Hondisi Bareyiri Trailer: ‘ಹೊಂದಿಸಿ ಬರೆಯಿರಿ’ ಚಿತ್ರಕ್ಕೆ ಶುಭಕೋರಿದ ಅಶ್ವಿನಿ ಪುನೀತ್​; ಗಮನ ಸೆಳೆಯುತ್ತಿದೆ ಟ್ರೇಲರ್​

Ashwini Puneeth Rajkumar | Hondisi Bareyiri Movie: ಫೆಬ್ರವರಿ 10ರಂದು ‘ಹೊಂದಿಸಿ ಬರೆಯಿರಿ’ ಚಿತ್ರ ಬಿಡುಗಡೆ ಆಗಲಿದೆ. ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ಇದರ ಟ್ರೇಲರ್​ ಬಿಡುಗಡೆ ಮಾಡಿದ್ದಾರೆ.

Hondisi Bareyiri Trailer: ‘ಹೊಂದಿಸಿ ಬರೆಯಿರಿ’ ಚಿತ್ರಕ್ಕೆ ಶುಭಕೋರಿದ ಅಶ್ವಿನಿ ಪುನೀತ್​; ಗಮನ ಸೆಳೆಯುತ್ತಿದೆ ಟ್ರೇಲರ್​
‘ಹೊಂದಿಸಿ ಬರೆಯಿರಿ’ ಟ್ರೇಲರ್ ಬಿಡುಗಡೆ
Follow us
ಮದನ್​ ಕುಮಾರ್​
|

Updated on: Feb 01, 2023 | 3:10 PM

ಡಿಫರೆಂಟ್​ ಶೀರ್ಷಿಕೆಯಿಂದ ಹೊಂದಿಸಿ ಬರೆಯಿರಿ’ ಸಿನಿಮಾ (Hondisi Bareyiri Movie) ಗಮನ ಸೆಳೆಯುತ್ತಿದೆ. ಪ್ರಚಾರದಲ್ಲೂ ಭಿನ್ನ ಮಾರ್ಗಗಳನ್ನೇ ಈ ತಂಡ ಅನುಸರಿಸುತ್ತಿದೆ. ಈ ಸಿನಿಮಾದಲ್ಲಿ ಪ್ರವೀಣ್ ತೇಜ್, ಭಾವನಾ ರಾವ್, ಸಂಯುಕ್ತಾ ಹೊರನಾಡು, ಐಶಾನಿ ಶೆಟ್ಟಿ (Aishani Shetty), ನವೀನ್ ಶಂಕರ್, ಶ್ರೀ ಮಹದೇವ್, ಅರ್ಚನಾ ಜೋಯಿಸ್, ಅನಿರುದ್ಧ್ ಆಚಾರ್ಯ ಮುಂತಾದವರು ನಟಿಸಿದ್ದಾರೆ. ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನ ಮಾಡಿದ್ದಾರೆ. ‘ಹೊಂದಿಸಿ ಬರೆಯಿರಿ’ ಚಿತ್ರ ಫೆಬ್ರವರಿ 10ರಂದು ರಿಲೀಸ್​ ಆಗಲಿದೆ. ಈಗ ಟ್ರೇಲರ್ ಬಿಡುಗಡೆಯಾಗಿದೆ. ಅಶ್ವಿನಿ ಪುನೀತ್ ರಾಜ್​ಕುಮಾರ್ (Ashwini Puneeth Rajkumar) ಅವರು ಟ್ರೇಲರ್​ ಅನಾವರಣ ಮಾಡಿ ಶುಭ ಕೋರಿದ್ದಾರೆ. ಶಾಂತಿ ಸಾಗರ್ ಹೆಚ್.ಜಿ. ಛಾಯಾಗ್ರಹಣ, ಜೋ ಕೋಸ್ಟ ಸಂಗೀತ ನಿರ್ದೇಶನ, ಕೆ. ಕಲ್ಯಾಣ್, ಹೃದಯಶಿವ, ರಾಮೇನಹಳ್ಳಿ ಜಗನ್ನಾಥ್ ಸಾಹಿತ್ಯ ಈ ಚಿತ್ರಕ್ಕಿದೆ. ನಿರ್ದೇಶಕರ ಜೊತೆಗೂಡಿ ಮಾಸ್ತಿ, ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ.

‘ಸಂಡೇ ಸಿನಿಮಾಸ್’ ಬ್ಯಾನರ್ ಮೂಲಕ ರಾಮೇನಹಳ್ಳಿ ಜಗನ್ನಾಥ್ ಹಾಗೂ ಸ್ನೇಹಿತರು ಸೇರಿ ‘ಹೊಂದಿಸಿ ಬರೆಯಿರಿ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ‘ಪರಿಸ್ಥಿತಿಗಳೊಂದಿಗೆ ಹೊಂದಿಕೊಂಡು ಹೋಗಬೇಕು, ಬದುಕು ಬಂದಂತೆ ಸ್ವೀಕರಿಸಿ ಅನ್ನೋದು ಈ ಚಿತ್ರದ ಆಶಯ. ಐದು ಜನ ಸ್ನೇಹಿತರ 12 ವರ್ಷದ ಜರ್ನಿ ಈ ಚಿತ್ರದಲ್ಲಿದೆ’ ಎಂದಿದ್ದಾರೆ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್.

ಇದನ್ನೂ ಓದಿ: Aishani Shetty: ಬದಲಾಯಿತು ಐಶಾನಿ ಶೆಟ್ಟಿ ಹೆಸರು ಹಾಗೂ ಲುಕ್​​; ಕಾರಣ ಏನು?

ಇದನ್ನೂ ಓದಿ
Image
ಅಶ್ವಿನಿ, ತಾರಾ ಅನುರಾಧಾ, ವಿಜಯ್​ ಕಿರಗಂದೂರು ಅವರಿಗೆ ‘ರಾಘವೇಂದ್ರ ಚಿತ್ರವಾಣಿ’ ವಿಶೇಷ ಪ್ರಶಸ್ತಿ
Image
ದೊಡ್ಡ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದ ಅಶ್ವಿನಿ ಪುನೀತ್​ ರಾಜ್​ಕುಮಾರ್
Image
‘ನಿಮ್ಮ ಬೆಂಬಲದ ಶಕ್ತಿಯೇ ನನಗೆ ದಾರಿ ಮಾಡಿಕೊಟ್ಟಿದೆ’; ಅಶ್ವಿನಿ ಪುನೀತ್​ ರಾಜ್​ಕುಮಾರ್ ಭಾವುಕ ಪತ್ರ  
Image
Puneetha Parva: ಅಪ್ಪು ನೆನೆದು ವೇದಿಕೆ ಮೇಲೆ ಕಣ್ಣೀರು ಹಾಕಿದ ಅಶ್ವಿನಿ ಪುನೀತ್​ ರಾಜ್​ಕುಮಾರ್​

ನಟಿ ಭಾವನಾ ರಾವ್​ ಅವರು ಭೂಮಿಕಾ ಎಂಬ ಪಾತ್ರ ಮಾಡಿದ್ದಾರೆ. ‘ಈ ಕಥೆ ಕೇಳಿದಾಗ ಸಿಂಪಲ್ ಆದರೂ ಇದರಲ್ಲಿ ಬರುವ ಪಾತ್ರಗಳು ತುಂಬಾ ಕಾಂಪ್ಲಿಕೇಟ್ ಎನಿಸಿತು. ನಮ್ಮ ಜೀವನದ ಹಾಗೆ ಕೆಲವು ಸನ್ನಿವೇಶಗಳಿಂದ ನಾವು ಬದುಕನ್ನು ಕಾಂಪ್ಲಿಕೇಟ್ ಮಾಡಿಕೊಳ್ಳುತ್ತೇವೆ. ಈ ಸಿನಿಮಾ ತುಂಬಾ ಜನಕ್ಕೆ ಕನೆಕ್ಟ್ ಆಗುತ್ತೆ’ ಎಂಬುದು ಭಾವನಾ ರಾವ್​ ಮಾತುಗಳು. ಶ್ರೀಮಹದೇವ್​ ಅವರು ಈ ಸಿನಿಮಾದಲ್ಲಿ ಹಲವು ಗೆಟಪ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಅವರಿಗೆ ಈ ಚಿತ್ರ ಆಪ್ತ ಎನಿಸಿದೆ. ‘ಮಾತಿನಲ್ಲಿ ಹೇಳೋಕಾಗಲ್ಲ. ಅಷ್ಟು ಆಳವಾಗಿದೆ ಈ ಚಿತ್ರದ ಕಾನ್ಸೆಪ್ಟ್’ ಎಂದಿದ್ದಾರೆ ಶ್ರೀಮಹದೇವ್​.

‘ಹೊಂದಿಸಿ ಬರೆಯಿರಿ’ ಸಿನಿಮಾದಲ್ಲಿ ಐಶಾನಿ ಶೆಟ್ಟಿ ಅವರು ಸನಿಹ ಎಂಬ ಪಾತ್ರ ಮಾಡಿದ್ದಾರೆ. ‘ಮೊದಲ ಸಿನಿಮಾದಲ್ಲೇ ನಿರ್ದೇಶಕರು ಇಷ್ಟು ಒಳ್ಳೆಯ ಸಬ್ಜೆಕ್ಟ್ ಆಯ್ಕೆ ಮಾಡಿಕೊಂಡಿದ್ದಾರೆ. ನಾನು ಈ ಸಿನಿಮಾದ ಭಾಗವಾಗಿರೋದಕ್ಕೆ ತುಂಬಾ ಹೆಮ್ಮೆಯಿದೆ’ ಎಂದು ಐಶಾನಿ ಶೆಟ್ಟಿ ಹೇಳಿದ್ದಾರೆ. ಪಲ್ಲವಿ ಎಂಬ ಪಾತ್ರಕ್ಕೆ ಅರ್ಚನಾ ಜೋಯಿಸ್​ ಬಣ್ಣ ಹಚ್ಚಿದ್ದಾರೆ. ‘ಇದು ತುಂಬಾ ಪ್ರಬುದ್ಧತೆ ಹೊಂದಿರುವ ಪಾತ್ರ. ಸಿನಿಮಾ ನೋಡಿ ಹೋಗುವಾಗ ಪಲ್ಲವಿ ಎಲ್ಲರನ್ನೂ ಕಾಡುತ್ತಾಳೆ’ ಎಂದು ಅವರು ಹೇಳಿದ್ದಾರೆ. ಚಿತ್ರದ ಆಶಯವನ್ನು ಇಷ್ಟಪಟ್ಟು ನವೀನ್​​ ಶಂಕರ್​ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅರ್ಚನಾ ಕೊಟ್ಟಿಗೆ, ಅನಿರುದ್ದ್ ಆಚಾರ್ಯ ಕೂಡ ಗಮನಾರ್ಹ ಪಾತ್ರಗಳಲ್ಲಿ ನಟಿಸಿದ ಖುಷಿಯಲ್ಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮಾಜಿ ಗೃಹ ಸಚಿವನಾದ ತನ್ನನ್ನು ಠಾಣೆಯೊಳಗೆ ಬರಗೊಡಲಿಲ್ಲ: ಅಶೋಕ
ಮಾಜಿ ಗೃಹ ಸಚಿವನಾದ ತನ್ನನ್ನು ಠಾಣೆಯೊಳಗೆ ಬರಗೊಡಲಿಲ್ಲ: ಅಶೋಕ
ನೀರಾಹಾರವಿಲ್ಲದೆ ರವಿ ದೈಹಿಕ ಮತ್ತು ಮಾನಸಿಕವಾಗಿ ವಿಪರೀತ ಬಳಲಿದ್ದಾರೆ: ವಕೀಲ
ನೀರಾಹಾರವಿಲ್ಲದೆ ರವಿ ದೈಹಿಕ ಮತ್ತು ಮಾನಸಿಕವಾಗಿ ವಿಪರೀತ ಬಳಲಿದ್ದಾರೆ: ವಕೀಲ
ನಾವು ಠಾಣೆಗೆ ಹೋಗಿದ್ದನ್ನು ಪ್ರಶ್ನಿಸಲು ಶಿವಕುಮಾರ್ ಯಾರು? ಅಶೋಕ
ನಾವು ಠಾಣೆಗೆ ಹೋಗಿದ್ದನ್ನು ಪ್ರಶ್ನಿಸಲು ಶಿವಕುಮಾರ್ ಯಾರು? ಅಶೋಕ
ರವಿ ತಲೆಗೆ ಗಾಯ ಯಾಕೆ, ಹಲ್ಲೆ ಮಾಡಿದ್ಯಾರು? ಪರಮೇಶ್ವರ್ ಹೇಳಿದ್ದೇನು ನೋಡಿ
ರವಿ ತಲೆಗೆ ಗಾಯ ಯಾಕೆ, ಹಲ್ಲೆ ಮಾಡಿದ್ಯಾರು? ಪರಮೇಶ್ವರ್ ಹೇಳಿದ್ದೇನು ನೋಡಿ
ರವಿಯವರನ್ನು ಇವತ್ತು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ: ಪರಮೇಶ್ವರ್
ರವಿಯವರನ್ನು ಇವತ್ತು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ: ಪರಮೇಶ್ವರ್
ಅಶ್ಲೀಲ ಪದ ಬಳಕೆ: ಸದನದಲ್ಲಿ ನಡೆದಿದ್ದೇನು? ಹೆಬ್ಬಾಳ್ಕರ್​ ಹೇಳಿದ್ದಿಷ್ಟು
ಅಶ್ಲೀಲ ಪದ ಬಳಕೆ: ಸದನದಲ್ಲಿ ನಡೆದಿದ್ದೇನು? ಹೆಬ್ಬಾಳ್ಕರ್​ ಹೇಳಿದ್ದಿಷ್ಟು
ಚಿಕ್ಕಮಗಳೂರಲ್ಲಿ ಕೊಳಕು ಬಾಯಿ ರವಿ ಬಿಟ್ಟರೆ ಬೇರೆಲ್ಲ ಸಂಸ್ಕಾರವಂತರು:ಡಿಕೆಶಿ
ಚಿಕ್ಕಮಗಳೂರಲ್ಲಿ ಕೊಳಕು ಬಾಯಿ ರವಿ ಬಿಟ್ಟರೆ ಬೇರೆಲ್ಲ ಸಂಸ್ಕಾರವಂತರು:ಡಿಕೆಶಿ
ಇದೇನು ತಾಲಿಬಾಲಿಗಳ ಸರ್ಕಾರವಾ? ದೌರ್ಜನ್ಯ ನಡೆಯಲ್ಲ: ಆರ್ ಅಶೋಕ
ಇದೇನು ತಾಲಿಬಾಲಿಗಳ ಸರ್ಕಾರವಾ? ದೌರ್ಜನ್ಯ ನಡೆಯಲ್ಲ: ಆರ್ ಅಶೋಕ
"ನನ್ನ ಕೊಲೆ ಮಾಡುವ ಸಂಚು ನಡೆಸಿದ್ದೀರಿ" ಪೊಲೀಸರ ವಿರುದ್ಧ ಸಿಟಿ ರವಿ ಗರಂ
ಎಲ್​ಪಿಜಿ- ಸಿಎನ್​ಜಿ ಟ್ರಕ್ ನಡುವೆ ಅಪಘಾತ, ಬೆಂಕಿ, ನಾಲ್ವರು ಸಜೀವ ದಹನ
ಎಲ್​ಪಿಜಿ- ಸಿಎನ್​ಜಿ ಟ್ರಕ್ ನಡುವೆ ಅಪಘಾತ, ಬೆಂಕಿ, ನಾಲ್ವರು ಸಜೀವ ದಹನ