ದರ್ಶನ್ ತೂಗುದೀಪ ನಟನೆಯ ‘ಡೆವಿಲ್’ ಚಿತ್ರಕ್ಕೆ ವಿನಯ್ ಗೌಡ ವಿಲನ್; ಆಗಿರೋ ಶೂಟಿಂಗ್ ಎಷ್ಟು?

ವಿನಯ್ ಗೌಡ ಅವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಮೂಲಕ ಫೇಮಸ್ ಆದರು. ಅವರು ಅಲ್ಲಿ ಆನೆ ಎಂದೇ ಫೇಮಸ್ ಆದರು. ಅವರಿಗೆ ಈಗ ‘ಡೆವಿಲ್’ ಚಿತ್ರದ ಆಫರ್ ಸಿಕ್ಕಿದೆ. ಈ ಬಗ್ಗೆ ವಿನಯ್ ಗೌಡ ಅವರು ಇತ್ತೀಚೆಗೆ ಮಾಹಿತಿ ರಿವೀಲ್ ಮಾಡಿದ್ದಾರೆ.

ದರ್ಶನ್ ತೂಗುದೀಪ ನಟನೆಯ ‘ಡೆವಿಲ್’ ಚಿತ್ರಕ್ಕೆ ವಿನಯ್ ಗೌಡ ವಿಲನ್; ಆಗಿರೋ ಶೂಟಿಂಗ್ ಎಷ್ಟು?
ದರ್ಶನ್-ವಿನಯ್
Updated By: Digi Tech Desk

Updated on: Jun 27, 2024 | 10:57 AM

ದರ್ಶನ್ ತೂಗುದೀಪ ನಟನೆಯ ‘ಡೆವಿಲ್’ ಸಿನಿಮಾ (Devil Movie) ಬಗ್ಗೆ ಭರ್ಜರಿ ನಿರೀಕ್ಷೆ ಇದೆ. ಸದ್ಯ ಚಿತ್ರದ ಹೀರೋ ದರ್ಶನ್ ಜೈಲು ಸೇರಿದ್ದಾರೆ. ಹೀಗಾಗಿ, ಸಿನಿಮಾದ ಭವಿಷ್ಯ ಏನು ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಈ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ದರ್ಶನ್ ಹೊರಬಂದ ಬಳಿಕವೇ ಈ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ಈ ಮಧ್ಯೆ ಸಿನಿಮಾಗೆ ವಿಲನ್ ತಾವೇ ಎಂದು ಬಿಗ್ ಬಾಸ್ ವಿನಯ್ ಗೌಡ ಅನೌನ್ಸ್ ಮಾಡಿದ್ದಾರೆ.

‘ಡೆವಿಲ್ ಸಿನಿಮಾಗೆ ನಾನು ವಿಲನ್. ನಿರ್ದೇಶಕ ಮಿಲನಾ ಪ್ರಕಾಶ್ ನನ್ನ ನಟನೆ ನೋಡಿದ್ದರು. ಹೀಗಾಗಿ, ಅವರು ಕರೆದು ನನಗೆ ಆಫರ್ ಕೊಟ್ಟರು. ದೊಡ್ಡ ಸ್ಟಾರ್ ಹೀರೋಗೆ ವಿಲನ್ ಎಂದರು. ಆ ಬಳಿಕ ಇದು ದರ್ಶನ್ ಸಿನಿಮಾ ಅನ್ನೋದು ಗೊತ್ತಾಯಿತು. ಸಿನಿಮಾದ ಶೇ.30 ಶೂಟಿಂಗ್ ಆಗಿದೆ. ದರ್ಶನ್ ಜೊತೆಗಿನ ಕಾಂಬಿನೇಷನ್ ಇನ್ನೂ ಶೂಟ್ ಆಗಿಲ್ಲ’ ಎಂದು ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ವಿನಯ್ ಗೌಡ ಮಾಹಿತಿ ನೀಡಿದ್ದಾರೆ.

‘ಸಿನಿಮಾ ನಿಂತೋದ ಬಗ್ಗೆ ಬೇಸರ ಆಗುವುದಿಲ್ಲವೇ?’ ಎನ್ನುವ ಪ್ರಶ್ನೆಗೆ ವಿನಯ್ ಗೌಡ ಮಾತನಾಡಿದ್ದಾರೆ. ‘ಪ್ರಾಜೆಕ್ಟ್​ನ ಭವಿಷ್ಯದ ಬಗ್ಗೆ ಗೊತ್ತಿಲ್ಲ. ಆದರೆ, ಸೂಪರ್ ಪ್ರಾಜೆಕ್ಟ್ ಅದು. ಖಂಡಿತವಾಗಿಯೂ ಬೇಸರ ಆಗುತ್ತದೆ. ಎಲ್ಲವೂ ಸರಿ ಆಗುತ್ತದೆ ಎನ್ನುವ ನಂಬಿಕೆ ನನ್ನದು. ಸಿನಿಮಾ ರಿಲೀಸ್ ಆದ್ಮೇಲಿನ ಹಬ್ಬ ಇದೆಯಲ್ಲ. ಅದು ಮುಖ್ಯ’ ಎಂದಿದ್ದಾರೆ ವಿನಯ್ ಗೌಡ.

ಇದನ್ನೂ ಓದಿ: ಬ್ಯಾಕ್​ ಟು ಬ್ಯಾಕ್ ಮೂರು ಚಿತ್ರಕ್ಕೆ ವಿನಯ್ ಗೌಡ ಸಹಿ; ಸ್ಟಾರ್ ಹೀರೋಗೆ ಖಡಕ್ ವಿಲನ್

ವಿನಯ್ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ ಸ್ಪರ್ಧೆ ಮಾಡಿದ್ದರು. ಇದರಲ್ಲಿ ವಿನಯ್ ಗೌಡ ಅವರು ಸಾಕಷ್ಟು ಗಮನ ಸೆಳೆದರು. ಅವರು ಆನೆ ಎಂದೇ ಫೇಮಸ್ ಆದರು. ಈಗ ಅವರಿಗೆ ಹಲವು ಸಿನಿಮಾ ಆಫರ್​ಗಳು ಬರುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:01 pm, Wed, 26 June 24