ನಟ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ಕಳೆದಿದೆ. ಭಿನ್ನ ಭಿನ್ನ ಸಿನಿಮಾಗಳಲ್ಲಿ ನಟಿಸಿ ಸುದೀಪ್ ಅಭಿಮಾನಿಗಳನ್ನು ರಂಜಿಸಿದ್ದಾರೆ. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸನ್ಮಾನ ಮಾಡುತ್ತಿದ್ದಾರೆ.
ಕನ್ನಡ ಮಾತ್ರವಲ್ಲದೆ ಸುದೀಪ್ ತೆಲುಗು ಹಾಗೂ ಬಾಲಿವುಡ್ನಲ್ಲೂ ನಟಿಸಿದ್ದಾರೆ. ಎಲ್ಲಾ ಭಾಷೆಯ ಸಿನಿಮಾಗಳನ್ನೂ ಸೇರಿಸಿದರೆ ಸುದೀಪ್ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಕನ್ನಡ ಚಿತ್ರರಂಗಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ ನಟನಿಗೆ ಗೌರವ ಸಲ್ಲಿಸಲು ಸಿದ್ಧತೆ ನಡೆದಿದೆ.
ಸುದೀಪ್ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೋಟಿಗೊಬ್ಬ3 ಚಿತ್ರತಂಡದಿಂದ ಮಾರ್ಚ್ 15ರಂದು ಸೋಮವಾರ ಸಂಜೆ ಬೆಳ್ಳಿ ಹಬ್ಬ ಆಚರಣೆ ಮಾಡಲಾಗುತ್ತಿದೆ. ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಕಾರ್ಯಕ್ರಮ ನಿಯೋಜನೆಗೊಂಡಿದೆ.
ಕಿಚ್ಚನ ಬೆಳ್ಳಿ ಹಬ್ಬಕ್ಕೆ ಸ್ಯಾಂಡಲ್ವುಡ್ ಸಾಕ್ಷಿಯಾಗಲಿದೆ. ಕ್ರೇಜಿಸ್ಟಾರ್ ರವಿಚಂದ್ರನ್, ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಸೇರಿದಂತೆ ಬಹುತೇಕ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ಗೆ ಯಡಿಯೂರಪ್ಪ ಸನ್ಮಾನಿಸಲಿದ್ದಾರೆ. ಈಗಾಲೇ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಚಿತ್ರ ತಂಡ ಆಹ್ವಾನ ನೀಡಿದೆ.
1997ರಲ್ಲಿ ತೆರೆಕಂಡ ತಾಯವ್ವ ಸಿನಿಮಾ ಮೂಲಕ ಸುದೀಪ್ ಸ್ಯಾಂಡಲ್ವುಡ್ಗೆ ಕಾಲಿಟ್ಟರು. ನಂತರ ಅವರು ಸಾಲು ಸಾಲು ಚಿತ್ರಗಳಲ್ಲಿ ನಟಿಸಲು ಆರಂಭಿಸಿದರು. ಅವರ ನಟನೆಯನ್ನು ನೋಡಿ ಪರಭಾಷೆಯವರು ಕೂಡ ಸುದೀಪ್ಗೆ ಆಹ್ವಾನ ನೀಡಿದ್ದರು. ಸದ್ಯ ಸುದೀಪ್ ಕೋಟ್ಟಿಗೊಬ್ಬ 3, ವಿಕ್ರಾಂತ್ ರೋಣ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಉಪೇಂದ್ರ ನಟನೆಯ ಕಬ್ಜಾ ಚಿತ್ರದಲ್ಲಿ ಸುದೀಪ್ ವಿಶೇಷ ಪಾತ್ರ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: ಕಿಚ್ಚ ಸುದೀಪ್ ಗೆಳೆಯನಲ್ಲ ಎಂದಿದ್ದ ನಟ ದರ್ಶನ್ ಟ್ವಿಟ್‌ಗೆ ಇದೀಗ 4 ವರ್ಷ
Roberrt vs Kotigobba 3: ಸಿನಿಮಾಗಳ ರಿಲೀಸ್ಗೂ ಮುನ್ನ ಇನ್ನೊಂದು ರೀತಿಯಲ್ಲಿ ದರ್ಶನ್-ಸುದೀಪ್ ಪೈಪೋಟಿ!