Ashika Ranganath: ವೇದಿಕೆ ಮೇಲೆ ಆಶಿಕಾ ರಂಗನಾಥ್ ಡ್ಯಾನ್ಸ್ ನೋಡಿ ಫಿದಾ ಆದ ತೆಲುಗು ಮಂದಿ

|

Updated on: Jan 11, 2024 | 7:11 AM

ಈಗಾಗಲೇ ತೆಲುಗು ಚಿತ್ರರಂಗಕ್ಕೆ ಆಶಿಕಾ ಪರಿಚಯಗೊಂಡಿದ್ದಾರೆ. ‘ನಾ ಸಾಮಿ ರಂಗ’ ಚಿತ್ರದ ಮೂಲಕ ಅವರು ಗೆಲ್ಲುವ ಭರವಸೆಯಲ್ಲಿದ್ದಾರೆ. . ಈ ಚಿತ್ರದ ಬಳಿಕ ಅವರಿಗೆ ಬೇಡಿಕೆ ಹೆಚ್ಚಾಗಲಿದೆ ಎಂದು ನಿರ್ದೇಶಕರು ಭರವಸೆ ವ್ಯಕ್ತಪಡಿಸಿದ್ದರು.

Ashika Ranganath: ವೇದಿಕೆ ಮೇಲೆ ಆಶಿಕಾ ರಂಗನಾಥ್ ಡ್ಯಾನ್ಸ್ ನೋಡಿ ಫಿದಾ ಆದ ತೆಲುಗು ಮಂದಿ
ಆಶಿಕಾ
Follow us on

ನಟಿ ಆಶಿಕಾ ರಂಗನಾಥ್ (Ashika Ranganath) ಅವರು ನಟನೆಯ ಜೊತೆಗೆ ಡ್ಯಾನ್ಸ್ ಮೂಲಕವೂ ಫೇಮಸ್ ಆಗಿದ್ದಾರೆ. ‘ಪಟಾಕಿ ಪೋರಿ..’ ಅಂಥ ಹಿಟ್ ಹಾಡುಗಳಲ್ಲಿ ಆಶಿಕಾ ಹೆಜ್ಜೆ ಹಾಕಿದ್ದಾರೆ. ಈಗ ಅವರು ತೆಲುಗಿನಲ್ಲಿ ಮಿಂಚಲು ರೆಡಿ ಆಗಿದ್ದಾರೆ. ‘ನಾ ಸಾಮಿ ರಂಗ’ ಚಿತ್ರದಲ್ಲಿ ಆಶಿಕಾ ರಂಗನಾಥ್ ನಟಿಸಿದ್ದಾರೆ. ಈ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ಇತ್ತೀಚೆಗೆ ನಡೆಯಿತು. ಇದರಲ್ಲಿ ಭಾಗಿ ಆದ ತಂಡ ಸಾಕಷ್ಟು ಮನರಂಜನೆ ನೀಡಿದೆ. ಈ ವೇಳೆ ಆಶಿಕಾ ರಂಗನಾಥ್ ಅವರ ಡ್ಯಾನ್ಸ್ ನೋಡಿ ಎಲ್ಲರೂ ಖುಷಿಪಟ್ಟಿದ್ದಾರೆ.

2016ರಲ್ಲಿ ರಿಲೀಸ್ ಆದ ‘ಕ್ರೇಜಿ ಬಾಯ್’ ಚಿತ್ರದಿಂದ ಆಶಿಕಾ ರಂಗನಾಥ್ ಚಿತ್ರರಂಗಕ್ಕೆ ಬಂದರು. ಆ ಬಳಿಕ ಹಲವು ಸಿನಿಮಾಗಳಲ್ಲಿ ಅವರು ನಟಿಸಿದರು. ಈಗಾಗಲೇ ‘ಅಮಿಗೋಸ್’ ಚಿತ್ರದ ಮೂಲಕ ಅವರು ತೆಲುಗು ಚಿತ್ರರಂಗಕ್ಕೆ ಪರಿಚಯಗೊಂಡಿದ್ದಾರೆ. ಈ ಸಿನಿಮಾಗೆ ಮಿಶ್ರಪ್ರತಿಕ್ರಿಯೆ ಸಿಕ್ಕಿತು. ಈಗ ‘ನಾ ಸಾಮಿ ರಂಗ’ ಚಿತ್ರದ ಮೂಲಕ ಅವರು ಗೆಲ್ಲುವ ಭರವಸೆಯಲ್ಲಿದ್ದಾರೆ.

ವೇದಿಕೆ ಕೆಳಗೆ ಕುಳಿತಿದ್ದ ಆಶಿಕಾ ರಂಗನಾಥ್ ಅವರನ್ನು ವೇದಿಕೆ ಮೇಲೆ ಕರೆತರಲಾಯಿತು. ಆ ಬಳಿಕ ಅವರು ನಿರ್ದೇಶಕ ವಿಜಯ್ ಬಿನ್ನಿ ಜೊತೆ ಸಖಥ್ ಆಗಿ ಡ್ಯಾನ್ಸ್ ಮಾಡಿದರು. ಇದನ್ನು ನೋಡಿ ಪ್ರೇಕ್ಷಕರು ಇಷ್ಟಪಟ್ಟರು. ಆಶಿಕಾ ಅವರ ಟ್ಯಾಲೆಂಟ್ ಜನರಿಗೆ ಇಷ್ಟ ಆಗುತ್ತಿದೆ. ಆಶಿಕಾ ರಂಗನಾಥ್ ಅವರ ಬಗ್ಗೆ ಇತ್ತೀಚೆಗೆ ನಿರ್ದೇಶಕರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈ ಚಿತ್ರದ ಬಳಿಕ ಅವರಿಗೆ ಬೇಡಿಕೆ ಹೆಚ್ಚಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದರು.


ಇದನ್ನೂ ಓದಿ: ಸಂಕ್ರಾಂತಿ ಬಳಿಕ ತೆಲುಗಿನಲ್ಲಿ ಬದಲಾಗುತ್ತೆ ಆಶಿಕಾ ರಂಗನಾಥ್​ ಅದೃಷ್ಟ

‘ನಾ ಸಾಮಿ ರಂಗ’ ಚಿತ್ರದಲ್ಲಿ ಅಕ್ಕಿನೇನಿ ನಾಗಾರ್ಜುನ ಅವರಿಗೆ ಆಶಿಕಾ ಜೊತೆಯಾಗಿದ್ದಾರೆ. ಸಂಕ್ರಾಂತಿ ಪ್ರಯುಕ್ತ ಜನವರಿ 14ರಂದು ಚಿತ್ರ ರಿಲೀಸ್ ಆಗುತ್ತಿದೆ. ಈ ಚಿತ್ರದ ಜೊತೆ ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ (ಜನವರಿ 12), ‘ಹನುಮಾನ್’ (ಜನವರಿ 12) ರಿಲೀಸ್ ಆಗುತ್ತಿವೆ. ಈ ಸಿನಿಮಾಗಳ ಜೊತೆ ‘ನಾ ಸಾಮಿ ರಂಗ’ ಪೈಪೋಟಿ ನೀಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:08 am, Thu, 11 January 24