ಬ್ಯಾಕ್​ ಟು ಬ್ಯಾಕ್ ಮೂರು ಚಿತ್ರಕ್ಕೆ ವಿನಯ್ ಗೌಡ ಸಹಿ; ಸ್ಟಾರ್ ಹೀರೋಗೆ ಖಡಕ್ ವಿಲನ್

ಬಿಗ್ ಬಾಸ್ ರಿಯಾಲಿಟಿ ಶೋನಿಂದ ಸಾಕಷ್ಟು ಆಫರ್​ಗಳು ಬರುತ್ತವೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಸ್ಪರ್ಧಿ ವಿನಯ್ ಗೌಡ ಅವರನ್ನು ಅರಸಿ ಸಾಕಷ್ಟು ಸಿನಿಮಾ ಆಫರ್​ಗಳು ಬಂದಿವೆ. ಈ ಪೈಕಿ ಮೂರು ಸಿನಿಮಾಗಳಿಗೆ ವಿಲನ್ ಆಗಿ ಅವರು ಸಹಿ ಹಾಕಿದ್ದಾರೆ.

ಬ್ಯಾಕ್​ ಟು ಬ್ಯಾಕ್ ಮೂರು ಚಿತ್ರಕ್ಕೆ ವಿನಯ್ ಗೌಡ ಸಹಿ; ಸ್ಟಾರ್ ಹೀರೋಗೆ ಖಡಕ್ ವಿಲನ್
ವಿನಯ್ ಗೌಡ

Updated on: Apr 29, 2024 | 2:41 PM

ನಟ ವಿನಯ್ ಗೌಡ (Vinay Gowda) ಅವರು ‘ಹರ ಹರ ಮಹದೇವ’ ಧಾರಾವಾಹಿಯಲ್ಲಿ ಶಿವನ ಪಾತ್ರ ಮಾಡಿದ್ದರು. ಅವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಆಫರ್ ಬಂತು. ಇದನ್ನು ಅವರು ಒಪ್ಪಿದರು. ಬಿಗ್ ಬಾಸ್ ಮನೆಯಲ್ಲಿ ಅವರು ಸಾಕಷ್ಟು ಗಮನ ಸೆಳೆದರು. ಟಾಸ್ಕ್​ಗಳಲ್ಲಿ ಆಡಿ ಮೆಚ್ಚುಗೆ ಪಡೆದ ಅವರು, ಜಗಳ ಮಾಡಿಕೊಂಡೂ ಸುದ್ದಿ ಆದರು. ಬಿಗ್ ಬಾಸ್​ನಿಂದ ಹೊರ ಬಂದ ಅವರಿಗೆ ಜನರು ಸಾಕಷ್ಟು ಪ್ರೀತಿ ನೀಡುತ್ತಿದ್ದಾರೆ. ವಿಶೇಷ ಎಂದರೆ ಈಗ ಅವರಿಗೆ ಬ್ಯಾಕ್​ ಟು ಬ್ಯಾಕ್ ಸಿನಿಮಾಗಳು ಬಂದಿವೆ. ಮೂರು ಸಿನಿಮಾಗಳಿಗೆ ವಿಲನ್ ಆಗಿ ವಿನಯ್ ಸಹಿ ಹಾಕಿದ್ದಾರೆ.

‘ಬಿಗ್ ಬಾಸ್’ ಅನೇಕರ ಬದುಕನ್ನು ಬದಲಿಸಿದೆ. ಇದರಲ್ಲಿ ವಿನಯ್ ಅವರ ಹೆಸರು ಸೇರ್ಪಡೆ ಆಗಿದೆ. ತಮಗೆ ಬಂದ ಸಿನಿಮಾ ಆಫರ್​ಗಳ ಬಗ್ಗೆ, ಬದುಕು ಬದಲಾದ ಬಗ್ಗೆ ಅವರು ‘ಟಿವಿ9 ಕನ್ನಡ ಡಿಜಿಟಲ್’ ಜೊತೆ ಮಾತನಾಡಿದ್ದಾರೆ. ‘ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ವ್ಯಕ್ತಿಗಳವರೆಗೆ ಎಲ್ಲರೂ ನನ್ನನ್ನು ಗುರುತಿಸಿದ್ದಾರೆ. ಪ್ರತಿಯೊಬ್ಬರ ಬಾಯಲ್ಲೂ ನನ್ನ ಹೆಸರು ಇದೆ’ ಎಂದಿದ್ದಾರೆ ವಿನಯ್.

ವಿನಯ್ ಗೌಡ ಅವರು ಈಗಾಗಲೇ ಕೆಲವು ಧಾರಾವಾಹಿಗಳಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಸದ್ಯಕ್ಕೆ ಅವರು ಕಿರುತೆರೆಯಲ್ಲಿ ಲೀಡ್​ರೋಲ್ ಮಾಡೋ ಆಲೋಚನೆಯಲ್ಲಿ ಇಲ್ಲ. ಅವರಿಗೆ ಕೈ ತುಂಬಾ ಸಿನಿಮಾ ಆಫರ್​ಗಳು ಸಿಕ್ಕಿವೆ. ‘ಕನ್ನಡದಲ್ಲಿ ಎರಡು ದೊಡ್ಡ ಸಿನಿಮಾ ಸಹಿ ಮಾಡಿದ್ದೇನೆ. ತಮಿಳಿನ ಒಂದು ಸಿನಿಮಾ ಕೆಲಸ ನಡೆಯುತ್ತಿದೆ. ತೆಲುಗಿನ ಒಂದು ಚಿತ್ರದ ಜೊತೆ ಮಾತುಕತೆ ನಡೆಯುತ್ತಿದೆ’ ಎಂದಿದ್ದಾರೆ ವಿನಯ್ ಗೌಡ.

ಧಾರಾವಾಹಿ ಒಪ್ಪಿಕೊಂಡರೆ ಬೇರೆ ವಿಷಯಗಳ ಮೇಲೆ ಗಮನ ಹರಿಸೋಕೆ ಆಗಲ್ಲ ಅನ್ನೋದು ವಿನಯ್ ಅಭಿಪ್ರಾಯ. ಕನ್ನಡದಿಂದ ಬಂದಿರೋ ಎರಡೂ ಆಫರ್​​ಗಳು ದೊಡ್ಡ ಸಿನಿಮಾಗಳು. ಇದರಲ್ಲಿ ಸ್ಟಾರ್ ಹೀರೋಗಳು ನಟಿಸುತ್ತಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ. ಹೀರೋ ಆಗಿಯೂ ಅವರಿಗೆ ಆಫರ್ ಬರುತ್ತಿದೆ. ‘ಪ್ರೊಡಕ್ಷನ್ ಕಡೆಯಿಂದ ಶೀಘ್ರವೇ ಈ ಬಗ್ಗೆ ಅನೌನ್ಸ್ ಆಗಲಿದೆ’ ಎಂದಿದ್ದಾರೆ ವಿನಯ್.

ಇದನ್ನೂ ಓದಿ: ಕಲರ್ಸ್ ಕನ್ನಡ ಧಾರಾವಾಹಿಗೆ ಎಂಟ್ರಿಕೊಟ್ಟ ವಿನಯ್ ಗೌಡ; ಇಲ್ಲಿದೆ ವಿವರ

‘ಒಂದು ಕರೆಕ್ಟ್ ಆಗಿರೋ ಚಾನ್ಸ್ ಹಾಗೂ ಪಾತ್ರ ಸಿಗಬೇಕು. ಬಂದಿರೋ ಎರಡೂ ಸಿನಿಮಾಗಳು ದೊಡ್ಡ ಸ್ಟಾರ್​ಗಳ ಸಿನಿಮಾ. ಇದಾದ ಬಳಿಕ ಸಿನಿಮಾ ಇಂಡಸ್ಟ್ರಿಯಲ್ಲಿ ನನ್ನ ಫ್ಯೂಚರ್ ಚೆನ್ನಾಗಿರುತ್ತೆ ಎಂದು ನಾನು ಭಾವಿಸಿದ್ದೇನೆ. ನನ್ನ ಮೇಲೆ ನನಗೆ ನಂಬಿಕೆ ಇದೆ’ ಎಂದಿದ್ದಾರೆ ವಿನಯ್ ಗೌಡ. ಈ ಪಾತ್ರಗಳಿಗೆ ಅಗತ್ಯ ಇರೋ ಸಿದ್ಧತೆಯನ್ನು ಅವರು ಮಾಡಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಖಡಕ್ ವಿಲನ್ ಆಗಬೇಕು ಎಂದು ಅವರು ಕನಸು ಕಾಣುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us