AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾಗದ’ ಸಿನಿಮಾಕ್ಕೆ ‘ಲವ್ ಮಾಕ್ಟೇಲ್’ ಜೋಡಿ ಸಾಥ್: ಫಸ್ಟ್ ಲುಕ್ ಬಿಡುಗಡೆ ಮಾಡಿದ ಕೃಷ್ಣ-ಮಿಲನಾ ದಂಪತಿ

Kagada: ಯುವಕರ ಸಿನಿಮಾ 'ಕಾಗದ'ದ ಫಸ್ಟ್ ಲುಕ್ ಅನ್ನು ಸ್ಯಾಂಡಲ್​ವುಡ್​ನ ಕ್ಯೂಟ್ ದಂಪತಿ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ಬಿಡುಗಡೆ ಮಾಡಿದ್ದಾರೆ.

'ಕಾಗದ' ಸಿನಿಮಾಕ್ಕೆ 'ಲವ್ ಮಾಕ್ಟೇಲ್' ಜೋಡಿ ಸಾಥ್: ಫಸ್ಟ್ ಲುಕ್ ಬಿಡುಗಡೆ ಮಾಡಿದ ಕೃಷ್ಣ-ಮಿಲನಾ ದಂಪತಿ
ಮಿಲನಾ ನಾಗರಾಜ್-ಡಾರ್ಲಿಂಗ್ ಕೃಷ್ಣ
ಮಂಜುನಾಥ ಸಿ.
|

Updated on: Aug 06, 2023 | 8:30 PM

Share

ಲವ್ ಮಾಕ್ಟೆಲ್‘ (Love Mocktail) ಜೋಡಿ, ಸ್ಯಾಂಡಲ್​ವುಡ್​ನ ಕ್ಯೂಟ್ ಕಪಲ್ ಡಾರ್ಲಿಂಗ್ ಕೃಷ್ಣ (Darling Krishna) ಹಾಗೂ ಮಿಲನಾ ನಾಗರಾಜ್, ತಮ್ಮ ನಟನೆಯ ಹೊಸ ಸಿನಿಮಾ ‘ಕೌಸಲ್ಯ ಸುಪ್ರಜಾ ರಾಮ’ದ ಗೆಲುವಿನ ಖುಷಿಯಲ್ಲಿದ್ದಾರೆ. ಬೃಂದಾ ಆಚಾರ್ಯ ಸಹ ನಟಿಸಿರುವ ಈ ಸಿನಿಮಾ ಕಳೆದ ವಾರ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿದೆ. ಇತ್ತೀಚೆಗಷ್ಟೆ ಸಿನಿಮಾದ ಸಕ್ಸಸ್ ಮೀಟ್ ಸಹ ಆಯೋಜನೆಗೊಂಡಿತ್ತು. ಗೆಲುವಿನ ಖುಷಿಯಲ್ಲಿರುವ ಈ ಜೋಡಿ ಇತರೆ ಕೆಲವು ಸಿನಿಮಾಗಳಿಗೂ ಬೆಂಬಲದ ಹಸ್ತ ಚಾಚಿದ್ದಾರೆ. ಹೊಸಬರ ಸಿನಿಮಾ ಒಂದರ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದೆ ಈ ಜೋಡಿ.

‘ಆ್ಯಪಲ್ ಕೇಕ್’ ಹೆಸರಿನ ಸಿನಿಮಾ ನಿರ್ದೇಶನ ಮಾಡಿರುವ ರಂಜಿತ್ ಕುಮಾರ್ ಗೌಡ ತಮ್ಮ ಎರಡನೇ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಈ ಹಿಂದೆ ‘ವಾಸ್ಕೋ ಡಿಗಾಮ’, ‘ಮದರಂಗಿ’ ಇನ್ನೂ ಕೆಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕ ಆಗಿ ಕೆಲಸ ಮಾಡಿರುವ ರಂಜಿತ್, ‘ಆ್ಯಪಲ್ ಕೇಕ್’ ಸಿನಿಮಾ ಮೂಲಕ ನಿರ್ದೇಶಕರಾದವರು. ಈಗ ತಮ್ಮ ಎರಡನೇ ಸಿನಿಮಾವನ್ನು ನಿರ್ದೇಶಿಸಲು ಮುಂದಾಗಿದ್ದು, ಸಿನಿಮಾಕ್ಕೆ ‘ಕಾಗದ’ ಎಂದು ಹೆಸರಿಟ್ಟಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಅನ್ನು ಚಂದನವನದ ಮುದ್ದಾದ ಜೋಡಿ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಬಾಲನಟಿ ಆಗಿದ್ದ ಅಂಕಿತಾ ನಾಯಕಿಯಾಗಿ, ಆದಿತ್ಯ ನಾಯಕನಾಗಿ ‘ಕಾಗದ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲ್ಟಿದ್ದಾರೆ. ‘ಮಫ್ತಿ’ ಸಿನಿಮಾದಲ್ಲಿ ನಟಿಸಿದ್ದ ಬಾಲರಾಜವಾಡಿ, ನಟರಾದ ನೇಹಾ ಪಾಟೀಲ್, ಶಿವಮಂಜು, ಅಶ್ವತ್ಥ್ ನೀನಾಸಂ, ಗೌತಮ್ ಇನ್ನೂ ಕೆಲವರು ‘ಕಾಗದ’ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಕಾಗದ’ ಸಿನಿಮಾ ಪ್ರೇಮಕತೆಯನ್ನು ಹೊಂದಿರುವ ಸಿನಿಮಾ. ಈ ಸಿನಿಮಾದ ಕತೆ ನಡೆಯುವುದು 2005 ರ ಕಾಲಘಟ್ಟದಲ್ಲಿ. ಹಾಗೆಂದು ಇದು ನಿಜವಾದ ಘಟನೆ ಆಧರಿಸಿದ ಸಿನಿಮಾ ಅಲ್ಲ ಬದಲಿಗೆ ಕಾಲ್ಪನಿಕ ಕತೆಯೇ ಆಗಿದೆ. ಆದರೆ ಆ ಕಾಲಘಟ್ಟಕ್ಕೆ ಸಿನಿಮಾಕ್ಕೆ ಪ್ರಾಮುಖ್ಯತೆ ಇದೆಯೆಂದಿದ್ದಾರೆ ನಿರ್ದೇಶಕರು.

ಇದನ್ನೂ ಓದಿ: Darling Krishna: ಕೌಸಲ್ಯ ಸುಪ್ರಜಾ ರಾಮ ಕರಿಯರ್​ನ ಬೆಸ್ಟ್ ಸಿನಿಮಾ ಎಂದ ಡಾರ್ಲಿಂಗ್ ಕೃಷ್ಣ, ಕಾರಣ?

ರಂಜಿತ್ ಕುಮಾರ್ ಗೌಡ ಈ ಸಿನಿಮಾಕ್ಕೆ ಕತೆ, ಚಿತ್ರಕಥೆ ಬರೆಯುವ ಜೊತೆಗೆ ಸಂಭಾಷಣೆಯನ್ನೂ ಬರೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಯುವಕರ ‘ಕಾಗದ’ ಸಿನಿಮಾದ ಪ್ರಯತ್ನಕ್ಕೆ ಅರುಣ್ ಕುಮಾರ್ ಎ ಎಂಬುವರು ಹಣ ತೊಡಗಿಸಿದ್ದಾರೆ. ಅಮ್ಮ ಸಿನಿ ಕ್ರಿಯೇಷನ್ ಅಡಿಯಲ್ಲಿ ಸಿನಿಮಾ ಮೂಡಿ ಬರಲಿದೆ. ಈ ಹಿಂದೆ ‘ರಗಡ್’ ಹೆಸರಿನ ಸಿನಿಮಾ ಇದೇ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗಿ ಬಿಡುಗಡೆ ಆಗಿತ್ತು.

‘ಕಾಗದ’ ಸಿನಿಮಾದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಸಿನಿಮಾದ ಒಂದು ಹಾಡಿನ ಶೂಟಿಂಗ್ ಅಷ್ಟೆ ಬಾಕಿ ಇದೆ. ಸಿನಿಮಾದ ಸಿನಿಮಾಟೊಗ್ರಫಿ ಜವಾಬ್ದಾರಿ ವೀನಸ್ ನಾಗರಾಜ್ ಮೂರ್ತಿ ಅವರದ್ದು, ಹಿನ್ನೆಲೆ ಸಂಗೀತವನ್ನು ಎಸ್ ಪ್ರದೀಪ್ ವರ್ಮಾ ನೀಡಿದ್ದಾರೆ. ಪವನ್ ಗೌಡ ಸಂಕಲನ ಮಾಡುತ್ತಿದ್ದಾರೆ, ನೃತ್ಯ ನಿರ್ದೇಶನವನ್ನು ಭೂಷಣ್ ಮಾಡುತ್ತಿದ್ದಾರೆ. ಮೂಡಿಗೆರೆ, ಬೇಲೂರು ಇನ್ನೂ ಹಲವು ಭಾಗಗಳಲ್ಲಿ ‘ಕಾಗದ’ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!