AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಬೈ ಚಿತ್ರೋತ್ಸವದಲ್ಲಿ ‘ಚಿಣ್ಣರ ಚಂದ್ರ’ ಸಿನಿಮಾಕ್ಕೆ ಉತ್ತಮ ಮಕ್ಕಳ ಚಿತ್ರ ಪ್ರಶಸ್ತಿ

Baraguru Ramachandrappa: ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದ ‘ಚಿಣ್ಣರ ಚಂದ್ರ’ ಸಿನಿಮಾಕ್ಕೆ ದುಬೈ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಮಕ್ಕಳ ಸಿನಿಮಾ ಪ್ರಶಸ್ತಿ ದೊರೆತಿದೆ.

ದುಬೈ ಚಿತ್ರೋತ್ಸವದಲ್ಲಿ ‘ಚಿಣ್ಣರ ಚಂದ್ರ’ ಸಿನಿಮಾಕ್ಕೆ ಉತ್ತಮ ಮಕ್ಕಳ ಚಿತ್ರ ಪ್ರಶಸ್ತಿ
ಮಂಜುನಾಥ ಸಿ.
|

Updated on: Feb 27, 2024 | 11:05 PM

Share

ಬರಗೂರು ರಾಮಚಂದ್ರಪ್ಪ (Baraguru Ramachandrappa) ನಿರ್ದೇಶಿಸಿರುವ ‘ಚಿಣ್ಣರ ಚಂದ್ರ’ ಸಿನಿಮಾವು ದುಬೈ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಉತ್ತಮ ಮಕ್ಕಳ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಇದೇ ಸಿನಿಮಾದಲ್ಲಿ ನಟಿಸಿರುವ ಬರಗೂರು ರಾಮಚಂದ್ರಪ್ಪ ಅವರ ಮೊಮ್ಮಗ ಆಕಾಂಕ್ಷ್ ಬರಗೂರ್‌ಗೆ ಉತ್ತಮ ಬಾಲನಟ ಪ್ರಶಸ್ತಿಯೂ ದೊರಕಿದೆ. ಈ ಮುಂಚೆ ಆಕಾಂಕ್ಷ್ ಬರಗೂರ್, ಬಯಲಾಟದ ಭೀಮಣ್ಣ, ಭಾಗೀರಥಿ ಮತ್ತು ತಾಯಿ ಕಸ್ತೂರ್ ಗಾಂಧಿ ಚಿತ್ರಗಳಲ್ಲಿ ಅಭಿನಯಿಸಿದ್ದರು.

‘ಚಿಣ್ಣರ ಚಂದ್ರ’ ಸಿನಿಮಾವನ್ನು ಶ್ರೀ ಜಿ.ಎನ್. ಗೋವಿಂದರಾಜು (ರಾಜಶೇಖರ್) ನಿರ್ಮಾಣ ಮಾಡಿದ್ದರು. ‘ಚಿಣ್ಣರ ಚಂದ್ರ’ ಚಿತ್ರವು ಬರಗೂರರ ‘ಅಡಗೊಲಜ್ಜಿ’ ಎಂಬ ಕಾದಂಬರಿಯನ್ನು ಆಧರಿಸಿದೆ. ಬರಗೂರು ರಾಮಚಂದ್ರಪ್ಪ ಅವರೇ ಸಿನಿಮಾಕ್ಕೆ ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ:ಅಂತರಾಷ್ಟ್ರೀಯ ಮಕ್ಕಳ ಚಿತ್ರೋತ್ಸವಕ್ಕೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಚಿಣ್ಣರ ಚಂದ್ರ’ ಸಿನಿಮಾ ಆಯ್ಕೆ

‘ಚಿಣ್ಣರ ಚಂದ್ರ’ ಸಿನಿಮಾವು ಅಲಹಾಬಾದ್ ಮತ್ತು ಮೇಲ್ಬೋರ್ನ್ ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೂ ಆಯ್ಕೆಯಾಗಿತ್ತು. ‘ಚಿಣ್ಣರ ಚಂದ್ರ’ ಸಿನಿಮಾ ಶಿಕ್ಷಣದ ಮಹತ್ವವನ್ನು ಸಾದರಪಡಿಸುವ ಚಿತ್ರವಾಗಿದ್ದು, ಮಕ್ಕಳ ಮೂಲಕವೇ ಈ ಆಶಯವನ್ನು ಅಭಿವ್ಯಕ್ತಿಸಲಾಗಿದೆ. ಜೊತೆಗೆ ಸಮಾಜದಲ್ಲಿ ಸಮಾನತೆ, ಸೌಹಾರ್ದತೆಗಳು ನೆಲೆಸಬೇಕೆಂಬ ಸಂದೇಶವನ್ನು ನೀಡುತ್ತದೆ. ಅಡಗೊಲಜ್ಜಿಯ ಮೂಲಕ ಜನಪದ ಕತೆಗಳನ್ನು ಕೇಳುವ ಮಕ್ಕಳು ಸದಭಿರುಚಿ ಸಿನಿಮಾಗಳ ಅಗತ್ಯಕ್ಕಾಗಿ ಹಕ್ಕೊತ್ತಾಯ ಮಂಡಿಸುವ ವಿಶೇಷ ಪ್ರಸಂಗವನ್ನೂ ಈ ಚಿತ್ರವು ಒಳಗೊಂಡಿದೆ.

ತಾರಾಗಣದಲ್ಲಿ ಆಕಾಂಕ್ಷ್ ಬರಗೂರ್, ನಿಕ್ಷೇಪ್, ಷಡ್ಜ, ಈಶಾನ್, ಅಭಿನವ್‌ನಾಗ್, ಸುಂದರರಾಜು, ರೇಖಾ, ವತ್ಸಾಲಾ ಮೋಹನ್, ರಾಧಾ ರಾಮಚಂದ್ರ, ಸುಂದರರಾಜ ಅರಸು, ರಾಘವ್, ರಾಜಪ್ಪ ದಳವಾಯಿ, ಹಂಸ, ವೆಂಕಟರಾಜು, ಮೈಸೂರು ಮಂಜುಳ ಮುಂತಾದವರು ಇದ್ದಾರೆ. ನಾಗರಾಜ ಆದವಾನಿ ಛಾಯಾಗ್ರಹಣ, ಸುರೇಶ್ ಅರಸು ಸಂಕಲನ , ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಹಾಗೂ ನಟ್ರಾಜ ಶಿವು ಮತ್ತು ಪ್ರವೀಣ್ ಅವರ ಸಹ ನಿರ್ದೇಶನ “ಚಿಣ್ಣರ ಚಂದ್ರ” ಚಿತ್ರಕ್ಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು
ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ
ಗೂಳಿ ಮತ್ತು ನಾಯಿ ನಡುವೆ ಕಾದಾಟ, ಇಬ್ಬರು ಮಹಿಳೆಯರಿಗೆ ಗಾಯ
ಗೂಳಿ ಮತ್ತು ನಾಯಿ ನಡುವೆ ಕಾದಾಟ, ಇಬ್ಬರು ಮಹಿಳೆಯರಿಗೆ ಗಾಯ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ
ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​
ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​
ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!
ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!
ಸ್ನೇಹಿತನ ಹೊಸ ಕಾರು ಓಡಿಸಿದ ಸಚಿವ ಪರಮೇಶ್ವರ್!
ಸ್ನೇಹಿತನ ಹೊಸ ಕಾರು ಓಡಿಸಿದ ಸಚಿವ ಪರಮೇಶ್ವರ್!
‘ಎಲ್ರ ಕಾಲೆಳಿತದೆ ಕಾಲ’ ಕನ್ನಡ ಸಿನಿಮಾ ಬಗ್ಗೆ ಅನುರಾಗ್ ಕಶ್ಯಪ್ ಮಾತು
‘ಎಲ್ರ ಕಾಲೆಳಿತದೆ ಕಾಲ’ ಕನ್ನಡ ಸಿನಿಮಾ ಬಗ್ಗೆ ಅನುರಾಗ್ ಕಶ್ಯಪ್ ಮಾತು
ಪತಿಗೆ ನಿದ್ದೆ ಮಾತ್ರೆ ನೀಡಿ ಪ್ರಿಯಕರನೊಂದಿಗೆ ವಿವಾಹಿತೆ ಎಸ್ಕೇಪ್​?
ಪತಿಗೆ ನಿದ್ದೆ ಮಾತ್ರೆ ನೀಡಿ ಪ್ರಿಯಕರನೊಂದಿಗೆ ವಿವಾಹಿತೆ ಎಸ್ಕೇಪ್​?