ಯಾವುದೇ ಸೆಲೆಬ್ರಿಟಿಗಳು ತಮ್ಮ ಮಕ್ಕಳಿಗೆ ಹೆಸರಿಟ್ಟಾಗ ಆ ಹೆಸರಿನ ಅರ್ಥವೇನು ಎನ್ನುವುದನ್ನು ಫ್ಯಾನ್ಸ್ ಹುಡುಕುತ್ತಾರೆ. ಸೆಲೆಬ್ರಿಟಿಗಳೂ ಅಷ್ಟೇ ಪ್ರಚಲಿತದಲ್ಲಿರುವ ಹೆಸರನ್ನು ಮಕ್ಕಳಿಗೆ ಇಡಲು ಬಯಸುವುದಿಲ್ಲ. ಯಾರೂ ಕೇಳದೇ ಇರುವ ಹೆಸರನ್ನು ಹುಡುಕಿ ಇಡುತ್ತಾರೆ. ಹೀಗಾಗಿ, ಈ ಸಂದರ್ಭದಲ್ಲಿ ಫ್ಯಾನ್ಸ್ ಆ ಶಬ್ದ ಅರ್ಥವೇನು ಎಂಬುದಕ್ಕೆ ಹುಡುಕಾಡುತ್ತಾರೆ. ಯಶ್ (Yash) ಹಾಗೂ ರಾಧಿಕಾ ಪಂಡಿತ್ ಮಗಳಿಗೆ ಆಯ್ರಾ (Ayra) ಎಂದು ಹೆಸರಿಟ್ಟಾಗ ಜನರು ಗೂಗಲ್ನಲ್ಲಿ ಆ ಹೆಸರಿನ ಅರ್ಥ ಹುಡುಕಿದ್ದರು. ಈಗ ನಿಖಿಲ್ ಕುಮಾರ್ ಹಾಗೂ ರೇವತಿ ಮಗುವಿನ ಸರದಿ. ಇಂದು (ಜೂನ್ 8) ನಿಖಿಲ್ ಮಗನಿಗೆ ಅವ್ಯಾನ್ ದೇವ್ (Avyan Dev) ಎಂದು ನಾಮಕರಣ ಮಾಡಲಾಗಿದೆ. ಇದರ ಅರ್ಥಕ್ಕಾಗಿ ಫ್ಯಾನ್ಸ್ ಹುಡುಕಾಡುತ್ತಿದ್ದಾರೆ.
ನಟ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ದಂಪತಿಗೆ 2021ರ ಸೆಪ್ಟೆಂಬರ್ 24ರಂದು ಗಂಡು ಮಗು ಜನಿಸಿತು. ಸೋಶಿಯಲ್ ಮೀಡಿಯಾದಲ್ಲಿ ನಿಖಿಲ್ ಈ ಬಗ್ಗೆ ಸಂತಸ ಹೊರಹಾಕಿದ್ದರು. ಇಂದು (ಜೂನ್ 8) ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ನಾಮಕರಣ ಕಾರ್ಯಕ್ರಮ ನಡೆದಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಬಹುತೇಕ ಕುಟುಂಬಸ್ಥರು ಭಾಗಿಯಾಗಿದ್ದರು. ನಿಖಿನ್ ಪುತ್ರನಿಗೆ ಅವ್ಯಾನ್ ದೇವ್ ಎಂದು ಹೆಸರಿಡಲಾಗಿದೆ.
ಸಂಸ್ಕೃತ ಪಂಡಿತರ ಪ್ರಕಾರ ಅವ್ಯಾನ್ ಎಂಬುದು ದೇವರ ಹೆಸರು. ಯಾವುದೇ ದೇವರನ್ನು ಬೇಕಿದ್ದರೂ ಅವ್ಯಾನ್ ಹೆಸರಿನಿಂದ ಕರೆಯಬಹುದು. ಇದಕ್ಕೆ ಒಂದು ಮುಖ್ಯವಾದ ಅರ್ಥವಿದೆ. ಅವ್ಯಾನ್ ಎಂದರೆ ಖರ್ಚಾಗದೆ ಇರುವವನು ಅಥವಾ ನಾಶ ಇಲ್ಲದವನು ಎಂದರ್ಥ. ಮಗನಿಗೆ ಭಿನ್ನ ಹೆಸರು ಹಾಗೂ ಅರ್ಥ ಗರ್ಭಿತ ಹೆಸರನ್ನೇ ನಿಖಿಲ್ ಆಯ್ಕೆ ಮಾಡಿದ್ದಾರೆ ಅನ್ನೋದು ವಿಶೇಷ.
ಇದನ್ನೂ ಓದಿ: Avyaan Dev: ದೇವೇಗೌಡರ ಕುಟುಂಬದ ಕುಡಿಗೆ ನಾಮಕರಣ; ನಿಖಿಲ್- ರೇವತಿ ಪುತ್ರನ ಹೆಸರು ಇಲ್ಲಿದೆ ನೋಡಿ
2020ರ ಏಪ್ರಿಲ್ 17ರಂದು ನಿಖಿಲ್ ಹಾಗೂ ರೇವತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ರಾಮನಗರ ತಾಲೂಕಿನ ಕೇತಗಾನಹಳ್ಳಿ ಗ್ರಾಮದ ಹೆಚ್ಡಿಕೆ ತೋಟದ ಮನೆಯಲ್ಲಿ ನಿಖಿಲ್ ಮದುವೆ ನಡೆದಿತ್ತು..2021ರ ಸೆಪ್ಟೆಂಬರ್ 24ರಂದು ಈ ದಂಪತಿ ಪುತ್ರನನ್ನು ಬರಮಾಡಿಕೊಂಡಿದ್ದರು.
ಇತರೆ ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:33 pm, Wed, 8 June 22