AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಎಡಗೈ ಅಪಘಾತಕ್ಕೆ ಕಾರಣ’ ಬಿಡುಗಡೆಗೆ ‘ಶಾಖಾಹಾರಿ’ , ‘ಬ್ಲಿಂಕ್’ ನಿರ್ಮಾಪಕರ ನೆರವು

Edagai Apaghatakke Karana: ದಿಗಂತ್ ನಟನೆಯ ‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾ ಭಿನ್ನ ಹೆಸರು, ಟೀಸರ್​ನಿಂದ ಗಮನ ಸೆಳೆದಿದೆ. ಆದರೆ ಅನಿವಾರ್ಯ ಕಾರಣಗಳಿಂದ ಸಿನಿಮಾ ಬಿಡುಗಡೆ ಆಗಿರಲಿಲ್ಲ. ಇದೀಗ ‘ಬ್ಲಿಂಕ್’ ಮತ್ತು ‘ಶಾಖಾಹಾರಿ’ ಸಿನಿಮಾದ ನಿರ್ಮಾಪಕರು ಒಟ್ಟಾಗಿ ಸಿನಿಮಾ ಬಿಡುಗಡೆಗೆ ಮುಂದಾಗಿದ್ದಾರೆ.

‘ಎಡಗೈ ಅಪಘಾತಕ್ಕೆ ಕಾರಣ’ ಬಿಡುಗಡೆಗೆ ‘ಶಾಖಾಹಾರಿ’ , ‘ಬ್ಲಿಂಕ್’ ನಿರ್ಮಾಪಕರ ನೆರವು
Eak
Follow us
ಮಂಜುನಾಥ ಸಿ.
|

Updated on:Apr 18, 2025 | 4:25 PM

ದಿಗಂತ್ (Diganth) ನಟನೆಯ ‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾ, ಭಿನ್ನ ಹೆಸರು, ಕತೆಯ ಆಯ್ಕೆಯಿಂದ ಸದ್ದು ಮಾಡಿದೆ. ಆದರೆ ಅನಿವಾರ್ಯ ಕಾರಣಗಳಿಂದಾಗಿ ಸಿನಿಮಾದ ಬಿಡುಗಡೆ ತಡವಾಗುತ್ತಲೇ ಸಾಗುತ್ತಿದೆ. ಆದರೆ ಇದೀಗ ಇನ್ನಿಬ್ಬರು ಸಿನಿಮಾ ನಿರ್ಮಾಪಕರು ‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾದ ಜೊತೆಗೆ ಕೈ ಜೋಡಿಸಿದ್ದು, ಸಿನಿಮಾ ಬಿಡುಗಡೆಗೆ ಮುಂದಾಗಿದ್ದಾರೆ. ಆ ಮೂಲಕ ಒಳ್ಳೆಯ ಸಿನಿಮಾವನ್ನು ಜನರ ಮುಂದೆ ತರುವ ಪ್ರಯತ್ನಕ್ಕೆ ಕೈ ಜೋಡಿಸಿದ್ದಾರೆ.

ಹೊಸ ರೀತಿಯ ಸಿನಿಮಾ ಮಾಡಿ ಗೆದ್ದಿದ್ದ ಇಬ್ಬರು ನಿರ್ಮಾಪಕರು ಈಗ ‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾಕ್ಕಾಗಿ ಒಂದಾಗಿದ್ದಾರೆ. ‘ಬ್ಲಿಂಕ್’ ಮತ್ತು ‘ಶಾಖಾಹಾರಿ’ ಸಿನಿಮಾಗಳ ನಿರ್ಮಾಪಕರಾದ ರವಿಚಂದ್ರನ್ ಎಜೆ ಮತ್ತು ರಾಜೇಶ್ ಕೀಳಂಬಿ ಅವರುಗಳು ಒಟ್ಟಿಗೆ ಸೇರಿ ‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾ ಅನ್ನು ಬಿಡುಗಡೆ ಮಾಡುತ್ತಿದ್ದಾರೆ. ಆ ಮೂಲಕ ಬಹುತೇಕ ನಿಂತೇ ಹೋಗಿದ್ದ ಸಿನಿಮಾಕ್ಕೆ ಮರು ಜೀವ ನೀಡಿದ್ದಾರೆ.

‘ಬ್ಲಿಂಕ್’ ಸಿನಿಮಾದ ನಿರ್ಮಾಪಕರಾದ ರವಿಚಂದ್ರ ಅವರು ಎಡಗೈ ಸಿನಿಮಾಗೆ ವಿತರಣೆ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ‘ಶಾಖಹಾರಿ’ ನಿರ್ಮಾಪಕ ರಾಜೇಶ್ ಕೀಳಂಬಿ ಸಹ ನಿರ್ಮಾಪಕರಾಗಿ ಎಂಟ್ರಿ ಕೊಟ್ಟಿದ್ದಾರೆ. ‘ಶಾಖಹಾರಿ’ ಸಿನಿಮಾದ ರಾಜೇಶ್ ಅವರು ಯಾವುದೇ ಸಿನಿಮಾವನ್ನು ಕೈಗೆತ್ತಿಕೊಂಡಿರಲಿಲ್ಲ. ಆದರೆ ‘ಎಡಗೈ..’ ಸಿನಿಮಾದ ಕತೆ, ಮೇಕಿಂಗ್ ಇಷ್ಟವಾಗಿ ಆ ಸಿನಿಮಾಕ್ಕೆ ಕೈ ಹಾಕಿದ್ದಾರೆ.

ಇದನ್ನೂ ಓದಿ:ಮಂಗಳೂರು ವಿದ್ಯಾರ್ಥಿ ನಾಪತ್ತೆ ಕೇಸ್​: ಮನೆಗೆ ಹೋಗಲು ಒಪ್ಪದ ದಿಗಂತ್​, ಪೊಲೀಸ್ ವರದಿ

ಇಬ್ಬರೂ ನಿರ್ಮಾಪಕರು ‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾ ವೀಕ್ಷಿಸಿ ಇಷ್ಟಪಟ್ಟು ಸಿನಿಮಾದ ಬಿಡುಗಡೆಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ‘ಶಾಖಹಾರಿ’ ಸಿನಿಮಾದ ನಿರ್ಮಾಪಕ ರಾಜೇಶ್ ಕೀಳಂಬಿ, ‘ಎಡಗೈ ಸಿನಿಮಾದ ಕಂಟೆಂಟ್ ಕ್ವಾಲಿಟಿ ಅದ್ಭುತವಾಗಿದೆ ಹಾಗೂ ಈ ಸಿನಿಮಾದಿಂದ ನನ್ನ ಪ್ರೊಡಕ್ಷನ್ ವ್ಯಾಲ್ಯೂ ಕೂಡ ಜಾಸ್ತಿ ಆಗುತ್ತೆ ಹಾಗಾಗಿ ಈ ಸಿನಿಮಾ ರಿಲೀಸ್ ಮಾಡಲು ಕೈಜೋಡಿಸಿದ್ದೇನೆ. ಶಾಖಹಾರಿ ಮತ್ತು ಬ್ಲಿಂಕ್ ಸಿನಿಮಾ ಮಾಡುವಾಗ ನಾವಿಬ್ಬರು ಹೊಸ ನಿರ್ಮಾಪಕರು ಆದರೀಗ ಇಬ್ಬರ ಅನುಭವ ಈ ಸಿನಿಮಾಗೆ ಸಹಾಯವಾಗಲಿದೆ’ ಎಂದು ಹೇಳಿದ್ದಾರೆ.

‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾದ ನಿರ್ದೇಶಕ ಸಮರ್ಥ್ ಈ ಬಗ್ಗೆ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಅನುಭವಿ ನಿರ್ಮಾಪಕರ ಸೇರ್ಪಡೆಯಿಂದ ತಂಡಕ್ಕೆ ಮತ್ತಷ್ಟು ಬಲ ಬಂದಂತೆ ಆಗಿದೆ, ಯಶಸ್ವಿ ಸಿನಿಮಾಗಳನ್ನು ನೀಡಿದ ನಿರ್ಮಾಪಕರು ನಮ್ಮ ಸಿನಿಮಾಕ್ಕೆ ಬೆಂಬಲ ನೀಡುತ್ತಿರುವುದು ಖುಷಿ ನೀಡಿದೆ’ ಎಂದಿದ್ದಾರೆ.

ರವಿಚಂದ್ರ ಎಜೆ ಮಾತನಾಡಿ, ‘ಕಳೆದ ಆರು ತಿಂಗಳುಗಳಲ್ಲಿ ಹಲವಾರು ಕನ್ನಡ ಸಿನಿಮಾಗಳನ್ನು ನೋಡಿದ್ದೇನೆ. ಅವುಗಳಲ್ಲಿ ಎಡಗೈ ಅಪಘಾತಕ್ಕೆ ಕಾರಣ ಸಿನಿಮಾ ನಿಜವಾಗಿಯೂ ಚೆನ್ನಾಗಿದೆ. ನಮ್ಮ ಜನನಿ ಪಿಕ್ಚರ್ಸ್ ಅಡಿಯಲ್ಲಿ, ‘BTS’, ‘ನೋಡಿದವರು ಏನಂತರೆ’, ‘ಅನಾಮಧೇಯ ಅಶೋಕ್ ಕುಮಾರ್’ ಮತ್ತು ‘ಭಾವ ತೀರ ಯಾನ’ ಇನ್ನೂ ಕೆಲವು ಸಿನಿಮಾಗಳನ್ನು ವಿತರಣೆ ಮಾಡಿದ್ದೇವೆ. ಅವೆಲ್ಲ ಬಹಳ ಜನ ಮೆಚ್ಚುಗೆ ಗಳಿಸಿವೆ. ಈಗ ‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾ ವಿತರಣೆ ಮಾಡುತ್ತಿದ್ದೇವೆ, ಈ ಸಿನಿಮಾ ಸಹ ಜನ ಮೆಚ್ಚುಗೆ ಗಳಿಸುವ ವಿಶ್ವಾಸವಿದೆ’ ಎಂದಿದ್ದಾರೆ.

ಲವರ್ ಬಾಯ್ ಆಗಿ ಪ್ರೇಕ್ಷಕರಿಗೆ ಪರಿಚಯವಾಗಿರುವ ದಿಗಂತ್ ಈ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರದಲ್ಲಿ ದಿಗಂತ್​ಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಮತ್ತು ಧನು ಹರ್ಷ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಬಿಡುಗಡೆ ದಿನಾಂಕವನ್ನು ಶೀಘ್ರವೇ ಘೋಷಣೆ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:26 pm, Fri, 18 April 25

ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ
ಸೋಮನಹಳ್ಳಿ ಟೋಲ್ ವಿರುದ್ಧ ರೈತರು, ಸ್ಥಳೀಯರಿಂದ ಹೋರಾಟ
ಸೋಮನಹಳ್ಳಿ ಟೋಲ್ ವಿರುದ್ಧ ರೈತರು, ಸ್ಥಳೀಯರಿಂದ ಹೋರಾಟ