ್ ಕಹಾನಿಯು ಫ್ಯಾಮಿಲಿ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತೆ.
- ಪ್ರೇಕ್ಷಕರು ಇಷ್ಟಪಟ್ಟಿರುವ, ಸೂಪರ್ ಹಿಟ್ ಆಗಿರುವ ‘ಬ್ಯಾಂಗಲ್ ಬಂಗಾರಿ..’ ಹಾಡು ಫಸ್ಟ್ ಹಾಫ್‌ನಲ್ಲೇ ಇದೆ.
- ಅತುಲ್ ಕುಲಕರ್ಣಿ ಪಾತ್ರ ಎಂಟ್ರಿ ಆದ ಬಳಿಕ ಕಥೆಗೆ ಟ್ವಿಸ್ಟ್ ಸಿಗುತ್ತದೆ. ‘ಎಕ್’ಕ ಕಹಾನಿಯಲ್ಲಿ ಭೂಗತ ಲೋಕದ ಚಾಪ್ಟರ್ ಓಪನ್ ಆಗುತ್ತದೆ.
- ಲವ್, ಸೆಂಟಿಮೆಂಟ್, ಆ್ಯಕ್ಷನ್, ಕಾಮಿಡಿ ಮುಂತಾದ ಅಂಶಗಳ ಪ್ಯಾಕೇಜ್ ರೀತಿ ಫಸ್ಟ್ ಹಾಫ್ ಮೂಡಿಬಂದಿದೆ. ಕಥೆ ಮುಂದುವರಿದಂತೆ ಮಾಸ್ ಅಂಶ ಹೆಚ್ಚುತ್ತದೆ.
- ನಟಿ ಸಂಪದಾ ಅವರಿಗೆ ಮೊದಲಾರ್ಧದಲ್ಲಿ ಹೆಚ್ಚು ಸ್ಕ್ರೀನ್ ಸ್ಪೇಸ್ ಇಲ್ಲ. ಆದಿತ್ಯ ಕೂಡ ಫಸ್ಟ್ ಹಾಫ್‌ನಲ್ಲಿ ಕಾಣಿಸಿಕೊಳ್ಳಲ್ಲ.
- ಸಾಧು ಕೋಕಿಲ ಅವರು ಮೊದಲಾರ್ಧದ ಒಂದೆರಡು ದೃಶಗಳಲ್ಲಿ ಬಂದು ಕಾಮಿಡಿ ಕಚಗುಳಿ ನೀಡುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




