Actress: ಈ ಕ್ಯೂಟ್ ನಟಿಯ ಗುರುತಿಸಬಲ್ಲಿರಾ? ಕನ್ನಡಕ್ಕೆ ಬಹುಪರಿಚಿತ ನಟಿ ಈಕೆ

|

Updated on: Mar 01, 2023 | 9:57 PM

ಪಂಜಾಬಿನಲ್ಲಿ ಹುಟ್ಟಿದರೂ ಬಾಲ್ಯ, ಯೌವ್ವನವನ್ನು ಬೆಂಗಳೂರಿನಲ್ಲಿಯೇ ಕಳೆದ ಈ ಬಹುಭಾಷಾ ನಟಿಯನ್ನು ಗುರುತಿಸಬಲ್ಲಿರಾ? ಕನ್ನಡ ಸಿನಿ ಪ್ರೇಕ್ಷಕರಿಗೆ ಬಹು ಪರಿಚಿತ ನಟಿ ಈಕೆ

Actress: ಈ ಕ್ಯೂಟ್ ನಟಿಯ ಗುರುತಿಸಬಲ್ಲಿರಾ? ಕನ್ನಡಕ್ಕೆ ಬಹುಪರಿಚಿತ ನಟಿ ಈಕೆ
ನಟಿ ಯಾರು?
Follow us on

ಬಾಲ್ಯದ ಚಿತ್ರಗಳೇ ಹಾಗೆ ಹಳೆಯ ನೆನಪು ತಾಜಾ ಮಾಡುತ್ತವೆ. ಆದರೆ ಸಿನಿಮಾ ಸೆಲೆಬ್ರಿಟಿಗಳ ಬಾಲ್ಯದ ಚಿತ್ರವನ್ನು ನೋಡಿದಾಗ ಜನರು ಗುರುತಿಸುವುದು ಆಗ ಹೇಗಿದ್ದರು, ಈಗ ಅದೆಷ್ಟು ಗ್ಲಾಮರಸ್ ಆಗಿಬಿಟ್ಟಿದ್ದಾರಲ್ಲ ಎಂದು. ಇಲ್ಲಿ ಒಬ್ಬ ನಟಿಯ ಚಿತ್ರವಿದೆ. ಎಲ್ಲ ಮುದ್ದು ಹೆಣ್ಣು ಮಕ್ಕಳಂತೆ ಅಮ್ಮನಿಂದ ಜಡೆ ಹಾಕಿಸಿಕೊಳ್ಳುತ್ತಿರುವ ಮುದ್ದು ಬಾಲಕಿ ಈಗ ಬಹುಭಾಷಾ ನಟಿ. ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಚಿತ್ರದಲ್ಲಿರುವ ಈ ನಟಿ ಜನಿಸಿದ್ದು ಪಂಜಾಬಿನಲ್ಲಾದರೂ ತನ್ನ ಬಾಲ್ಯವನ್ನು ಕಳೆದಿದ್ದು ಬೆಂಗಳೂರಿನಲ್ಲಿಯೇ. ಶಾಲೆ, ಕಾಲೇಜು ಎಲ್ಲವನ್ನೂ ಬೆಂಗಳೂರಿನಲ್ಲಿಯೇ ಮುಗಿಸಿದ ಈ ಚೆಲುವೆ. ಮೊದಲಿಗೆ ನಟಿಸಿದ್ದು ಮಾತ್ರ ತೆಲುಗು ಸಿನಿಮಾದಲ್ಲಿ. ಆ ನಂತರ ಕನ್ನಡಕ್ಕೆ ಬಂದು ಸಾಲು-ಸಾಲು ಕನ್ನಡ ಸಿನಿಮಾದಲ್ಲಿ ನಟಿಸಿದ ನಟಿ ಈಗ ಸಂಪೂರ್ಣವಾಗಿ ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿಬಿಟ್ಟಿದ್ದಾರೆ.

ಈ ಮುದ್ದು ಮುಖದ ಚೆಲುವೆ ಕೃತಿ ಕರಬಂಧ (Kriti Kharbanda). ಯಶ್ ನಟನೆಯ ಸೂಪರ್ ಹಿಟ್ ಸಿನಿಮಾ ಗೂಗ್ಲಿ ಸೇರಿದಂತೆ, ಚಿರು, ಪ್ರೇಮ್ ಅಡ್ಡ, ಗಲಾಟೆ, ತಿರುಪತಿ ಎಕ್ಸ್​ಪ್ರೆಸ್, ಮಿಂಚಾಗಿ ನೀನು ಬರಲು, ಮಾಸ್ತಿ ಗುಡಿ ಇನ್ನು ಕೆಲವು ಕನ್ನಡ ಸಿನಿಮಾಗಳಲ್ಲಿ ಕೃತಿ ಕರಬಂಧ ನಟಿಸಿದ್ದಾರೆ. ಗೂಗ್ಲಿ ಸಿನಿಮಾದ ಪಾತ್ರವಂತೂ ಕನ್ನಡ ಸಿನಿಪ್ರೇಕ್ಷಕರ ಮನ ಗೆದ್ದಿತ್ತು.

ತೆಲುಗಿನಲ್ಲಿ ಪವನ್ ಕಲ್ಯಾಣ್ ಜೊತೆಗೆ ತೀನ್​ಮಾರ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕೃತಿ ಕರಬಂಧ ನಟಿಸಿದ್ದಾರೆ. 2016 ರಲ್ಲಿ ರಾಜ್ ಹೆಸರಿನ ಹಿಂದಿ ಸಿನಿಮಾದಲ್ಲಿ ನಟಿಸಿದ್ದ ಕೃತಿ ಕರಬಂಧ ಈಗಂತೂ ಸಾಲು ಸಾಲು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿಬಿಟ್ಟಿದ್ದಾರೆ. 2018 ರಿಂದ ಈಚೆಗೆ ಬರೋಬ್ಬರಿ ಆರು ಹಿಂದಿ ಸಿನಿಮಾಗಳಲ್ಲಿ ಕೃತಿ ಕರಬಂಧ ನಟಿಸಿದ್ದಾರೆ. ಹಿಂದಿ ಸಿನಿಮಾಗಳ ಅವಕಾಶ ಆರಂಭವಾಗಿದ್ದೇ ಬೇರೆ ಭಾಷೆಗಳತ್ತ ಮುಖ ಮಾಡಿಲ್ಲ.

ಪಂಜಾಬಿನಲ್ಲಿ ಜನಿಸಿದ ಕೃತಿ ಕರಬಂಧ ಎಳವೆಯಲ್ಲೇ ಕುಟುಂಬದೊಡನೆ ಬೆಂಗಳೂರಿಗೆ ಬಂದುಬಿಟ್ಟರು. ಇಲ್ಲಿನ ಬಾಲ್ಡ್ವಿನ್ಸ್​ನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಬಿಷಪ್​ಕಾಟನ್ ಶಾಲೆಯಲ್ಲಿ ಪ್ರೌಢ ಹಾಗೂ ಕಾಲೇಜು ಶಿಕ್ಷಣ ಮುಗಿಸಿದರು. ಬಳಿಕ ಜೈನ್ ಕಾಲೇಜು ಸೇರಿ ಪದವಿ ಮುಗಿಸಿದ ಕೃತಿ, ಅಲ್ಲಿದ್ದಾಗಲೇ ಮಾಡೆಲಿಂಗ್​ನಲ್ಲಿ ತೊಡಗಿದರು. ಆರಂಭದಲ್ಲಿ ಭೀಮ ಜ್ಯುಯೆಲರ್ಸ್, ಫೇರ್​ ಆಂಡ್ ಲವ್ಲಿ ಸೇರಿದಂತೆ ಹಲವು ಜಾಹೀರಾತುಗಳಲ್ಲಿ ನಟಿಸಿದ ಕೃತಿಗೆ ಮೊದಲು ಕರೆ ಬಂದಿದ್ದು ತೆಲುಗು ಚಿತ್ರರಂಗದಿಂದ. ನಟ ಸುಮಂತ್ ನಟನೆಯ ಬೋಣಿ ಸಿನಿಮಾದಲ್ಲಿ ಕೃತಿ ನಾಯಕಿಯಾದರು. ಎರಡನೇ ಸಿನಿಮಾ ಚಿರಂಜೀವಿ ಸರ್ಜಾ ನಟನೆಯ ಚಿರು. ಆ ನಂತರ ಕೃತಿಗೆ ಹಲವು ಅವಕಾಶಗಳು ದೊರಕುತ್ತಾ ಸಾಗಿದವು. ಪವನ್ ಕಲ್ಯಾಣ್ ಜೊತೆಗೆ ತೀನ್​ಮಾರ್ ಸಿನಿಮಾದಲ್ಲಿಯೂ ಕೃತಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ