ಅಂತರಾಷ್ಟ್ರೀಯ ಮಕ್ಕಳ ಚಿತ್ರೋತ್ಸವಕ್ಕೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಚಿಣ್ಣರ ಚಂದ್ರ’ ಸಿನಿಮಾ ಆಯ್ಕೆ
‘ಚಿಣ್ಣರ ಚಂದ್ರ’ ಸಿನಿಮಾ ಈಗಾಗಲೇ ಮೆಲ್ಬೋರ್ನ್ ಅಂತರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿ ಅಂತಿಮ ಹಂತ ತಲುಪಿದೆ. ಹೀಗಿರುವಾಗಲೇ ಈ ಸಿನಿಮಾ ಅಹಮದಾಬಾದ್ ಅಂತರಾಷ್ಟ್ರೀಯ ಮಕ್ಕಳ ಚಿತ್ರೋತ್ಸವಕ್ಕೆ ಆಯ್ಕೆ ಆಗಿದ್ದು ತಂಡದ ಖುಷಿ ಹೆಚ್ಚಿಸಿದೆ.
ಬರಗೂರು ರಾಮಚಂದ್ರಪ್ಪ (Baraguru Ramachandrappa) ಅವರು ಸಾಹಿತಿಯಾಗಿ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಅವರು ಹಲವು ಕಾದಂಬರಿಗಳನ್ನು ಬರೆದಿದ್ದಾರೆ. ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಅವರ ನಿರ್ದೇಶನದ ಹೊಸ ಸಿನಿಮಾ ‘ಚಿಣ್ಣರ ಚಂದ್ರ’ ಅಹಮದಾಬಾದ್ ಅಂತರಾಷ್ಟ್ರೀಯ ಮಕ್ಕಳ ಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ. ‘ಚಿಣ್ಣರ ಚಂದ್ರ’ ಇದು ಮಕ್ಕಳ ಸಿನಿಮಾ. ಈ ಚಿತ್ರ ಈಗ ಅವಾರ್ಡ್ ಗೆಲ್ಲುವ ರೇಸ್ನಲ್ಲಿದೆ.
‘ಚಿಣ್ಣರ ಚಂದ್ರ’ ಸಿನಿಮಾ ಈಗಾಗಲೇ ಮೆಲ್ಬೋರ್ನ್ ಅಂತರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿ ಅಂತಿಮ ಹಂತ ತಲುಪಿದೆ. ಹೀಗಿರುವಾಗಲೇ ಈ ಸಿನಿಮಾ ಅಹಮದಾಬಾದ್ ಅಂತರಾಷ್ಟ್ರೀಯ ಮಕ್ಕಳ ಚಿತ್ರೋತ್ಸವಕ್ಕೆ ಆಯ್ಕೆ ಆಗಿದ್ದು ತಂಡದ ಖುಷಿ ಹೆಚ್ಚಿಸಿದೆ. ಈ ವಿಚಾರವನ್ನು ಬರಗೂರು ರಾಮಚಂದ್ರಪ್ಪ ಅವರು ಹಂಚಿಕೊಂಡಿದ್ದಾರೆ.
‘ಚಿಣ್ಣರ ಚಂದ್ರ’ ಸಿನಿಮಾ ಶಿಕ್ಷಣದ ಮಹತ್ವದ ಬಗ್ಗೆ ಹೇಳುತ್ತದೆ. ಸೌಹಾರ್ದತೆ ಮತ್ತು ಸಮಾನತೆ ಅಗತ್ಯ ಸಮಾಜಕ್ಕೆ ಇದೆ ಎಂಬ ವಿಚಾರವನ್ನು ಮಕ್ಕಳ ಮೂಲಕ ಅಭಿವ್ಯಕ್ತ ಪಡಿಸುವ ಕೆಲಸ ಮಾಡಿದ್ದಾರೆ ಬರಗೂರು ಚಂದ್ರಪ್ಪ.
ಬರಗೂರು ರಾಮಚಂದ್ರಪ್ಪ ಅವರೇ ಬರೆದ ‘ಅಡಗೂಲಜ್ಜಿ’ ಹೆಸರಿನ ಕಾದಂಬರಿ ಆಧರಿಸಿ ‘ಚಿಣ್ಣರ ಚಂದ್ರ’ ಸಿದ್ಧವಾಗಿದೆ. ಈ ಚಿತ್ರವನ್ನು ಜಿ.ಎಸ್ ಗೋವಿಂದರಾಜು (ರಾಜಶೇಖರ್) ನಿರ್ಮಾಣ ಮಾಡಿದ್ದಾರೆ. ಕಲಾವಿದರ ವರ್ಗದಲ್ಲಿ ಆಕಾಂಕ್ಷ್ ಬರಗೂರ್, ಷಡ್ಜ, ನಿಕ್ಷೇಪ, ಈಶಾನ್, ಸುಂದರ್ ರಾಜ್, ಅಭಿನವ್ ನಾಗ್, ರೇಖಾ, ರಾಧ ರಾಮಚಂದ್ರ, ವತ್ಸಲ ಮೋಹನ್, ರಾಘವ, ರಾಜಪ್ಪ ದಳವಾಯಿ, ಸುಂದರರಾಜ್ ಅರಸು, ವೆಂಕಟರಾಜು, ಹಂಸ ಮೊದಲಾದವರು ಇದ್ದಾರೆ.
ಇದನ್ನೂ ಓದಿ: SSE Side B Review: ‘ಸೈಡ್ ಎ’ ಬಳಿಕ ಮನು, ಪ್ರಿಯಾ ಬದುಕು ಬದಲಾದರೂ ‘ಸೈಡ್ ಬಿ’ ಲಯ ಬದಲಾಗಿಲ್ಲ
‘ಚಿಣ್ಣರ ಚಂದ್ರ’ ಸಿನಿಮಾ ಶೀಘ್ರವೇ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಇದರ ಜೊತೆಗೆ ರಾಜ್ಯಾದ್ಯಂತ ಶಾಲೆಗಳಲ್ಲಿ ಪ್ರದರ್ಶನ ಮಾಡಲು ಅವರು ಆಲೋಚಿಸಿದ್ದಾರೆ. ಈ ಚಿತ್ರಕ್ಕೆ ಸುರೇಶ್ ಅರಸು ಸಂಕಲನ, ನಾಗರಾಜ್ ಆದವಾನಿ ಛಾಯಾಗ್ರಹಣ, ಶಮಿತ ಮಲ್ನಾಡ್ ಸಂಗೀತ ನಿರ್ದೇಶನ ಇದೆ. ನಟರಾಜ್ ಶಿವ ಮತ್ತು ಪ್ರವೀಣ್ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:14 am, Sat, 18 November 23