
ಹೊಸಬರ ‘ಅವನಿರಬೇಕಿತ್ತು’ ಸಿನಿಮಾ (Avanirabekittu Movie) ಟ್ರೇಲರ್ ಬಿಡುಗಡೆ ಆಗಿದೆ. ಟ್ರೇಲರ್ ನೋಡಿ ಅಶ್ವಿನಿ ಪುನೀತ್ ರಾಜ್ಕುಮಾರ್ (Ashwini Puneeth Rajkumar) ಅವರು ಇಷ್ಟಪಟ್ಟಿದ್ದಾರೆ. ಅಂದಕಾಲತ್ತಿಲ್ ಇಂದ ಕಾಲತ್ತಿಲ್ ಹಾಡಿನಿಂದ ‘ಅವನಿರಬೇಕಿತ್ತು’ ಸಿನಿಮಾ ಗಮನ ಸೆಳೆದಿದೆ.‘ಓ ಹೃದಯ’ ಸಾಂಗ್ನಿಂದ ಸಿನಿಮಾದ ಮೇಲಿನ ನಿರೀಕ್ಷೆ ಜಾಸ್ತಿ ಆಗಿದೆ. ಟ್ರೇಲರ್ (Avanirabekittu Trailer) ನೋಡಿದ ಪ್ರೇಕ್ಷಕರು ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ. ಆರ್ಗ್ಯಾನಿಕ್ ಆಗಿ ಉತ್ತಮ ವೀವ್ಸ್ ಪಡೆದುಕೊಳ್ಳುತ್ತಿದೆ. ಇದು ಚಿತ್ರತಂಡದ ಭರವಸೆಯನ್ನು ಹೆಚ್ಚು ಮಾಡಿದೆ. ‘ಅವನಿರಬೇಕಿತ್ತು’ ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ..
ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವ ಇರುವ ಅಶೋಕ್ ಸಾಮ್ರಾಟ್ ಅವರು ‘ಅವನಿರಬೇಕಿತ್ತು’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.ಇದು ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ಅವರ ಸ್ನೇಹಿತ ಮುರಳಿ ಬಿ.ಟಿ. ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಹಂಸಲೇಖ ಅವರ ಶಿಷ್ಯ ಲೋಕಿ ತವಸ್ಯಾ ಅವರು ಸಂಗೀತ ಸಂಯೋಜಿಸಿದ್ದಾರೆ.
ದೇವರಾಜ್ ಪೂಜಾರಿ ಅವರು ಛಾಯಾಗ್ರಹಣ ಮಾಡಿದ್ದಾರೆ. ತಾಂತ್ರಿಕವಾಗಿ ನಿಪುಣರ ತಂಡವನ್ನ ಕಟ್ಟಿಕೊಂಡಿರುವ ಅಶೋಕ್ ಸಾಮ್ರಾಟ್ ಅವರು ಗುಣ ಮಟ್ಟದ ಮೇಕಿಂಗ್ ಮೂಲಕ ಜನರನ್ನು ಸೆಳೆಯಲಿದ್ದಾರೆ ಎಂಬುದಕ್ಕೆ ಟ್ರೇಲರ್ ಸಾಕ್ಷಿಯಾಗಿದೆ. ಈ ಸಿನಿಮಾದಲ್ಲಿ ನಾಯಕನಾಗಿ ಭರತ್ ನಟಿಸಿದ್ದಾರೆ. ನಾಯಕಿ ಪಾತ್ರದಲ್ಲಿ ಸೌಮ್ಯಾ ಅಭಿನಯಿಸಿದ್ದಾರೆ.
‘ಅವನಿರಬೇಕಿತ್ತು’ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿರುವ ಭರತ್ ಮತ್ತು ಸೌಮ್ಯಾ ಅವರು ಹೊಸ ಪ್ರತಿಭೆಗಳು. ಇವರ ಅಭಿನಯ ಹಾಗೂ ಡ್ಯಾನ್ಸ್ ಝಲರ್ ಟ್ರೇಲರ್ನಲ್ಲಿ ಕಾಣಿಸಿದೆ. ಪ್ರಶಾಂತ್ ಸಿದ್ದಿ, ಹಿರಿಯ ನಟಿ ಲಕ್ಷ್ಮೀ ದೇವಮ್ಮ, ಕಿರಣ್ ನಾಯಕ್ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ಪಾತ್ರ ಮಾಡಿದ್ದಾರೆ. ನಿರ್ಮಾಪಕ ಮುರಳಿ, ನಿರ್ದೇಶಕ ಅಶೋಕ್ ಕೂಡ ಹೊಸಬರು.
ಇದನ್ನೂ ಓದಿ: ಯುವರಾಜ್ ಕುಮಾರ್ ‘ಎಕ್ಕ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್
ಜೂನ್ 27ರಂದು ‘ಅವನಿರಬೇಕಿತ್ತು’ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಚಿತ್ರತಂಡ ಈಗ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ‘ಕೆ.ಆರ್.ಜಿ. ಸ್ಟುಡಿಯೋಸ್’ ಈ ಸಿನಿಮಾವನ್ನು ವಿತರಣೆ ಮಾಡಲು ಮುಂದಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.