ಬಾಲ್ಯದ ಫೋಟೋಗಳು ವೈರಲ್ ಆಗೋದು ಇತ್ತೀಚೆಗೆ ಕಾಮನ್ ಎನಿಸಿಕೊಂಡಿದೆ. ಸೆಲೆಬ್ರಿಟಿಗಳು ಕೂಡ ಕೆಲವೊಮ್ಮೆ ಬಾಲ್ಯದ ಫೋಟೋ ಶೇರ್ ಮಾಡಿಕೊಂಡು ಸಂಭ್ರಮಿಸುತ್ತಾರೆ. ಈಗ ಕನ್ನಡದ ಸ್ಟಾರ್ ನಟಿಯೊಬ್ಬರ ಚೈಲ್ಡ್ಹುಡ್ ಫೋಟೋ ವೈರಲ್ ಆಗಿದೆ. ಇವರು ಕನ್ನಡದಿಂದ ಬಣ್ಣದ ಬದುಕು ಆರಂಭಿಸಿ ನಂತರ ತೆಲುಗುನಲ್ಲಿ ಸ್ಟಾರ್ ಹೀರೋಯಿನ್ ಎನಿಸಿಕೊಂಡರು. ಈಗ ಅವರು ಬಾಲಿವುಡ್ನಲ್ಲೂ ಬ್ಯುಸಿ ಇದ್ದಾರೆ. ಇವರು ನ್ಯಾಷನಲ್ ಕ್ರಶ್ (National Crush) ಎಂಬ ಬಿರುದನ್ನೂ ಪಡೆದರು. ಅಂದಹಾಗೆ ಇವರು ಬೇರಾರು ಅಲ್ಲ ನಟಿ ರಶ್ಮಿಕಾ ಮಂದಣ್ಣ(Rashmika Mandanna).
‘ಕಿರಿಕ್ ಪಾರ್ಟಿ’ ಚಿತ್ರದಿಂದ ರಶ್ಮಿಕಾ ಮಂದಣ್ಣ ಸ್ಟಾರ್ ಹೀರೋಯಿನ್ ಎನಿಸಿಕೊಂಡರು. ನಂತರ ಕನ್ನಡದಲ್ಲಿ ಕೆಲವು ಚಿತ್ರಗಳಲ್ಲಿ ನಟಿಸಿದರು. ಆ ಬಳಿಕ ಅವರು ಹಾರಿದ್ದು ಟಾಲಿವುಡ್ಗೆ. ಅಲ್ಲಿಂದ ಅವರ ಬದುಕು ಬದಲಾಯಿತು. ‘ಗೀತ ಗೋವಿಂದಂ’ ಚಿತ್ರದಲ್ಲಿ ಅವರ ನಟನೆಗೆ ಫ್ಯಾನ್ಸ್ ಫಿದಾ ಆದರು. ಈಗ ರಶ್ಮಿಕಾ ಮಂದಣ್ಣ ಅವರ ಬಾಲ್ಯದ ಫೋಟೋ ಅಭಿಮಾನಿಗಳ ವಲಯದಲ್ಲಿ ವೈರಲ್ ಆಗುತ್ತಿದೆ.
ಅಂದಹಾಗೆ, ಈ ಫೋಟೋವನ್ನು ಸ್ವತಃ ರಶ್ಮಿಕಾ ಮಂದಣ್ಣ ಅವರೇ ಈ ಮೊದಲು ಹಂಚಿಕೊಂಡಿದ್ದರು. ಕೊವಿಡ್ ಸಂದರ್ಭದಲ್ಲಿ ಮಾಡಲಾದ ಲಾಕ್ಡೌನ್ ವೇಳೆ ರಶ್ಮಿಕಾ ಮಂದಣ್ಣ ಅವರು ಬಾಲ್ಯದ ಚಿತ್ರ ಪೋಸ್ಟ್ ಮಾಡಿದ್ದರು. ‘ಕೊರೊನಾ ಹೋಗುವುದನ್ನು ಕಾಯುತ್ತಾ ಕೂರುವುದು ಹೀಗಿರುತ್ತದೆ’ ಎಂದು ರಶ್ಮಿಕಾ ಈ ಫೋಟೋಗೆ ಕ್ಯಾಪ್ಶನ್ ನೀಡಿದ್ದರು.
ಈ ಫೋಟೋ ಈಗಲೂ ಅಭಿಮಾನಿಗಳ ಫೇವರಿಟ್ ಎನಿಸಿಕೊಂಡಿದೆ. ಅನೇಕರು ಈಗಲೂ ರಶ್ಮಿಕಾ ಮಂದಣ್ಣ ಅವರ ಈ ಫೋಟೋಗೆ ಕಮೆಂಟ್ ಮಾಡುತ್ತಲೇ ಇರುತ್ತಾರೆ. ಕೆಲ ಅಭಿಮಾನಿಗಳು ಈ ಫೋಟೋ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ‘ಇವರನ್ನು ಗುರುತಿಸಿ’ ಎಂದು ಸವಾಲು ಹಾಕಿದ್ದಾರೆ.
ಇದನ್ನೂ ಓದಿ: ಮ್ಯಾನೇಜರ್ನಿಂದ ಮೋಸ ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿದ ರಶ್ಮಿಕಾ ಮಂದಣ್ಣ ಹೇಳಿಕೆ ಬಿಡುಗಡೆ
ಸಿನಿಮಾ ವಿಚಾರಕ್ಕೆ ಬರೋದಾದರೆ ರಶ್ಮಿಕಾ ಮಂದಣ್ಣ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ಅವರು ತೊಡಗಿದ್ದಾರೆ. ‘ಅನಿಮಲ್’ ಸಿನಿಮಾ ಶೂಟಿಂಗ್ ಇತ್ತೀಚೆಗಷ್ಟೇ ಪೂರ್ಣಗೊಂಡಿತ್ತು. ಈ ಬಗ್ಗೆ ಅವರು ಇತ್ತೀಚೆಗೆ ಅಪ್ಡೇಟ್ ನೀಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:37 pm, Fri, 23 June 23