ಆನ್​ಲೈನ್​ನಲ್ಲಿ ಧೂಳೆಬ್ಬಿಸಿದ ಅವನೇ ಶ್ರೀಮನ್ನಾರಾಯಣ, ಬಿಸಿ ದೋಸೆಯಂತೆ ಖರ್ಚಾದ್ವು ಟಿಕೆಟ್ಸ್

ಈ ವಾರ ಅವನದ್ದೇ ಹವಾ. ಅವನ ಮುಂದೆ ಮತ್ಯಾರು ನಿಲ್ಲೋಕೆ ಆಗೋದೆ ಇಲ್ಲ. ಎಲ್ಲಿ ನೋಡಿದ್ರು ಅವನ ಬಗ್ಗೆಯೇ ಮಾತು. ಅವನದ್ದೇ ಕ್ರೇಜ್‌. ಅಷ್ಟಕ್ಕೂ ಯಾರವನು? ಅವನೇ ಶ್ರೀಮನ್ನಾರಾಯಣ. ಸ್ಯಾಂಡಲ್‌ವುಡ್‌ನಲ್ಲಿ ತಯರಾಗಿರೋ ಬಹುನೀರಿಕ್ಷಿತ ಸಿನಿಮಾ. ಐದು ಭಾಷೆಯಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾ. ಟ್ರೇಲರ್, ಸಾಂಗ್ಸ್‌ ರಿಲೀಸ್ ಆದ್ರೂ ಮೇಲಂತೂ ಈ ಸಿನಿಮಾದ ಕ್ರೇಜ್ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಸೋಷಿಯಲ್ ಮೀಡಿಯಾದಲ್ಲಂತು ಅವನೇ ನಾರಾಯಣನದ್ದೇ ಹವಾ. ಅದ್ರಲ್ಲೂ ಶಾನ್ವಿ ಶ್ರೀವತ್ಸವ್, ರಕ್ಷಿತ್ ಶೆಟ್ಟಿ ಹಾಕಿರುವ ಹ್ಯಾಂಡ್ಸಪ್ ಹಾಡಿನ ಚಾಲೆಂಜ್ ವೈರಲ್ […]

ಆನ್​ಲೈನ್​ನಲ್ಲಿ ಧೂಳೆಬ್ಬಿಸಿದ ಅವನೇ ಶ್ರೀಮನ್ನಾರಾಯಣ, ಬಿಸಿ ದೋಸೆಯಂತೆ ಖರ್ಚಾದ್ವು ಟಿಕೆಟ್ಸ್
Edited By:

Updated on: Nov 24, 2020 | 7:54 AM

ಈ ವಾರ ಅವನದ್ದೇ ಹವಾ. ಅವನ ಮುಂದೆ ಮತ್ಯಾರು ನಿಲ್ಲೋಕೆ ಆಗೋದೆ ಇಲ್ಲ. ಎಲ್ಲಿ ನೋಡಿದ್ರು ಅವನ ಬಗ್ಗೆಯೇ ಮಾತು. ಅವನದ್ದೇ ಕ್ರೇಜ್‌. ಅಷ್ಟಕ್ಕೂ ಯಾರವನು?

ಅವನೇ ಶ್ರೀಮನ್ನಾರಾಯಣ. ಸ್ಯಾಂಡಲ್‌ವುಡ್‌ನಲ್ಲಿ ತಯರಾಗಿರೋ ಬಹುನೀರಿಕ್ಷಿತ ಸಿನಿಮಾ. ಐದು ಭಾಷೆಯಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾ. ಟ್ರೇಲರ್, ಸಾಂಗ್ಸ್‌ ರಿಲೀಸ್ ಆದ್ರೂ ಮೇಲಂತೂ ಈ ಸಿನಿಮಾದ ಕ್ರೇಜ್ ಸಿಕ್ಕಾಪಟ್ಟೆ ಹೆಚ್ಚಾಗಿದೆ.

ಸೋಷಿಯಲ್ ಮೀಡಿಯಾದಲ್ಲಂತು ಅವನೇ ನಾರಾಯಣನದ್ದೇ ಹವಾ. ಅದ್ರಲ್ಲೂ ಶಾನ್ವಿ ಶ್ರೀವತ್ಸವ್, ರಕ್ಷಿತ್ ಶೆಟ್ಟಿ ಹಾಕಿರುವ ಹ್ಯಾಂಡ್ಸಪ್ ಹಾಡಿನ ಚಾಲೆಂಜ್ ವೈರಲ್ ಅಗಿದೆ. ಚಾಲೆಂಜ್ ಸ್ವೀಕರಿಸಿದ ನಟಿ ಸಂಯುಕ್ತ ಹೆಗ್ಡೆ ವಿಭಿನ್ನವಾಗಿ ಗಮನ ಸೆಳೆದಿದ್ದಾರೆ.

ಇನ್ನೂ ನಾಲ್ಕು ದಿನಕ್ಕೂ ಮೊದಲೇ ಸಿನಿಮಾದ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಆನ್‌ಲೈನ್‌ನಲ್ಲಿ ವೇಗವಾಗಿ ಟಿಕೆಟ್ ಸೋಲ್ಡ್ ಔಟ್ ಆಗ್ತಿವೆ. ಈಗಾಗಲೇ ಸಿನಿಮಾದ ನಾಲ್ಕು ದಿನದ ಟಿಕೆಟ್​ಗಳು ಬಹುತೇಕ ಚಿತ್ರಮಂದಿರದಲ್ಲಿ ಸೋಲ್ಟ್ ಔಟ್ ಕೂಡ ಆಗಿದೆ.

ಕೆ.ಜಿ.ಎಫ್ ನಂತ್ರ ಭಾರತದಾದ್ಯಂತ ದೊಡ್ಡ ಮಟ್ಟದಲ್ಲಿ ತೆರೆಗೆ ಬರ್ತಿರೋ ಸಿನಿಮಾ ಅಂದ್ರೆ ಅವನೇ‌ ಶ್ರೀಮನ್ನಾರಾಯಣ. ಸದ್ಯ ಶ್ರೀಮನ್ನಾರಾಯಣ ಡಿಸೆಂಬರ್ 27ಕ್ಕೆ ಕನ್ನಡದಲ್ಲಿ ದರ್ಶನ ನೀಡಲಿದ್ದು, ನಂತ್ರ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಜನವರಿಯಲ್ಲಿ ರಿಲೀಸ್ ಆಗಲಿದೆ. ಒಟ್ನಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಿರುವ ಸಿನಿಮಾವನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿರುವುದು ಮಾತ್ರ ಸುಳ್ಳಲ್ಲ.

Published On - 9:28 am, Tue, 24 December 19