ಐವಿಎಫ್ ಮೂಲಕ ಗರ್ಭ ಧರಿಸಿದ್ದ ಭಾವನಾ ರಾಮಣ್ಣ ಈಗ ತಾಯಿ, ಆದರೆ….
Bhavana Ramanna: ನಟಿ ಭಾವನಾ ರಾಮಣ್ಣ ಐವಿಎಫ್ ವಿಧಾನದ ಮೂಲಕ ಗರ್ಭಧಾರಣೆ ಮಾಡಿದ್ದರು. ಸ್ಕ್ಯಾನಿಂಗ್ನಲ್ಲಿ ಅವರು ಅವಳಿ ಮಕ್ಕಳಿಗೆ ತಾಯಿಯಾಗಲಿದ್ದಾರೆ ಎಂಬುದು ತಿಳಿದು ಬಂದಿತ್ತು. ಈ ವಿಷಯವನ್ನು ನಟಿ ಭಾವನಾ ಮಾಧ್ಯಮಗಳೊಟ್ಟಿಗೆ ಖುಷಿಯಿಂದ ಹಂಚಿಕೊಂಡಿದ್ದರು. ಕೆಲ ವಾರಗಳ ಹಿಂದಷ್ಟೆ ನಟಿ ಭಾವನಾ ಅವರು ಖುಷಿಯಿಂದ ಸೀಮಂತ ಸಮಾರಂಭ ಸಹ ಮಾಡಿಕೊಂಡಿದ್ದರು. ಈಗ ಭಾವನಾ ಅವರು ತಾಯಿಯಾಗಿದ್ದಾರೆ ಆದರೆ ಒಂದು ಮಗುವಿಗೆ ಮಾತ್ರ.

ನಟಿ ಭಾವನಾ ರಾಮಣ್ಣ ಐವಿಎಫ್ ವಿಧಾನದ ಮೂಲಕ ಗರ್ಭಧಾರಣೆ ಮಾಡಿದ್ದರು. ಸ್ಕ್ಯಾನಿಂಗ್ನಲ್ಲಿ ಅವರು ಅವಳಿ ಮಕ್ಕಳಿಗೆ ತಾಯಿಯಾಗಲಿದ್ದಾರೆ ಎಂಬುದು ತಿಳಿದು ಬಂದಿತ್ತು. ಈ ವಿಷಯವನ್ನು ನಟಿ ಭಾವನಾ ಮಾಧ್ಯಮಗಳೊಟ್ಟಿಗೆ ಖುಷಿಯಿಂದ ಹಂಚಿಕೊಂಡಿದ್ದರು. ಕೆಲ ವಾರಗಳ ಹಿಂದಷ್ಟೆ ನಟಿ ಭಾವನಾ ಅವರು ಖುಷಿಯಿಂದ ಸೀಮಂತ ಸಮಾರಂಭ ಸಹ ಮಾಡಿಕೊಂಡಿದ್ದರು. ಈಗ ಭಾವನಾ ಅವರು ತಾಯಿಯಾಗಿದ್ದಾರೆ ಆದರೆ ಒಂದು ಮಗುವಿಗೆ ಮಾತ್ರ.
ಭಾವನಾ ರಾಮಣ್ಣ ಅವರು ವೈದ್ಯರ ಸಲಹೆ ಮೇರೆಗೆ ಅವಧಿ ಪೂರ್ವ ಹೆರಿಗೆ ಮಾಡಿಸಿಕೊಂಡಿದ್ದು ಹೆರಿಗೆ ಸಮಯದಲ್ಲಿ ಒಂದು ಮಗು ನಿಧನ ಹೊಂದಿದೆ ಹಾಗೂ ಒಂದು ಮಗು ಮಾತ್ರವೇ ಬದುಕಿದೆ. ಭಾವನಾ ಅವರು ಒಂದು ಮಗುವಿನ ತಾಯಿ ಆಗಿದ್ದು, ಮಗು ಮತ್ತು ತಾಯಿ ಇಬ್ಬರೂ ಆರೋಗ್ಯದಿಂದಿದ್ದಾರೆ ಎನ್ನಲಾಗಿದೆ. ಅಂದಹಾಗೆ ಭಾವನಾ ರಾಮಣ್ಣ ಅವರಿಗೆ ಹೆಣ್ಣು ಮಗುವಿನ ಜನನ ಆಗಿದೆ.
ಭಾವನಾ ರಾಮಣ್ಣ ಅವರಿಗೆ ಎರಡು ವಾರಗಳ ಹಿಂದೆಯೇ ಮಗು ಜನನವಾಗಿದೆ. ಭಾವನಾ ಅವರ ಅವಳಿ ಮಕ್ಕಳಲ್ಲಿ ಒಂದು ಮಗುವಿಗೆ ಸಮಸ್ಯೆ ಆಗಿದ್ದರಿಂದಾಗಿ ಅವಧಿ ಪೂರ್ವವಾಗಿ ಆಪರೇಷನ್ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದರು. ಇದೇ ಕಾರಣಕ್ಕೆ ಎರಡು ತಿಂಗಳ ಹಿಂದೆ ಅಂದರೆ ಎಂಟನೇ ತಿಂಗಳಲ್ಲಿಯೇ ಭಾವನಾ ಅವರು ಶಸ್ತ್ರಚಿಕಿತ್ಸೆಗೆ ಒಳಗಾದರು. ಈ ವೇಳೆ ಒಂದು ಮಗು ನಿಧನ ಹೊಂದಿದ್ದು, ಇನ್ನೊಂದು ಮಗುವಷ್ಟೆ ಬದುಕುಳಿದಿದೆ.
ಭಾವನಾ ರಾಮಣ್ಣ ಅವರು ಮದವೆ ಆಗಿರಲಿಲ್ಲ. ಆದರೆ ಅವರಿಗೆ ತಾಯಿ ಆಗಬೇಕೆಂಬ ಬಯಕೆ ಅದಮ್ಯವಾಗಿತ್ತು ಹಾಗಾಗಿ ಅವರು ಕೃತಕ ಗರ್ಭಧಾರಣೆ ಮೂಲಕ ತಾಯಿ ಆಗಿದ್ದರು. ಈ ಬಗ್ಗೆ ಬಲು ಸಂತೋಷದಿಂದ ಮಾಧ್ಯಮಗಳ ಮುಂದೆ ಅವರು ಹೇಳಿಕೊಂಡಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:04 pm, Sat, 6 September 25




