AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಯೋಗ್ಯ ಅಲ್ಲ ಅನ್ನೋದು ತೋರಿಸಿ ಹೋದಳು; ಬ್ರೇಕಪ್ ಬಳಿಕ ಮತ್ತೆ ಪ್ರೀತಿ ಮಾಡಿದ್ರಾ ರಾಜ್​ ಶೆಟ್ಟಿ?

ರಾಜ್ ಬಿ ಶೆಟ್ಟಿ ಅವರು ‘ಭರ್ಜರಿ ಬ್ಯಾಚುಲರ್ಸ್’ ರಿಯಾಲಿಟಿ ಶೋನ ವೇದಿಕೆ ಏರಿದ್ದರು. ಈ ವೇಳೆ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಪ್ರೀತಿ, ಪ್ರೇಮ, ಬ್ರೇಕಪ್ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

ನಾನು ಯೋಗ್ಯ ಅಲ್ಲ ಅನ್ನೋದು ತೋರಿಸಿ ಹೋದಳು; ಬ್ರೇಕಪ್ ಬಳಿಕ ಮತ್ತೆ ಪ್ರೀತಿ ಮಾಡಿದ್ರಾ ರಾಜ್​ ಶೆಟ್ಟಿ?
ರಾಜ್ ಬಿ ಶೆಟ್ಟಿ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Aug 06, 2023 | 12:36 PM

Share

ರಾಜ್ ಬಿ. ಶೆಟ್ಟಿ ಅವರು ಕನ್ನಡದಲ್ಲಿ ಹಲವು ಸಿನಿಮಾಗಳನ್ನು ನೀಡಿದ್ದಾರೆ. ಅವರು ಹೊಸ ಹೊಸ ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರ ನಿರ್ದೇಶನದ ಸಿನಿಮಾಗಳು ಸಾಕಷ್ಟು ಗಮನ ಸೆಳೆಯುತ್ತವೆ. ಈಗ ಅವರ ನಟನೆಯ ‘ಟೋಬಿ’ ಸಿನಿಮಾ (Toby Movie) ರಿಲೀಸ್​ಗೆ ರೆಡಿ ಇದೆ. ಆಗಸ್ಟ್ 25ರಂದು ಈ ಚಿತ್ರ ರಿಲೀಸ್ ಆಗಲಿದೆ. ಇದೊಂದು ರಿವೇಂಜ್ ಕಥೆ ಎಂಬುದನ್ನು ಟ್ರೇಲರ್ ಹೇಳಿದೆ. ಈ ಸಿನಿಮಾದ ಪ್ರಚಾರಕ್ಕಾಗಿ ಅವರು ಜೀ ಕನ್ನಡ ವಾಹಿನಿಯ ‘ಭರ್ಜರಿ ಬ್ಯಾಚುಲರ್ಸ್’ (Bharjari Bachelors) ರಿಯಾಲಿಟಿ ಶೋನ ವೇದಿಕೆ ಏರಿದ್ದರು. ಈ ವೇಳೆ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಪ್ರೀತಿ, ಪ್ರೇಮ, ಬ್ರೇಕಪ್ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

ಲವ್ ಮ್ಯಾರೇಜ್ ಬೆಟರ್

ಪ್ರೀತಿ ವಿಚಾರದಲ್ಲಿ ಒಬ್ಬೊಬ್ಬರಿಗೆ ಒಂದೊಂದು ನಂಬಿಕೆ ಇರುತ್ತದೆ. ಕೆಲವರಿಗೆ ಪ್ರೀತಿಸಿ ಮದುವೆ ಆಗೋದು ಇಷ್ಟವಿರುವುದಿಲ್ಲ. ಕೆಲವರಿಗೆ ಪ್ರೀತಿಸಿಯೇ ಮದುವೆ ಆಗಬೇಕೆಂದಿರುತ್ತದೆ. ‘ನನಗೆ ಲವ್ ಮ್ಯಾರೇಜ್ ಇಷ್ಟ. ಇದರಲ್ಲಿ ತಪ್ಪು ಮಾಡೋಕೆ ಸಾಕಷ್ಟು ಅವಕಾಶ ಇದೆ. ಮದುವೆ ಬಳಿಕ ಅವರಿಗೋಸ್ಕರ ನಾವೊಂದು ಹೆಜ್ಜೆ ಇಡುತ್ತೇವೆ. ನಮಗೋಸ್ಕರ ಅವರೊಂದು ಹೆಜ್ಜೆ ಇಡುತ್ತಾರೆ. ಆಗ ಇಬ್ಬರು ಒಟ್ಟಿಗೆ ಸಾಗಬಹುದು ಅನ್ನೋದು ಗೊತ್ತಾಗುತ್ತದೆ. ಅವರೊಂದು ಹೆಜ್ಜೆ ಇಡುತ್ತಾರೆ, ನಾನು ಬೇರೆ ಕಡೆ ಹೆಜ್ಜೆ ಇಡುತ್ತೇವೆ. ಆಗ ಇಬ್ಬರೂ ಬೇರೆ ಕಡೆ ಹೋಗಬೇಕು ಅನ್ನೋದು ಗೊತ್ತಾಗುತ್ತದೆ’ ಎಂದಿದ್ದಾರೆ ರಾಜ್ ಬಿ ಶೆಟ್ಟಿ.

ನಾನು ಕಂಡೀಷನ್ ಹಾಕಲ್ಲ

ಮದುವೆ ಆಗೋ ಹುಡುಗಿ ನೀವು ಬದಲಾಗಬೇಕು ಎಂದರೆ ಏನು ಮಾಡುತ್ತೀರಿ ಎಂದು ಕೇಳಲಾಯಿತು. ‘ನಾನು ಇರೋದು ಇಷ್ಟೇ. ನಾನು ಇರೋದೇ ಒಂದು ಲೋಟ. ಆ ನೀರನ್ನು ಚೊಂಬಿನಲ್ಲಿ ಹಾಕಿ ತುಂಬಿಸ್ತೀನಿ ಎಂದರೆ ಸಾಧ್ಯವಿಲ್ಲ. ನಾನು ಇರುವ ಹಾಗೆ ಇರೋಕೆ ಬಿಡು. ನೀನು ಹೇಗಿದ್ದರೂ ನಾನು ಅದನ್ನು ಪ್ರಶ್ನೆ ಮಾಡಲ್ಲ. ಇಬ್ಬರೂ ಬೆಳೆಯುತ್ತಾ ಹೋಗಬೇಕು. ಪ್ರಬುದ್ಧತೆ ಇರುವ ವ್ಯಕ್ತಿ ಕಂಡೀಷನ್ ಹಾಕಲ್ಲ’ ಎಂದಿದ್ದಾರೆ ರಾಜ್​ ಬಿ. ಶೆಟ್ಟಿ.

ಲವ್ ಬ್ರೇಕಪ್ ಕಥೆ..

‘ಪದವಿ ಶಿಕ್ಷಣ ಪಡೆಯುವಾಗ ಒಂದು ಹುಡುಗಿ ಪ್ರೀತಿ ಮಾಡಿದ್ಲು. ಆರು ವರ್ಷ ಆ ಪ್ರೀತಿ ಇತ್ತು. ರಿಲೇಷನ್ ಸೆಟ್ ಆಗುವಾಗಲೇ ನಾನು ಅವಳಿಗೆ ಹೇಳಿದ್ದೆ, ‘ನೀನು ಬಿಟ್ಟು ಹೋಗುತ್ತೀಯಾ ಎಂದರೆ ನಾನು ಕಾರಣ ಕೇಳುವುದಿಲ್ಲ’ ಎಂದು. ಹಾಗೆಯೇ ಆಯಿತು. ಆರು ವರ್ಷದ ಬಳಿಕ ಬ್ರೇಕಪ್ ಆಯಿತು. ಅವಳು ಬಿಟ್ಟು ಹೋಗದೇ ಇದ್ದಿದ್ದರೆ ನಾನು ಕೆಟ್ಟ ಮನುಷ್ಯನಾಗಿಯೇ ಉಳಿದುಕೊಳ್ಳುತ್ತಿದ್ದೆ. ಹಾಗಂತ ಈಗ ನಾನು ಒಳ್ಳೆಯವನಾಗಿದ್ದೀನಿ ಎಂದಲ್ಲ. ಕೊನೇಪಕ್ಷ ನಾನು ಎಷ್ಟು ಕೆಟ್ಟವನು ಅನ್ನೋದು ನನಗೆ ಈಗ ಗೊತ್ತಾಗಿದೆ. ಅವಳು ಬ್ರೇಕಪ್ ಮಾಡಿದ್ದರಿಂದಲೇ ನಾನು ಬೆಳೆದೆ. ನನಗೆ ಪ್ರೀತಿಯೇ ಕೊಡಲು ಬಂದಿರಲಿಲ್ಲ ಅನ್ನೋದು ನಂತರ ಗೊತ್ತಾಗಿತ್ತು. ನಾನು ಯೋಗ್ಯ ಅಲ್ಲ ಅನ್ನೋದನ್ನು ತೋರಿಸಿ ಹೋದಳು’ ಎಂದಿದ್ದಾರೆ ಅವರು.

View this post on Instagram

A post shared by Zee Kannada (@zeekannada)

ಇದನ್ನೂ ಓದಿ: ‘ಹಾಲಿವುಡ್​ ರೇಂಜ್​ನಲ್ಲಿ ಶೂಟ್ ಮಾಡಲಾಗಿದೆ’; ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಬಗ್ಗೆ ರಕ್ಷಿತ್ ಮೆಚ್ಚುಗೆ

ಈಗಲೂ ಒಂದು ರಿಲೇಶನ್​ಶಿಪ್ ಇದೆ..

‘ಈಗ ಒಂದು ರಿಲೇಶನ್​ಶಿಪ್ ಇದೆ. ಇಬ್ಬರೂ ಜೀವನದ ಹುಡುಕಾಟದಲ್ಲಿದ್ದೇವೆ. ನಂದೇನೂ ರೂಲ್ಸ್ ಇಲ್ಲ. ಅವಳದ್ದೂ ಇಲ್ಲ. ನಾವು ಖುಷಿಯಿಂದ ಇದ್ದೇವೆ. ನೀನು ಬದುಕು ಕಲಿ, ನಾನು ಬದುಕು ಕಲಿಯುತ್ತೇನೆ ಎಂಬ ಮನಸ್ಥಿತಿ’ ಎಂದು ಈಗಿನ ಪ್ರೀತಿ ಬಗ್ಗೆ ಅವರು ಹೇಳಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!