
‘ಬಿಗ್ ಬಾಸ್ ಕನ್ನಡ ಸೀಸನ್ 10’ರ ವಿನ್ನರ್ ಕಾರ್ತಿಕ್ ಮಹೇಶ್ (Karthik Mahesh) ಅವರು ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ಅವರಿಗ ಒಂದಾದ ಬಳಿಕ ಒಂದರಂತೆ ಆಫರ್ಗಳು ಬರುತ್ತಿವೆ. ಆದರೆ, ಅವರ ಗುರಿ ಮಾತ್ರ ಒಳ್ಳೆಯ ಸಿನಿಮಾಗಳನ್ನು ಮಾಡೋದು. ಈಗ ಅವರು ವಿದೇಶಕ್ಕೆ ಹೊರಡಲು ರೆಡಿ ಆಗಿದ್ದಾರೆ. ಹಾಗಂತ ಅವರು ಪ್ರವಾಸಕ್ಕಾಗಿ ಫಾರೆನ್ಗೆ ತೆರಳುತ್ತಿಲ್ಲ. ಸಿನಿಮಾ ಒಂದರ ಮಾತುಕತೆ ನಡೆಯುತ್ತಿದ್ದು, ಇದರ ಸಂಪೂರ್ಣ ಶೂಟಿಂಗ್ ವಿದೇಶದಲ್ಲಿ ನಡೆಯಲಿದೆ ಅನ್ನೋದು ವಿಶೇಷ.
ಕಾರ್ತಿಕ್ ಮಹೇಶ್ ಅವರು ಸದ್ಯ ‘ರಾಮರಸ’ ಹಾಗೂ ‘ರಿಚಿ ರಿಚ್’ ಹೆಸರಿನ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇದಲ್ಲದೆ ಇನ್ನೂ ಕೆಲವು ಚಿತ್ರಗಳು ಚರ್ಚೆಯಲ್ಲಿ ಇವೆ. ‘ಗೀತಾ’ ಹಾಗೂ ‘ಹೊಯ್ಸಳ’ ಸಿನಿಮಾ ನಿರ್ದೇಶನ ಮಾಡಿದ್ದ ವಿಜಯ್ ಎನ್ ಅವರು ಈಗ ‘ಆಲ್ಫಾ’ ಹೆಸರಿನ ಚಿತ್ರ ಮಾಡುತ್ತಿದ್ದಾರೆ. ಈ ಸಿನಿಮಾ ಮೂಲಕ ಹೊಸ ಪ್ರತಿಭೆಯ ಎಂಟ್ರಿ ಆಗಲಿದೆ. ಈ ಚಿತ್ರದಲ್ಲಿ ಕಾರ್ತಿಕ್ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.
ಇದಲ್ಲದೆ ಕಾರ್ತಿಕ್ ಮಹೇಶ್ ಅವರು ಹೊಸ ಸಿನಿಮಾ ಒಂದರ ಮಾತುಕತೆ ನಡೆಸುತ್ತಿದ್ದಾರೆ. ಈ ಸಿನಿಮಾದ ಕಥೆ ವಿದೇಶದಲ್ಲಿ ಸಾಗಲಿದೆ. ಇದು ಫೈನಲ್ ಆದರೆ, ಕಾರ್ತಿಕ್ ಅವರು ವಿದೇಶಕ್ಕೆ ಹಾರಲಿದ್ದಾರೆ. ಅಲ್ಲಿ ಕೆಲವು ದಿನಗಳ ಕಾಲ ಶೂಟಿಂಗ್ನಲ್ಲಿ ಬ್ಯುಸಿ ಆಗಲಿದ್ದಾರೆ. ಎಲ್ಲವೂ ಫೈನಲ್ ಆದ ಬಳಿಕ ಯಾವ ದೇಶ, ಎಷ್ಟು ದಿನ ಶೂಟ್, ಕಥೆ ಬಗ್ಗೆ ಮಾಹಿತಿ ಸಿಗಲಿದೆ. ಕಾರ್ತಿಕ್ ಅವರು ವೆಬ್ ಸೀರಿಸ್ ಮಾಡುವ ಆಲೋಚನೆಯಲ್ಲೂ ಇದ್ದಾರಂತೆ. ಈ ಬಗ್ಗೆ ಮಾತುಕತೆ ಕೂಡ ನಡೆಯುತ್ತಿದೆ.
ಇದನ್ನೂ ಓದಿ: ಅಮ್ಮನ ಜೊತೆ ಸೇರಿ ಹೊಸ ಉದ್ಯಮ ಆರಂಭಿಸಿದ ಕಾರ್ತಿಕ್ ಮಹೇಶ್
ಬಿಗ್ ಬಾಸ್ ಪೂರ್ಣಗೊಂಡ ಬಳಿಕ ಕಾರ್ತಿಕ್ ಮಹೇಶ್ ಅವರು ಚಿತ್ರರಂಗದಲ್ಲಿ ಬ್ಯುಸಿ ಹೀರೋ ಎನಿಸಿಕೊಂಡಿದ್ದಾರೆ. ‘ರಾಮರಸ’ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿವೆ. ‘ರಿಚಿ ರಿಚ್’ ಚಿತ್ರದ ಶೂಟ್ ನಡೆಯುತ್ತಿದೆ. ಒಳ್ಳೆಯ ಕಥೆ ಸಿಕ್ಕರೆ ಅದನ್ನು ಮಾಡಿ ಅಭಿಮಾನಿಗಳ ಎದುರು ಇಡೋ ಹುಮ್ಮಸ್ಸಿನಲ್ಲಿ ಇದ್ದಾರೆ. ಕಾರ್ತಿಕ್ ಮಹೇಶ್ ಅವರಿಗೆ ‘ಮೈಕ್ರೋ ವೆಬ್ ಸೀರಿಸ್’ ತಂಡಗಳಿಂದಲೂ ಆಫರ್ ಬರುತ್ತಿದೆ. ಆದರೆ, ದೊಡ್ಡ ಪರದೆಯ ಪ್ರೇಕ್ಷಕರನ್ನು ರಂಜಿಸಬೇಕು ಎಂಬುದು ಅವರ ಗುರಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.