2020ಕ್ಕೆ ಸ್ಯಾಂಡಲ್ವುಡ್ನಲ್ಲಿ ತೆರೆ ಕಾಣಲಿರೋ, ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಆಗ್ತಿರೊ ಸಿನಿಮಾಗಳ ಪೈಕಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ವಿಕ್ರಮ್ ರವಿಚಂದ್ರನ್ ಅಭಿನಯದ ತ್ರಿವಿಕ್ರಮ ಸಿನಿಮಾ ಕೂಡ ಒಂದು. ರೋಸ್ , ಮಾಸ್ ಲೀಡರ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ ಸಹಾನಾ ಮೂರ್ತಿ ನಿರ್ದೇಶನದಲ್ಲಿ ಮೂಡಿ ಬರ್ತಿರೊ ಚಿತ್ರಕ್ಕೆ ಉದ್ಯಮಿ ಸೋಮಣ್ಣ (ರಾಮ್ಕೋ) ಬಂಡವಾಳ ಹಾಕಿದ್ದಾರೆ. ಈಗಾಗಲೇ ಹಲವು ವಿಶೇಷತೆಗಳಿಂದ ಸ್ಯಾಂಡಲ್ವುಡ್ ಮಾತ್ರವಲ್ಲ ಇತರ ಚಿತ್ರರಂಗಗಳ ಗಮನ ಸೆಳೆತ್ತಿರೊ ಚಿತ್ರದ ಪ್ರತಿ ಸಿಕ್ವೀಲ್ ಶೂಟಿಂಗ್ನಲ್ಲೂ ಹೊಸತನ, ಹೊಸ ಪ್ರಯತ್ನವೇ ಈ ಕುತೂಹಲಕ್ಕೆ ಕಾರಣವಾಗಿದೆ. ಇದಕ್ಕೆ ಮತ್ತೊಂದು ಉದಾಹರಣೆ ಚಿತ್ರದಲ್ಲಿ ಮಾಡಿರೋ ಸಾಹಸದ ಚಿತ್ರೀಕರಣ. ಸೌತ್ ಇಂಡಿಯಾದ ಮೊಸ್ಟ್ ಹ್ಯಾಪನಿಂಗ್ ಫೈಟ್ ಮಾಸ್ಟರ್ ಗಳು ಸಾಹಸ ದೃಶ್ಯಗಳನ್ನ ಸೆರೆ ಹಿಡಿಯುತ್ತಿದ್ದಾರೆ.
ಒಂಟೆ ಮೇಲೆಯೇ ನಡೆಯುತ್ತದೆ ಥ್ರಿಲ್ಲಿಂಗ್ ಫೈಟ್
ಈ ಹಿಂದೆ ಚಿತ್ರಗಳಲ್ಲಿ ಸಾಂಗ್ಗಳ ಮೆಕಿಂಗ್ಗೆ ಹೆಚ್ಚಿನ ಪ್ರಾಮುಖ್ಯತೆ ಹಾಗೂ ಹೆಚ್ಚಿನ ಹಣ ಖರ್ಚು ಮಾಡಲಾಗುತ್ತಿತ್ತು. ಆದ್ರೆ ಬದಲಾದ ಟ್ರೆಂಡ್ನಲ್ಲಿ ಸಿನಿಮಾಗಳ ಸಾಹಸ ದೃಶ್ಯಗಳಿಗೆ, ಕ್ಲೈಮ್ಯಾಕ್ಸ್ ಸೀನ್ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಇನ್ನು ತ್ರಿವಿಕ್ರಮ ಸಿನಿಮಾದಲ್ಲಿ ಸೌತ್ ಇಂಡಿಯಾ ಸಿನಿಮಾಗಳಲ್ಲೇ ನೀವು ನೋಡಿರದ ವಿಶೇಷ ದೃಶ್ಯಗಳನ್ನ ನೋಡಿ ಥ್ರಿಲ್ ಆಗಬಹುದು. ಅದುವೇ ಒಂಟೆ ಮೇಲಿನ ಫೈಟ್ ಹಾಗೂ ಒಂಟೆಗಳ ಮೂಲಕ ನಡೆಯೋ ಚೇಸಿಂಗ್ ಸೀನ್. ಬೈಕ್ಗಳ ಮೇಲೆ ನೀರಿನ ಒಳಗೆ, ಆಕಾಶದಲ್ಲಿ, ಕುದುರೆ, ಆನೆಗಳ ಮೇಲೆ ಸಮುದ್ರದಲ್ಲಿ ಹೀಗೆ ನಾನಾ ಬಗೆಯ ಫೈಟ್ ಸೀನ್ಗಳನ್ನ ನೀವು ನೋಡಿಯೇ ಇರ್ತೀರಾ.
‘ತ್ರಿವಿಕ್ರಮ’ನ ಸಾಹಸಕ್ಕೆ ಫೈಟ್ ಮಾಸ್ಟರ್ಸ್ ಯಾರ್ ಯಾರ್ ಗೊತ್ತಾ..?
ಆದ್ರೆ ಇದೇ ಮೊದಲ ಬಾರಿಗೆ ಒಂಟೆಗಳ ಮೇಲೆ ಫೈಟ್ ಸೀನ್ ಶೂಟ್ ಮಾಡಲಾಗಿದೆ, ಅಷ್ಟೇ ಅಲ್ಲ ಒಂಟೆಗಳನ್ನ ಬಳಸಿ ಚೇಸಿಂಗ್ ಸೀನ್ ಕೂಡ ಶೂಟ್ ಮಾಡಲಾಗಿದೆ. ಸೈರಾ, ದಬಾಂಗ್, ಬಾಡಿಗಾಡ್, ಪೊಕಿರಿ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿರೋ ವಿಜಿ ಮಾಸ್ಟರ್, ಒಂಟೆ ಮೇಲಿನ ಸಾಹಸ ದೃಶ್ಯಗಳ ನಿರ್ದೇಶನ ಮಾಡಿದ್ದಾರೆ. ಅಭ್ಯಾಸ ಇಲ್ಲದವರು ಒಂಟೆ ಮೇಲೆ ಕೂತು ಒಂದು ರೌಂಡ್ ಹಾಕೋದೆ ಕಷ್ಟ ಅಂಥದ್ರಲ್ಲಿ ನಟ ವಿಕ್ರಮ್ ಹಾಗೂ ಖಳ ನಟರು ಒಂಟೆಗಳ ಮೇಲೆ ಗಂಟೆಗಟ್ಟಲೆ ಕೂತು ಸಾಹಸ ಮಾಡಿರೋದು ಅವರ ಡೆಡಿಕೇಶನ್ಗೆ ಹಿಡಿದ ಕೈಗನ್ನಡಿ.
‘ಕ್ರೇಜ್’ ಹುಟ್ಟಿಸ್ತಿದೆ ವಿಕ್ರಮ್ ರವಿಚಂದ್ರನ್ ಚೊಚ್ಚಲ ಚಿತ್ರ ತ್ರಿವಿಕ್ರಮ!
ಒಂಟೆಗಳಿಗೆ ತೊಂದರೆಯಾಗದಂತೆ ಆರೈಕೆ ಮಾಡಿ ಪ್ರಾಣಿ-ಪ್ರೀತಿ ಮೆರೆದ ಚಿತ್ರತಂಡ
ಇನ್ನು ಈ ದೃಶ್ಯಗಳ ಶೂಟಿಂಗ್ಗಾಗಿಯೇ ಸುಮಾರು 15 ದಿನ, ಚಿತ್ರದ ನಟಿ ಆಕಾಂಕ್ಷ ಶರ್ಮಾ, ಹಾಸ್ಯ ನಟ ಸಾಧು ಕೋಕಿಲಾ, ಬಾಲಿವುಡ್ ಖ್ಯಾತ ನಟ ರೋಹಿತ್ ರಾಯ್ ಸೇರಿದಂತೆ ಇಡೀ ಚಿತ್ರತಂಡ ರಾಜಸ್ತಾನದಲ್ಲಿ ಬೀಡು ಬಿಟ್ಟಿತ್ತು. ಇನ್ನು ಚಿತ್ರದ ಶೂಟಿಂಗ್ ವೇಳೆ ಒಂಟೆಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಾಕಷ್ಟು ಆರೈಕೆ ಮಾಡಿ ಪ್ರಾಣಿ ಪ್ರೀತಿಯನ್ನ ಚಿತ್ರತಂಡ ಮೆರೆದಿದೆ, ಅದಕ್ಕೆ ತಕ್ಕಂತೆ ಒಂಟೆಗಳು ಕೂಡ ಶೂಟಿಂಗ್ ಗೆ ಸಹಕರಿಸಿವೆ. ಓಟ್ಟಾರೆ ಈ ಥ್ರಿಲ್ಲಿಂಗ್ ಫೈಟಿಂಗ್ ಸೀನ್ ನೋಡ ಬೇಕಾದ್ರೆ ತ್ರಿವಿಕ್ರಮ ತೆರೆಗೆ ಬರೋವರೆಗೂ ಕಾಯಲೇ ಬೇಕು.
Published On - 11:45 am, Tue, 31 December 19