Puneeth Rajkumar: ಕನ್ನಡ ಬಾವುಟದಲ್ಲಿ ಪುನೀತ್​ ಫೋಟೋ ಹಾಕಿದ್ದಕ್ಕೆ ಕಿರಿಕ್​ ಮಾಡಿದ್ದ ಮಹಿಳೆಯಿಂದ ಕ್ಷಮಾಪಣೆ

| Updated By: ಮದನ್​ ಕುಮಾರ್​

Updated on: Nov 06, 2022 | 11:16 PM

Puneeth Rajkumar Fans: ‘ಅಭಿಮಾನಿಗಳು ತಪ್ಪಾಗಿ ಭಾವಿಸಿದ್ದರೆ ಮತ್ತು ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ’ ಎಂದು ಮಹಿಳೆಯು ಕ್ಷಮೆ ಕೇಳಿದ್ದಾರೆ. ಪುನೀತ್ ರಾಜ್​ಕುಮಾರ್​ ಫೋಟೋಗೆ ನಮಿಸಿದ್ದಾರೆ.

Puneeth Rajkumar: ಕನ್ನಡ ಬಾವುಟದಲ್ಲಿ ಪುನೀತ್​ ಫೋಟೋ ಹಾಕಿದ್ದಕ್ಕೆ ಕಿರಿಕ್​ ಮಾಡಿದ್ದ ಮಹಿಳೆಯಿಂದ ಕ್ಷಮಾಪಣೆ
ಅಪ್ಪು ಫೋಟೋಗೆ ಕೈಮುಗಿದು ಕ್ಷಮೆ ಕೇಳಿದ ಮಹಿಳೆ
Follow us on

ಇತ್ತೀಚೆಗೆ ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರು. ಕರ್ನಾಟಕದ ಬಾವುಟದಲ್ಲಿ (Karnataka Flag) ಪುನೀತ್​ ಫೋಟೋ ಹಾಕಿದ್ದು ಸರಿಯಲ್ಲ ಎಂದು ಅವರು ಕೂಗಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಮಹಿಳೆಯು ಇಂದು (ನ.6) ಕ್ಷಮಾಪಣೆ ಕೇಳಿದ್ದಾರೆ. ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳ (Puneeth Rajkumar Fans) ಸಮ್ಮುಖದಲ್ಲಿ ಅವರು ಅಪ್ಪು ಫೋಟೋಗೆ ಕೈ ಮುಗಿದು ‘ನನ್ನಿಂದ ತಪ್ಪಾಗಿದೆ’ ಎಂದು ಕ್ಷಮೆ ಕೇಳಿದ್ದಾರೆ.

ಪೊಲೀಸ್​ ಠಾಣೆಯಲ್ಲಿ ಮಹಿಳೆ ಹೇಳಿದ್ದೇನು?

‘ನಾನು ಕನ್ನಡಿಗಳು. ನನಗೂ ಕರ್ನಾಟಕದ ಬಗ್ಗೆ ಹೆಮ್ಮೆ ಇದೆ. ನಾವು ಕನ್ನಡದ ಅಭಿವೃದ್ಧಿ ಕೈಗೂಡಿದ್ದೇವೆ. ನಾನು ಡಾ. ರಾಜ್​ಕುಮಾರ್​ ಅಭಿಮಾನಿ. ಪುನೀತ್​ ರಾಜ್​ಕುಮಾರ್​ ಬಗ್ಗೆ ನಾನು ತಪ್ಪು ಅಭಿಪ್ರಾಯ ಹೇಳಿಲ್ಲ. ಕನ್ನಡದ ಬಾವುಟ ವ್ಯಕ್ತಿಗತ ಆಗಬಾರದು ಅಂತ ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ. ಆದರೆ ಬಾವುಟದಲ್ಲಿ ಪುನೀತ್​ ಭಾವಚಿತ್ರ ಇದ್ದಿದ್ದಕ್ಕೆ ಅವರ ಹೆಸರು ಬಂತು. ಅಭಿಮಾನಿಗಳು ತಪ್ಪಾಗಿ ಭಾವಿಸಿದ್ದರೆ ಅಥವಾ ಯಾರಗಾದರೂ ನೋವಾಗಿದ್ದರೆ ಕ್ಷಮೆ ಇರಲಿ. ಇದೇ ಎನರ್ಜಿಯನ್ನು ಕರ್ನಾಟಕದ ಅಭಿವೃದ್ಧಿಗೆ ತೊಡಗಿಸಿ ಎಂಬುದು ನಮ್ಮ ಆಶಯ’ ಎಂದು ಆ ಮಹಿಳೆಯು ಎಲ್ಲರ ಎದುರು ಓದಿ ಹೇಳಿದ್ದಾರೆ.

ಇದನ್ನೂ ಓದಿ
Puneeth Rajkumar: ಪುನೀತ್​ ರಾಜ್​ಕುಮಾರ್ ಇಲ್ಲದೇ ಕಳೆಯಿತು 11 ತಿಂಗಳು; ಸಮಾಧಿ ಬಳಿ ಕಣ್ಣೀರು ಹಾಕಿದ ಫ್ಯಾನ್ಸ್​
ಹೊಸಪೇಟೆ ಪುನೀತ್ ಪುತ್ಥಳಿಗೆ ವಿನಯ್ ರಾಜ್​ಕುಮಾರ್ ಮಾಲಾರ್ಪಣೆ
Kantara: ‘ಕಾಂತಾರ’ ಚಿತ್ರಕ್ಕೆ ಪುನೀತ್​ ಹೀರೋ ಆಗ್ಬೇಕಿತ್ತು; ಆ ಸ್ಥಾನಕ್ಕೆ ರಿಷಬ್ ಶೆಟ್ಟಿ ಬಂದಿದ್ದು ಹೇಗೆ? ಇಲ್ಲಿದೆ ಉತ್ತರ
ಪುನೀತ್ ಜನ್ಮದಿನ ಇನ್ಮುಂದೆ ‘ಸ್ಫೂರ್ತಿ ದಿನ’; ಸಚಿವ ಸುನೀಲ್ ಕುಮಾರ್ ಮನವಿ ಪುರಸ್ಕರಿಸಿದ ಸಿಎಂ ಬೊಮ್ಮಾಯಿ

ವಿವಾದ ಆಗಿದ್ದು ಹೇಗೆ?

ಪುನೀತ್​ ರಾಜ್​ಕುಮಾರ್​ ಅವರ ಭಾವಚಿತ್ರ ಇರುವ ಕನ್ನಡದ ಬಾವುಟ ಹಲವು ಕಡೆಗಳಲ್ಲಿ ಹಾರಾಡುತ್ತಿದೆ. ಆ ಮೂಲಕ ಅಭಿಮಾನಿಗಳು ಅಪ್ಪುಗೆ ನಮನ ಸಲ್ಲಿಸುತ್ತಿದ್ದಾರೆ. ಆದರೆ ಇದರ ವಿರುದ್ಧ ನವೆಂಬರ್​ 3ರಂದು ಬೆಂಗಳೂರಿನ ಮಲ್ಲೇಶ್ವರದಲ್ಲಿ ಮಹಿಳೆ ಕಿರಿಕ್​ ಮಾಡಿದ್ದರು. ‘ನಾವು ಕೂಡ ಕನ್ನಡವರೇ. ನಮ್ಮ ಫೋಟೋ ಬಾವುಟದಲ್ಲಿ ಯಾಕೆ ಇಲ್ಲ? ಪುನೀತ್​ ಅಂದ್ರೆ ಕನ್ನಡಾಂಬೆ ಅಲ್ಲ. ಪುನೀತ್​ ಚಿತ್ರ ಬಾವುಟದಲ್ಲಿ ಬರಬಾರದು’ ಎಂದು ಮಹಿಳೆಯು ಕೂಗಾಡಿದ್ದರು. ಈ ಘಟನೆಯನ್ನು ಅಪ್ಪು ಅಭಿಮಾನಿಗಳು ಖಂಡಿಸಿದ್ದರು. ಮಹಿಳೆ ಹೇಳಿದ ಮಾತುಗಳನ್ನು ಸ್ಥಳದಲ್ಲೇ ಇದ್ದ ಆಟೋ ಚಾಲಕರು ವಿರೋಧಿಸಿದ್ದರು. ಆ ಸಂದರ್ಭದ ವಿಡಿಯೋ ವೈರಲ್​ ಆಗಿತ್ತು.

ಆ ಘಟನೆ ಕುರಿತು ಅಪ್ಪು ಅಭಿಮಾನಿಯೊಬ್ಬರು ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದರು. ‘ಆಕೆ ಕ್ಷಮೆ ಕೇಳಬೇಕು. ಪ್ರತಿ ಮನೆಯಲ್ಲೂ ಪುನೀತ್ ರಾಜ್​ಕುಮಾರ್​ ಅವರ ಫೋಟೋ ಇಟ್ಟು ಪೂಜೆ ಮಾಡಲಾಗುತ್ತಿದೆ. ಅಂಥವರ ಬಗ್ಗೆ ಈ ರೀತಿ ಮಾತಾಡಿದ್ದು ಸರಿಯಲ್ಲ. ಬಾವುಟದಲ್ಲಿ ಅಪ್ಪು ಫೋಟೋ ಹಾಕಿದ್ದಕ್ಕೆ ಸರ್ಕಾರವೇ ಆಕ್ಷೇಪಿಸಿಲ್ಲ. ನಿಧನರಾದ ವ್ಯಕ್ತಿ ಬಗ್ಗೆ ಈ ಮಹಿಳೆ ಈ ರೀತಿ ಮಾತನಾಡಿದ್ದು ತಪ್ಪು. ಲೈವ್​ನಲ್ಲಿ ಬಂದು ಅವರು ಕ್ಷಮೆ ಕೇಳಬೇಕು’ ಎಂದು ಪುನೀತ್​ ಅಭಿಮಾನಿ ಹೇಳಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:16 pm, Sun, 6 November 22