ಈ ಫೋಟೋದಲ್ಲಿರುವ ಬಾಲಕಿ ಈಗ ಸ್ಟಾರ್ ನಾಯಕಿ; ಶಿವರಾಜ್ಕುಮಾರ್ ಜೊತೆಯೂ ತೆರೆಹಂಚಿಕೊಂಡಿದ್ದಾರೆ
ಸೌಂದರ್ಯ ಹಾಗೂ ನಟನೆ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಸ್ಟಾರ್ ಹೀರೋಗಳ ಜೊತೆ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ.
ಈ ಫೋಟೋದಲ್ಲಿರುವ ಬಾಲಕಿ ಈಗ ಸ್ಟಾರ್ ಹೀರೋಯಿನ್. ದಕ್ಷಿಣ ಭಾರತ ಹಾಗೂ ಬಾಲಿವುಡ್ನಲ್ಲಿ ಅವರಿಗೆ ಬೇಡಿಕೆ ಇದೆ. ಸೌಂದರ್ಯ ಹಾಗೂ ನಟನೆ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಸ್ಟಾರ್ ಹೀರೋಗಳ ಜೊತೆ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ದಕ್ಷಿಣದಿಂದ ಹಿಡಿದು ಬಾಲಿವುಡ್ನವರೆಗೆ ಇವರ ಹೆಸರು ಚಾಲ್ತಿಯಲ್ಲಿದೆ. ಈ ಚೆಲುವೆ ಬಾಲಿವುಡ್ ಹೀರೋ ಜೊತೆ ಮದುವೆಯಾದರು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅವರು ಬೇರಾರೂ ಅಲ್ಲ ನಟಿ ಜೆನಿಲಿಯಾ ಡಿಸೋಜಾ (Genelia D’Souza ).
ಆಗಸ್ಟ್ 5, 1987ರಂದು ಮುಂಬೈನಲ್ಲಿ ಜನಿಸಿದ ಜೆನಿಲಿಯಾ, ‘ತುಜೆ ಮೇರಿ ಕಸಮ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಈ ಸಿನಿಮಾ ತೆರೆಗೆ ಬಂದಿದ್ದು 2003ರಂದು. ಅಂದರೆ ಅವರು ಚಿತ್ರರಂಗಕ್ಕೆ ಕಾಲಿಟ್ಟು ಎರಡು ದಶಕ ಕಳೆದಿದೆ. ಮೊದಲ ಚಿತ್ರದಿಂದ ಅವರು ಯಶಸ್ಸು ಕಂಡರು. ನಂತರ ಹಲವು ಸಿನಿಮಾಗಳಲ್ಲಿ ನಟಿಸಿದರು. ‘ಸತ್ಯ ಇನ್ ಲವ್’ ಸಿನಿಮಾ 2008ರಲ್ಲಿ ರಿಲೀಸ್ ಆಯಿತು. ಜೆನಿಲಿಯಾ ಅವರು ಶಿವಣ್ಣನ ಜೊತೆ ಈ ಚಿತ್ರದಲ್ಲಿ ನಟಿಸಿದರು. ಇದು ಕನ್ನಡದಲ್ಲಿ ಜೆನಿಲಿಯಾ ನಟಿಸಿದ ಮೊದಲ ಸಿನಿಮಾ.
ಇದನ್ನೂ ಓದಿ: ಜೆನಿಲಿಯಾ ಸಿನಿಮಾದಿಂದ ದೂರ ಆಗಿದ್ದಕ್ಕೆ ಗಂಡ ಕಾರಣವೇ? ಕಡೆಗೂ ಬಾಯಿಬಿಟ್ಟ ನಟಿ
ಸಿದ್ಧಾರ್ಥ್ ಅಭಿನಯದ ‘ಬೊಮ್ಮರಿಲ್ಲು’ ಚಿತ್ರದೊಂದಿಗೆ ಜೆನಿಲಿಯಾ ಕ್ರೇಜ್ ಹೆಚ್ಚಿತು. ತಮ್ಮ ಅಭಿನಯದ ಮೂಲಕ ಅವರು ಪ್ರೇಕ್ಷಕರನ್ನು ಆಕರ್ಷಿಸಿದರು. ಜೆನಿಲಿಯಾ ತೆಲುಗು ಮತ್ತು ಹಿಂದಿಯ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. 2012ರಲ್ಲಿ ಜೆನಿಲಿಯಾ ಬಾಲಿವುಡ್ ಹೀರೋ ರಿತೇಶ್ ದೇಶ್ಮುಖ್ ಅವರನ್ನು ವಿವಾಹವಾದರು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
ಇದನ್ನೂ ಓದಿ: ಟ್ರಯಲ್ಗೆ ಸಿಗುತ್ತಾನೆಯೇ ಅಪ್ಪ? ಸತ್ಯನ ಪ್ರೇಯಸಿ ಜೆನಿಲಿಯಾ ಹೇಳುತ್ತಾರೆ ಕೇಳಿ
2022ರಲ್ಲಿ ಅವರ ನಟನೆಯ ‘ವೇಡ್’ (ಮಜಿಲಿ ರಿಮೇಕ್) ಚಿತ್ರ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ರಿತೇಶ್ ಹಾಗೂ ಇವರು ಒಟ್ಟಾಗಿ ನಟಿಸಿದ್ದರು. ಕಿರೀಟಿ ನಟಿಸುತ್ತಿರುವ ಕನ್ನಡದ ‘ಜೂನಿಯರ್’ ಚಿತ್ರದಲ್ಲಿ ಜೆನಿಲಿಯಾ ನಾಯಕಿ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಬಗ್ಗೆಯೂ ಅಭಿಮಾನಿಗಳಿಗೆ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ