‘ಅಘೋರ’ ಚಿತ್ರದಲ್ಲಿ ನಾಗೇಂದ್ರ ಪ್ರಸಾದ್​ ಮ್ಯೂಸಿಕ್​ ಮೋಡಿ; ಗಮನ ಸೆಳೆದ ಪಬ್​ ಸಾಂಗ್​​

‘ಅಘೋರ’ ಒಂದು ಹಾರರ್​ ಸಿನಿಮಾ. ಈ ಚಿತ್ರದಲ್ಲಿ ಇರುವ ಒಂದೇ ಒಂದು ಹಾಡಿಗೆ ನಾಗೇಂದ್ರ ಪ್ರಸಾದ್​ ಅವರು ಸಂಗೀತ ನಿರ್ದೇಶನ ಮಾಡಿ, ಸಾಹಿತ್ಯ ಬರೆದಿದ್ದಾರೆ.

‘ಅಘೋರ’ ಚಿತ್ರದಲ್ಲಿ ನಾಗೇಂದ್ರ ಪ್ರಸಾದ್​ ಮ್ಯೂಸಿಕ್​ ಮೋಡಿ; ಗಮನ ಸೆಳೆದ ಪಬ್​ ಸಾಂಗ್​​
ಪುನೀತ್​ ಗೌಡ, ರಚನಾ ದಶರತ್​, ನಾಗೇಂದ್ರ ಪ್ರಸಾದ್​
Follow us
TV9 Web
| Updated By: ಮದನ್​ ಕುಮಾರ್​

Updated on: Mar 02, 2022 | 9:43 AM

ಹಿರಿಯ ನಟ ಅವಿನಾಶ್​ (Actor Avinash) ಅವರು ಅಘೋರಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಅಘೋರ’ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಮಾರ್ಚ್ 4ರಂದು ರಾಜ್ಯದ್ಯಂತ ಈ ಚಿತ್ರ ರಿಲೀಸ್​ ಆಗಲಿದೆ. ಅಶೋಕ್​, ಪುನೀತ್​ ಗೌಡ, ರಚನಾ ದಶರತ್​, ದ್ರವ್ಯ ಶೆಟ್ಟಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ನಿರ್ಮಾಣದ ಜೊತೆಗೆ ಮುಖ್ಯಪಾತ್ರದಲ್ಲಿಯೂ ಪುನೀತ್​ ಗೌಡ ಅಭಿನಯಿಸಿದ್ದಾರೆ. ವಿಶೇಷ ಎಂದರೆ ಇದು ಹಾರರ್​ ಸಿನಿಮಾ. ಈ ಚಿತ್ರದಲ್ಲಿ ಇರುವ ಒಂದೇ ಒಂದು ಹಾಡಿಗೆ ವಿ. ನಾಗೇಂದ್ರ ಪ್ರಸಾದ್​ (V Nagendra Prasad) ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಸಾಹಿತ್ಯ ಕೂಡ ಅವರದ್ದೇ. ಮುರಳೀಧರನ್​ ಮತ್ತು ಪ್ರವೀನ್​ ಪೌಲ್​ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ. ‘ಅಘೋರ’ (Aghora Kannada Movie) ಚಿತ್ರದ ಟ್ರೇಲರ್​ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ‘ಒಳ್ಳೆಯ ತಂತ್ರಜ್ಞರು ನಮ್ಮ ಸಿನಿಮಾಗೆ ಕೆಲಸ ಮಾಡಿದ್ದಾರೆ. ಪಬ್​ ಸಾಂಗ್​ ಆಗಿದ್ದರೂ ಕೂಡ ಅದರಲ್ಲಿ ಒಂದು ಮೆಸೇಜ್​ ಇರಬೇಕು ಎಂಬ ಕಾರಣಕ್ಕೆ ಬಹಳ ಸಮಯ ತೆಗೆದುಕೊಂಡು ನಾಗೇಂದ್ರ ಪ್ರಸಾದ್​ ಅವರು ಈ ಹಾಡನ್ನು ಮಾಡಿಕೊಟ್ಟಿದ್ದಾರೆ. ನಮ್ಮ ಇಡೀ ತಂಡದಲ್ಲಿ ಪಾಸಿಟಿವ್​ ವೈಬ್​ ಇದೆ. ಅದರಿಂದ ನಾವು ಗೆಲ್ಲುತ್ತೇವೆ ಎಂಬ ಭರವಸೆ ಇದೆ. ಈ ಚಿತ್ರದ ಟ್ರೇಲರ್ ನೋಡಿ ಶಿವರಾಜ್​ಕುಮಾರ್​ ಅವರು ಕೂಡ ಮೆಚ್ಚಿಕೊಂಡಿದ್ದಾರೆ’ ಎಂದಿದ್ದಾರೆ ಪುನೀತ್​ ಗೌಡ.

ಧಾರಾವಾಹಿಯಲ್ಲಿ ನಟಿಸಿ ಫೇಮಸ್​ ಆಗಿರುವ ರಚನಾ ದಶರತ್​ ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಆ ಪೈಕಿ ‘ಅಘೋರ’ ಸಿನಿಮಾ ಕೂಡ ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ಅವರು ಭೂಮಿ ಎಂಬ ಪಾತ್ರವನ್ನು ಮಾಡಿದ್ದಾರೆ. ಆ ಪಾತ್ರದ ಕುರಿತು ಅವರು ಒಂದಷ್ಟು ವಿವರಣೆ ನೀಡಿದ್ದಾರೆ.

‘ಈ ಸಿನಿಮಾ ಬಿಡುಗಡೆ ಆಗುತ್ತಿರುವುದಕ್ಕೆ ನನಗೆ ತುಂಬ ಖುಷಿ ಇದೆ. ಭೂಮಿ ಎಂಬ ಪಾತ್ರ ನನ್ನದು. ಭೂಮಿ ತುಂಬ ಸಹನೆಯಿಂದ ಇರುತ್ತಾಳೆ. ಆದರೆ ಅವಳನ್ನು ಕೆಣಕಿದಾಗ ತಿರುಗಿ ಬೀಳುತ್ತಾಳೆ. ನನ್ನ ಪಾತ್ರಕ್ಕೆ ಎರಡು ಶೇಡ್​ ಇದೆ. ಟ್ರೇಲರ್​ ಮತ್ತು ಸಾಂಗ್​ಗೆ ಒಳ್ಳೆಯ ರೆಸ್ಪಾನ್ಸ್​ ಸಿಕ್ಕಿದೆ. ಸಿನಿಮಾ ನೋಡಿದ ಬಳಿಕ ಪ್ರೇಕ್ಷಕರು ಏನು ಹೇಳುತ್ತಾರೆ ಎಂಬುದನ್ನು ತಿಳಿಯುವ ಕಾತರ ಮೂಡಿದೆ. ಅದೇಕೋ ಗೊತ್ತಿಲ್ಲ, ಈ ಸಂದರ್ಭದಲ್ಲಿ ನಾನು ಹೆಚ್ಚು ನರ್ವಸ್​ ಆಗಿದ್ದೇನೆ. ಈ ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ಹೆಚ್ಚು ಸ್ಕೋಪ್​ ಇದೆ ಎಂಬ ಕಾರಣಕ್ಕೆ ನನಗೆ ನಿರೀಕ್ಷೆ ಜಾಸ್ತಿ ಇದೆ. ಹಾಗಾಗಿ ನಾನು ನರ್ವಸ್​ ಆಗಿರಬಹುದು’ ಎಂದಿದ್ದಾರೆ ರಚನಾ ದಶರತ್​.

‘ಈ ಸಿನಿಮಾದಲ್ಲಿ ನಟ ಅಶೋಕ್​ ಅವರು ಅಗ್ನಿ ಎಂಬ ಪಾತ್ರ ಮಾಡಿದ್ದಾರೆ. ಆ ಪಾತ್ರಕ್ಕೆ ನಾನು ಫ್ಯಾನ್​ ಆಗಿದ್ದೇನೆ. ಈ ಮಾತನ್ನು ನಾನು ಅನೇಕ ಕಡೆಗಳಲ್ಲಿ ಹೇಳಿದ್ದೇನೆ. ಅವಿನಾಶ್​ ಅವರ ಪಾತ್ರ ಕೂಡ ಚೆನ್ನಾಗಿದೆ. ಅವರ ಜೊತೆ ರಚನಾ ಕೂಡ ಚೆನ್ನಾಗಿ ಮಾಡಿದ್ದಾರೆ ಎಂಬ ಅನಿಸಿಕೆ ಪ್ರೇಕ್ಷಕರಿಗೂ ಬರುತ್ತೆ ಎಂಬ ನಂಬಿಕೆ ನನಗಿದೆ. ನಿರ್ದೇಶಕ ಪ್ರಮೋದ್​ ರಾಜ್​ ಅವರ ಶ್ರಮಕ್ಕೂ ಹೊಗಳಿಕೆ ಸಿಗಲಿದೆ’ ಎಂದು ರಚನಾ ಹೇಳಿದ್ದಾರೆ.

ಕೆಆರ್​ಜಿ ಸ್ಟುಡಿಯೋಸ್​ ಮೂಲಕ ‘ಅಘೋರ’ ಚಿತ್ರ ಬಿಡುಗಡೆ ಆಗುತ್ತಿದೆ. ‘ಇದು ಬರೀ ಹಾರರ್​ ಸಿನಿಮಾ ಅಲ್ಲ. ಇದರಲ್ಲಿ ಲವ್​, ಸೆಂಟಿಮೆಂಟ್​ ಮತ್ತು ವಿಜ್ಞಾನದ ವಿಷಯಗಳನ್ನೂ ಹೇಳಲಿದ್ದೇವೆ. ಪಂಚಭೂತಗಳನ್ನು ಪ್ರತಿನಿಧಿಸುವಂತಹ ಹೆಸರುಗಳನ್ನು ಈ ಚಿತ್ರದ ಪಾತ್ರಗಳಿಗೆ ಇಡಲಾಗಿದೆ. ಅದಕ್ಕೆ ಮುಖ್ಯ ಕಾರಣ ಕೂಡ ಇದೆ’ ಎಂದು ಚಿತ್ರತಂಡ ಹೇಳಿಕೊಂಡಿದೆ.

ಇದನ್ನೂ ಓದಿ:

ಬಿಡುಗಡೆಗೆ ಸಿದ್ಧವಾಯ್ತು ‘ಅಘೋರ’ ಸಿನಿಮಾ; ಅಘೋರಿ ಪಾತ್ರದಲ್ಲಿ ಹಿರಿಯ ನಟ ಅವಿನಾಶ್​

‘ಜೇಮ್ಸ್​’ ಚಿತ್ರದಲ್ಲಿ ಪುನೀತ್​ಗೆ ಡಬ್​ ಮಾಡುವಾಗ ಶಿವಣ್ಣ ಎಮೋಷನಲ್​ ಆಗಿದ್ದರು: ನಿರ್ದೇಶಕ ಚೇತನ್​

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ