AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಾಸ್’ ಹೆಸರಲ್ಲಿ ಸಿನಿಮಾ; ಸೆಲೆಬ್ರಿಟಿಯೊಬ್ಬ ಪ್ರೆಯಸಿಗಾಗಿ ಕೊಲೆ ಮಾಡೋ ಕಥೆ

ತನುಷ್ ಶಿವಣ್ಣ ನಟನೆಯ 'ಬಾಸ್' ಕನ್ನಡ ಕ್ರೈಮ್ ಥ್ರಿಲ್ಲರ್ ಸಿನಿಮಾ ಡಿಸೆಂಬರ್‌ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಸೆಲೆಬ್ರಿಟಿಯೊಬ್ಬ ಪ್ರೇಯಸಿಗಾಗಿ ನಡೆಸುವ ಕೊಲೆ ಮತ್ತು ಅದನ್ನು ಮುಚ್ಚಿಹಾಕುವ ಪ್ರಯತ್ನದ ಸುತ್ತ ಕಥೆ ಹೆಣೆಯಲಾಗಿದೆ. ವಿ. ಲವ ನಿರ್ದೇಶನದ ಈ ಚಿತ್ರ 'ಸತ್ಯಮೇವ ಜಯತೇ' ಅಡಿಬರಹ ಹೊಂದಿದೆ. ಬೆಂಗಳೂರಿನಲ್ಲಿ ಚಿತ್ರೀಕರಣ ಪೂರ್ಣಗೊಂಡಿದ್ದು, ಟೀಸರ್ ಬಿಡುಗಡೆಗೆ ಸಜ್ಜಾಗಿದೆ.

‘ಬಾಸ್’ ಹೆಸರಲ್ಲಿ ಸಿನಿಮಾ; ಸೆಲೆಬ್ರಿಟಿಯೊಬ್ಬ ಪ್ರೆಯಸಿಗಾಗಿ ಕೊಲೆ ಮಾಡೋ ಕಥೆ
ಬಾಸ್ ಮೂವಿ
ರಾಜೇಶ್ ದುಗ್ಗುಮನೆ
|

Updated on: Nov 03, 2025 | 12:37 PM

Share

ಚಿತ್ರರಂಗದಲ್ಲಿ ದಿನ ಬೆಳಗಾದರೆ ಸಾಕಷ್ಟು ಸಿನಿಮಾಗಳು ಸೆಟ್ಟೇರುತ್ತವೆ. ಕೆಲವು ಪೂರ್ಣಗೊಂಡು ರಿಲೀಸ್ ಕೂಡ ಆಗುತ್ತವೆ. ಈ ಪೈಕಿ ಕೆಲವು ಸಿನಿಮಾಗಳು ಟೈಟಲ್ ಮೂಲಕ ಸದ್ದು ಮಾಡಿದರೆ, ಇನ್ನೂ ಕೆಲವು ಕಥೆಯ ಕಾರಣಕ್ಕೆ ಸದ್ದು ಮಾಡುತ್ತವೆ. ಈಗ ಕನ್ನಡದಲ್ಲಿ ‘ಬಾಸ್’ ಹೆಸರಿನ (Boss) ಸಿನಿಮಾ ಬರುತ್ತಿದೆ. ಸಿರಿ ಪ್ರೊಡಕ್ಷನ್ಸ್ ನಿರ್ಮಾಣದ, ವಿ. ಲವ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರಕ್ಕೆ ತನುಷ್ ಶಿವಣ್ಣ ನಾಯಕ. ಈ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದೆ.  ಈ ಚಿತ್ರ ಟೈಟಲ್ ಹಾಗೂ ಕಥೆಯ ಕಾರಣಕ್ಕೆ ಚರ್ಚೆ ಆಗುತ್ತಿದೆ.

‘ಬಾಸ್’ ಕ್ರೈಮ್ ಥ್ರಿಲ್ಲರ್ ಆಧಾರಿತ ಚಿತ್ರ ಅನ್ನೋದು ವಿಶೇಷ. ಸೆಲೆಬ್ರಿಟಿಯೊಬ್ಬ ಪ್ರೇಯಸಿಗಾಗಿ ವ್ಯಕ್ತಿಯನ್ನು ಕೊಂದು, ಆ ಶವನ ಮೋರಿಗೆ ಎಸೆಯುತ್ತಾನೆ. ನಂತರ ಸೆಲೆಬ್ರಿಟಿ ಆ ಕೇಸ್​ನ ಮುಚ್ಚಿ ಹಾಕಲು ಪ್ರಯತ್ನಿಸುತ್ತಾನಂತೆ. ಇದು ಚಿತ್ರದ ಕಥೆ! ‘ಇದು ನೈಜ ಘಟನೆ ಆಧಾರಿತ ಸಿನಿಮಾ. ಆದರೆ, ಇದು ಅದಲ್ಲ’ ಎನ್ನುತ್ತಾರೆ ನಿರ್ದೇಶಕರು.

ಬೆಂಗಳೂರಿನಲ್ಲಿ ಒಂದೇ ಹಂತದಲ್ಲಿ ‘ಬಾಸ್’ ಶೂಟಿಂಗ್ ಪೂರ್ಣಗೊಂಡಿದೆ. ಡಿಸೆಂಬರ್​ನಲ್ಲಿ ಸಿನಿಮಾ ರಿಲೀಸ್ ಮಾಡುವ ಆಲೋಚನೆ ತಂಡಕ್ಕೆ ಇದೆ. ಈ ಚಿತ್ರದಲ್ಲಿ  ತನುಷ್ ಶಿವಣ್ಣಗೆ ಜೊತೆಯಾಗಿ ಮೋನಿಕಾ ಗೌಡ ನಟಿಸಿದ್ದಾರೆ. ‘ಬಾಸ್’ ಚಿತ್ರಕ್ಕೆ ‘ಸತ್ಯಮೇವ ಜಯತೇ’ ಎಂಬ ಅಡಿಬರ ಇದೆ. ಕೆಲವೇ ದಿನಗಳಲ್ಲಿ ಟೀಸರ್ ಕೂಡ ಬರಲಿದೆ. ಇದಾದ ಬಳಿಕ ಸಿನಿಮಾ ಬಗ್ಗೆ ಕ್ಲ್ಯಾರಿಟಿ ಸಿಗಲಿದೆ ಎಂಬುದು ಅವರ ಆಲೋಚನೆ.

ಇದನ್ನೂ ಓದಿ: ನಿಲ್ಲಲೇ ಇಲ್ಲ ‘ಬಾಸ್ ಬಾಸ್ ಡಿ ಬಾಸ್’ ಜೈಕಾರ: ಬೇಸರದಿಂದ ಮಾತು ನಿಲ್ಲಿಸಿದ ರಚಿತಾ ರಾಮ್

ಈ ಚಿತ್ರದಲ್ಲಿ ಸೆಲೆಬ್ರಿಟಿ ಪಾತ್ರದಲ್ಲಿ ತನುಷ್ ನಟಿಸಿದ್ದಾರೆ. ‘ನಿರ್ದೇಶಕರು ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ನಾನು ಈ ಚಿತ್ರದಲ್ಲಿ ಸೆಲೆಬ್ರಿಟಿ ಪಾತ್ರ ಮಾಡಿದ್ದೇನೆ. ನನ್ನನ್ನು ಎಲ್ಲರೂ ಬಾಸ್ ಎನ್ನುತ್ತಾರೆ’ ಎಂದು ಪಾತ್ರದ ಬಗ್ಗೆ ಹೇಳಿಕೊಂಡರು ಶಿವಣ್ಣ. ಈ ಚಿತ್ರದಲ್ಲಿ ಮಲಯಾಳಂ ನಟ ವಿಜೇಶ್ ಲೀ ಪೊಲೀಸ್ ಪಾತ್ರ ಮಾಡಿದ್ದಾರೆ. ಸಂದೀಪ್, ಸುಜನ್ ಶೆಟ್ಟಿ, ವೀರೇನ್ ಕೇಶವ್, ಜೋಶ್ ಅಕ್ಷಯ್, ಮಹೇಶ್, ದುನಿಯಾ ಮಹೇಶ್,  ಮನು, ಮಂಡ್ಯ ರವಿ, ಪೃಥ್ವಿ, ನಿಶಾಂತ್, ಮಹೇಂದ್ರ ರಾವ್,  ಮೋಹಿತ್, ಲಕ್ಷ್ಮಣ್ ಪೂಜಾರಿ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾಗೆ ಡೆವಿ ಸುರೇಶ್ ಸಂಗೀತ ನಿರ್ದೇಶನ, ಶರತ್ ಛಾಯಾಗ್ರಹಣ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ