‘ಬ್ಲಿಂಕ್’ ನಿರ್ದೇಶಕನ ಹೊಸ ಸಿನಿಮಾ ‘ವಿಡಿಯೋ’; ಡಿಫರೆಂಟ್ ಆಗಿದೆ ಟೀಸರ್

ಕನ್ನಡದಲ್ಲಿ ‘6-5=2’ ರೀತಿಯ ಫೌಂಡ್ ಫೂಟೇಜ್ ಶೈಲಿಯ ಸಿನಿಮಾಗಳ ಸಂಖ್ಯೆ ಕಡಿಮೆ. ಈಗ ಆ ಸಾಲಿಗೆ ‘ವಿಡಿಯೋ’ ಸಿನಿಮಾ ಕೂಡ ಸೇರ್ಪಡೆ ಆಗುತ್ತಿದೆ. ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಶ್ರೀನಿಧಿ ಬೆಂಗಳೂರು ನಿರ್ದೇಶನದ ಈ ಸಿನಿಮಾವನ್ನು ದೀಕ್ಷಿತ್ ಶೆಟ್ಟಿ ಅವರು ನಿರ್ಮಾಣ ಮಾಡಿದ್ದಾರೆ. ಟೀಸರ್ ಬಹಳ ಡಿಫರೆಂಟ್ ಆಗಿದೆ.

‘ಬ್ಲಿಂಕ್’ ನಿರ್ದೇಶಕನ ಹೊಸ ಸಿನಿಮಾ ‘ವಿಡಿಯೋ’; ಡಿಫರೆಂಟ್ ಆಗಿದೆ ಟೀಸರ್
Srinidhi Bengaluru, Dheekshith Shetty

Updated on: May 26, 2025 | 5:51 PM

ಯುವ ನಿರ್ದೇಶಕ ಶ್ರೀನಿಧಿ ಬೆಂಗಳೂರು (Srinidhi Bengaluru) ಅವರು ‘ಬ್ಲಿಂಕ್’ ಸಿನಿಮಾ ಮೂಲಕ ಗಮನ ಸೆಳೆದಿದ್ದರು. 2024ರಲ್ಲಿ ಬಿಡುಗಡೆ ಆದ ಆ ಸಿನಿಮಾದಲ್ಲಿ ಟೈಮ್ ಟ್ರಾವೆಲ್ ಕಹಾನಿಯನ್ನು ತೋರಿಸಲಾಗಿತ್ತು. ಶ್ರೀನಿಧಿ ಡಿಫರೆಂಟ್ ಆಗಿ ಸಿನಿಮಾ ಮಾಡುತ್ತಾರೆ ಎಂಬುದು ‘ಬ್ಲಿಂಕ್’ ಮೂಲಕ ಗೊತ್ತಾಗಿತ್ತು. ಹಾಗಾದ್ರೆ ಅವರ 2ನೇ ಸಿನಿಮಾ ಯಾವ ರೀತಿ ಇರಬಹುದು ಎಂಬ ಕೌತುಕ ಸಿನಿಪ್ರಿಯರಿಗೆ ಮೂಡಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ಶ್ರೀನಿಧಿ ನಿರ್ದೇಶನ ಮಾಡುತ್ತಿರುವ ಎರಡನೇ ಸಿನಿಮಾಗೆ ‘ವಿಡಿಯೋ’ (Video Kannada Movie) ಎಂದು ಶೀರ್ಷಿಕೆ ಇಡಲಾಗಿದೆ. ಅಂದುಕೊಂಡಂತೆಯೇ ಈ ಸಿನಿಮಾದ ಟೀಸರ್ (Video Movie Teaser)  ಬಹಳ ಡಿಫರೆಂಟ್ ಆಗಿ ಮೂಡಿಬಂದಿದೆ.

ಮೊದಲ ಸಿನಿಮಾದಲ್ಲಿ ಸೈನ್ಸ್ ಫಿಕ್ಷನ್ ಶೈಲಿಯನ್ನು ಆಯ್ಕೆ ಮಾಡಿಕೊಂಡಿದ್ದ ನಿರ್ದೇಶಕ ಶ್ರೀನಿಧಿ ಅವರು 2ನೇ ಸಿನಿಮಾದಲ್ಲಿ ಹಾರರ್ ಕಥೆಯನ್ನು ಕೈಗೆತ್ತಿಕೊಂಡಿದ್ದಾರೆ. ಅಂದಹಾಗೆ, ಇದು ಫೌಂಡ್ ಫೋಟೇಜ್ ಶೈಲಿಯಲ್ಲಿ ಮೂಡಿಬರುತ್ತಿರುವ ಸಿನಿಮಾ. ಆದ್ದರಿಂದಲೇ ‘ವಿಡಿಯೋ’ ಎಂದು ಟೈಟಲ್ ಇಡಲಾಗಿದೆ. ಟೀಸರ್ ಇಂಟರೆಸ್ಟಿಂಗ್ ಆಗಿದ್ದು, ಕುತೂಹಲ ಮೂಡಿಸುವಲ್ಲಿ ಯಶಸ್ವಿ ಆಗಿದೆ.

‘ಬ್ಲಿಂಕ್’ ಸಿನಿಮಾದಲ್ಲಿ ನಟ ದೀಕ್ಷಿತ್ ಶೆಟ್ಟಿ ಅವರು ಪ್ರಮುಖ ಪಾತ್ರ ಮಾಡಿದ್ದರು. ಈಗ ಅವರು ಶ್ರೀನಿಧಿ ಜೊತೆ 2ನೇ ಸಿನಿಮಾದಲ್ಲಿ ಕೂಡ ಕೈ ಜೋಡಿಸಿದ್ದಾರೆ. ಈ ಬಾರಿ ಅವರು ನಿರ್ಮಾಪಕನ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಹೌದು, ‘ಧೀ ಸಿನಿಮಾಸ್’ ಸಂಸ್ಥೆಯ ಮೂಲಕ ದೀಕ್ಷಿತ್ ಶೆಟ್ಟಿ ಅವರು ‘ವಿಡಿಯೋ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಹೊಸ ತಲೆಮಾರಿನ ನಿರ್ದೇಶಕರು ಮತ್ತು ನಟಿಯರಿಂದ ಟೀಸರ್ ಬಿಡುಗಡೆ ಮಾಡಿಸಲಾಗಿದೆ.

ಇದನ್ನೂ ಓದಿ
‘ಸ್ಯಾಂಡಲ್​​ವುಡ್ ಸಣ್ಣ ಇಂಡಸ್ಟ್ರಿ ಆಗಿತ್ತು, ಈಗ ಹೇಗೆ ಬೆಳೆದಿದೆ ನೋಡಿ’
ಸಿನಿಮಾ ರಂಗದವರಿಗೆ ಡಿಕೆ ಶಿವಕುಮಾರ್ ಎಚ್ಚರಿಕೆ ಉಮಾಪತಿ ಹೇಳಿದ್ದೇನು?
4 ಚಿತ್ರಮಂದಿರ, 23 ಸಿನಿಮಾ ಸ್ಕ್ರೀನ್​, ಡಿಸಿಎಂ ಡಿಕೆಶಿಯ ಸಿನಿಮಾ ನಂಟು
‘ನೆಟ್ಟು, ಬೋಲ್ಟ್ ಟೈಟ್ ಮಾಡುವೆ’: ನಟರಿಗೆ ನೇರ ಎಚ್ಚರಿಕೆ ಕೊಟ್ಟ ಡಿಕೆಶಿ

‘ವಿಡಿಯೋ’ ಸಿನಿಮಾ ಟೀಸರ್:

ಇದು ಹಾರರ್ ಕತೆ ಇರುವ ಸಿನಿಮಾ ಆದ್ದರಿಂದ ವೇದಿಕೆಯಲ್ಲಿ ದೆವ್ವದ ಹಾಡು ಹೇಳುವ ಮೂಲಕ ‘ವಿಡಿಯೋ’ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜೀವನ್ ಶಿವಕುಮಾರ್, ಭರತ, ತೇಜೇಶ್, ನಲ್ಮೇ ನಾಚಿಯಾರ್, ಪ್ರಿಯಾ ಜೆ. ಆಚಾರ್ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡುತ್ತಿದ್ದಾರೆ.

ಇದನ್ನೂ ನೋಡಿ: ಚಿತ್ರರಂಗದಲ್ಲಿ ದಿಯಾ ದೀಕ್ಷಿತ್ ಶೆಟ್ಟಿ ಹೊಸ ಹೆಜ್ಜೆ

‘ವಿಡಿಯೋ’ ಸಿನಿಮಾಗೆ ಪ್ರಸನ್ನ ಕುಮಾರ್ ಅವರು ಸಂಗೀತ ನೀಡುತ್ತಿದ್ದಾರೆ. ಅವಿನಾಶ್ ಶಾಸ್ತ್ರಿ ಅವರು ಛಾಯಾಗ್ರಣದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಭರತ್ ಸಾಗರ್ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಟೀಸರ್ ಬಿಡುಗಡೆ ಮಾಡಿರುವ ಚಿತ್ರತಂಡ ಈಗ ಶೂಟಿಂಗ್​ಗೆ ಚಾಲನೆ ನೀಡಿದೆ. 2025ರಲ್ಲೇ ಸಿನಿಮಾವನ್ನು ತೆರೆಕಾಣಿಸುವ ಗುರಿ ಇಟ್ಟುಕೊಳ್ಳಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 4:57 pm, Mon, 26 May 25