ಗಾಯಕ ಅರ್ಮಾನ್ ಮಲಿಕ್ (Armaan Malik) ಅವರಿಗೆ ಇಂದು (ಜುಲೈ 22) ಬರ್ತ್ಡೇ ಸಂಭ್ರಮ. ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರ ಹಾಡನ್ನು ಕೇಳಿ ಅನೇಕರು ನೋವು ಮರೆತಿದ್ದಾರೆ. ಇನ್ನೂ ಕೆಲವರಿಗೆ ಹಳೆಯ ಹುಡುಗಿಯ ನೆನಪು ಬಂದಿದೆ. ಇನ್ನೂ ಹಲವರಿಗೆ ಇವರ ಹಾಡು ಕೇಳಿ ಮಳೆಯಲ್ಲಿ ನೆನೆಯುವ ಆಸೆ ಆಗಿದೆ. ಅಷ್ಟರಮಟ್ಟಿಗೆ ಇವರ ಹಾಡು ಪ್ರಭಾವ ಬೀರಿದೆ. ಅವರ ಕಂಠ ಇಷ್ಟವಾಗದೇ ಇರದವರು ಇಲ್ಲ ಎಂದರೂ ತಪ್ಪಾಗಲಾರದು. ಅರ್ಮಾನ್ ಮಲಿಕ್ ಅವರು ಕನ್ನಡದಲ್ಲಿ ಹಲವು ಹಾಡುಗಳನ್ನು ಹಾಡಿದ್ದಾರೆ. ಒಂದಕ್ಕಿಂತ ಒಂದು ಭಿನ್ನ ಹಾಡುಗಳನ್ನು ಅವರು ಹಾಡಿದ್ದಾರೆ.
ಅರ್ಮಾನ್ ಮಲಿಕ್ ಅವರಿಗೆ ಭಾರತ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಅವರು ಹಿಂದಿಯಲ್ಲಿ 112 ಹಾಡುಗಳನ್ನು ಹಾಡಿದ್ದಾರೆ. ಹಿಂದಿಯಲ್ಲಿ ಸಿನಿಮೇತರ 48 ಹಾಡುಗಳು ಅವರ ಕಂಠದಲ್ಲಿ ಮೂಡಿ ಬಂದಿವೆ. ತೆಲುಗಿನಲ್ಲಿ 46, ಕನ್ನಡದಲ್ಲಿ 44 ಹಾಡುಗಳನ್ನು ಅವರು ಹಾಡಿದ್ದಾರೆ. ಬೆಂಗಾಲಿ, ಮಲಯಾಳಂ ಮೊದಲಾದ ಭಾಷೆಗಳಲ್ಲೂ ಅರ್ಮಾನ್ ಹಾಡಿದ್ದಾರೆ.
‘ಮುಂಗಾರು ಮಳೆ 2’
2016ರಲ್ಲಿ ರಿಲೀಸ್ ಆದ ‘ಮುಂಗಾರು ಮಳೆ 2’ ಚಿತ್ರದ ಹಾಡುಗಳು ಸೂಪರ್ ಹಿಟ್ ಆದವು. ‘ಸರಿಯಾಗಿ ನೆನಪಿದೆ..’, ‘ನೀನು ಇರದೆ..’, ‘ಒಂಟೆ ಸಾಂಗು..’ ಅರ್ಮಾನ್ ಕಂಠದಲ್ಲಿ ಮೂಡಿ ಬಂದಿವೆ.
ದೇವರೇ..
‘ಹೆಬ್ಬುಲಿ’ ಚಿತ್ರದ ‘ದೇವರೇ..’ ಹಾಡು ಸೂಪರ್ ಹಿಟ್ ಆಯಿತು. ಅಣ್ಣನ ಕಳೆದುಕೊಂಡ ತಮ್ಮ ಹಾಡುವ ಈ ಸಾಂಗ್ ಮೆಚ್ಚುಗೆ ಪಡೆಯಿತು. ಇದನ್ನು ಅರ್ಮಾನ್ ಹಾಡಿದ್ದಾರೆ.
ಒಂದೇ ಏಟಿಗೆ..
‘ಅಮರ್’ ಸಿನಿಮಾದ ‘ಒಂದೇ ಏಟಿಗೆ..’ ಹಾಡು ಕೇಳುಗರಿಗೆ ಇಷ್ಟ ಆಗಿದೆ. ಈ ಹಾಡನ್ನು ಅರ್ಮಾನ್ ಅವರೇ ಹಾಡಿದ್ದಾರೆ ಅನ್ನೋದು ವಿಶೇಷ.
ಅನುಮಾನವೇ ಇಲ್ಲ..
‘ಅನುಮಾನವೇ ಇಲ್ಲ..’ ‘ಕರಿಯಾ 2’ ಚಿತ್ರದ ಸಾಂಗ್. ಈ ಹಾಡು ಪ್ರೇಕ್ಷಕರಿಗೆ ಇಷ್ಟವಾಗಿದೆ. ಇದನ್ನು ಅರ್ಮಾನ್ ಅವರು ಹಾಡಿದ್ದಾರೆ. ಈ ಹಾಡು ಎಲ್ಲರ ಗಮನ ಸೆಳೆದಿದೆ.
ಯಾರೇ ಯಾರೇ..
‘ಏಕ್ ಲವ್ ಯಾ’ ಚಿತ್ರದ ‘ಯಾರೇ.. ಯಾರೇ..’ ಹಾಡು ಪ್ರೇಕ್ಷಕರಿಗೆ ಇಷ್ಟವಾಗಿದೆ. ಈ ಸಾಂಗ್ನ ಅರ್ಮಾನ್ ಹಾಡಿದ್ದಾರೆ.
ಇಷ್ಟೇ ಅಲ್ಲದೆ, ಒಂದು ಮಳೆಬಿಲ್ಲು, ನಾ ಹೇಗೆ ಹೇಳಲಿ ಸೇರಿ ಇನ್ನೂ ಅನೇಕ ಸೂಪರ್ ಹಿಟ್ ಗೀತೆಗಳನ್ನು ಅರ್ಮಾನ್ ಹಾಡಿದ್ದಾರೆ.