AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ಗೆ ಸ್ಪರ್ಧೆ ಕೊಡಲು ಬರುತ್ತಿದೆ ಮತ್ತೊಬ್ಬ ಸ್ಟಾರ್ ನಟನ ಸಿನಿಮಾ

Peddi movie: ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ತೆರೆಗೆ ಬರಲಿದೆ. ರಣ್ವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾದ ಎರಡನೇ ಭಾಗ ಮಾರ್ಚ್ 19ರಂದೇ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಅಡಿವಿಸೇಷ್ ನಟನೆಯ ‘ಡಕೈತ್’ ಸಿನಿಮಾ ಸಹ ಅದೇ ದಿನ ಬಿಡುಗಡೆ ಆಗಲಿದೆ. ಇದೀಗ ಮತ್ತೊಬ್ಬ ಸ್ಟಾರ್ ನಟನ ಸಿನಿಮಾ ಸಹ ‘ಟಾಕ್ಸಿಕ್’ಗೆ ಸ್ಪರ್ಧೆ ಒಡ್ಡಲು ಬರುತ್ತಿದೆ.

‘ಟಾಕ್ಸಿಕ್’ಗೆ ಸ್ಪರ್ಧೆ ಕೊಡಲು ಬರುತ್ತಿದೆ ಮತ್ತೊಬ್ಬ ಸ್ಟಾರ್ ನಟನ ಸಿನಿಮಾ
Peddi Toxic
ಮಂಜುನಾಥ ಸಿ.
|

Updated on:Dec 19, 2025 | 12:33 PM

Share

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ. ಬಹಳ ಮುಂಚಿತವಾಗಿಯೇ ‘ಟಾಕ್ಸಿಕ್’ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಘೋಷಿಸಿತ್ತು. ಆದರೆ ಇದೀಗ ಕೆಲವು ಸಿನಿಮಾಗಳು ‘ಟಾಕ್ಸಿಕ್’ ಜೊತೆ ಸ್ಪರ್ಧೆಗೆ ಬೀಳುತ್ತಿವೆ. ಈಗಾಗಲೇ ರಣ್ವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾದ ಎರಡನೇ ಭಾಗ ಮಾರ್ಚ್ 19ರಂದೇ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಅಡಿವಿಸೇಷ್ ನಟನೆಯ ‘ಡಕೈತ್’ ಸಿನಿಮಾ ಸಹ ಅದೇ ದಿನ ಬಿಡುಗಡೆ ಆಗಲಿದೆ. ಇದೀಗ ಮತ್ತೊಬ್ಬ ಸ್ಟಾರ್ ನಟನ ಸಿನಿಮಾ ಸಹ ‘ಟಾಕ್ಸಿಕ್’ಗೆ ಸ್ಪರ್ಧೆ ಒಡ್ಡಲು ಬರುತ್ತಿದೆ.

ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾದ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ‘ಪೆದ್ದಿ’ ಸಿನಿಮಾ, ‘ಟಾಕ್ಸಿಕ್’ ಬಿಡುಗಡೆ ಆದ ಒಂದು ವಾರದ ಬಳಿಕ ಬಿಡುಗಡೆ ಆಗಲಿದೆ. ಅಂದರೆ ಮಾರ್ಚ್ 27ಕ್ಕೆ ಸಿನಿಮಾ ತೆರೆಗೆ ಬರಲಿದೆ. ಒಂದು ವಾರದ ಬಳಿಕ ಬಿಡುಗಡೆ ಆದರೂ ಸಹ ಈ ಸಿನಿಮಾ ‘ಟಾಕ್ಸಿಕ್’ ಜೊತೆ ಸ್ಪರ್ಧೆಗೆ ಬೀಳುವ ಸಾಧ್ಯತೆ ದಟ್ಟವಾಗಿದೆ. ‘ಪೆದ್ದಿ’ ಸಿನಿಮಾಕ್ಕೆ ಈಗಾಗಲೇ ಒಳ್ಳೆಯ ಕ್ರೇಜ್ ಇದ್ದು, ‘ಟಾಕ್ಸಿಕ್’ಗೆ ಈ ಸಿನಿಮಾ ಪ್ರಬಲ ಸ್ಪರ್ಧೆಯನ್ನೇ ಒಡ್ಡುವ ಸಾಧ್ಯತೆ ಇದೆ.

ಇದನ್ನೂ ಓದಿ:‘ಚಿಕಿರಿ’ ಹಾಡಿನ ಶೂಟ್​ಗೆ ರಾಮ್ ಚರಣ್ ಹಾಗೂ ತಂಡ ಪಟ್ಟ ಕಷ್ಟ ಅಷ್ಟಿಷ್ಟಲ್ಲ..

ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾದ ಚಿಕಿರಿ-ಚಿಕಿರಿ ಹಾಡು ಈಗಾಗಲೇ ಸಖತ್ ವೈರಲ್ ಆಗಿದೆ. ಈ ಮೊದಲು ಬಿಡುಗಡೆ ಆಗಿದ್ದ ಸಿನಿಮಾದ ಸಣ್ಣ ಟೀಸರ್ ಸಹ ಸಖತ್ ಹಿಟ್ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿತ್ತು. ಆದರೆ ಇತ್ತೀಚೆಗೆ ‘ಪೆದ್ದಿ’ ಸಿನಿಮಾದ ಶೂಟಿಂಗ್ ನಿಗದಿತ ವೇಗದಲ್ಲಿ ನಡೆಯುತ್ತಿಲ್ಲ, ಹಾಗಾಗಿ ಸಿನಿಮಾದ ಬಿಡುಗಡೆ ತಡವಾಗಬಹುದು ಎಂಬ ಸುದ್ದಿ ಹರಿದಾಡಿತ್ತು. ಆದರ ಬೆನ್ನಲ್ಲೆ ಇದೀಗ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ.

‘ಪೆದ್ದಿ’ ಸಿನಿಮಾನಲ್ಲಿ ರಾಮ್ ಚರಣ್ ಜೊತೆಗೆ ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್ ನಟಿಸುತ್ತಿದ್ದಾರೆ. ಇದೇ ಸಿನಿಮಾನಲ್ಲಿ ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ ಸಹ ಪ್ರಮುಖವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ‘ಉಪ್ಪೆನ’ ಸಿನಿಮಾ ನಿರ್ದೇಶಿಸಿ ಗಮನ ಸೆಳೆದಿದ್ದ ಬುಚ್ಚಿಬಾಬು ಸನಾ ಅವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾನಲ್ಲಿ ಕ್ರಿಕೆಟ್​ ಪ್ರಧಾನ ಅಂಶವಾಗಿದೆ. ಹಳ್ಳಿಯ ಕ್ರಿಕೆಟ್ ಆಟಗಾರನೊಬ್ಬನ ಕತೆಯನ್ನು ‘ಪೆದ್ದಿ’ ಸಿನಿಮಾ ಒಳಗೊಂಡಿದೆ. ಸಿನಿಮಾಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದ್ದು, ಎಆರ್ ರೆಹಮಾನ್ ಸಂಗೀತ ನೀಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:32 pm, Fri, 19 December 25