ಮ್ಯಾನೇಜರ್​ನಿಂದ ಮೋಸ ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿದ ರಶ್ಮಿಕಾ ಮಂದಣ್ಣ ಹೇಳಿಕೆ ಬಿಡುಗಡೆ

Rashmika Mandanna: ನಟಿ ರಶ್ಮಿಕಾ ಮಂದಣ್ಣರ ಮ್ಯಾನೇಜರ್ ಅವರಿಗೆ 80 ಲಕ್ಷ ಹಣ ಮೋಸ ಮಾಡಿದ್ದಾನೆ ಎಂಬ ಸುದ್ದಿಗಳು ಹರಿದಾಡಿದ್ದವು, ಆ ಬಗ್ಗೆ ರಶ್ಮಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಮ್ಯಾನೇಜರ್​ನಿಂದ ಮೋಸ ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿದ ರಶ್ಮಿಕಾ ಮಂದಣ್ಣ ಹೇಳಿಕೆ ಬಿಡುಗಡೆ
ರಶ್ಮಿಕಾ ಮಂದಣ್ಣ
Follow us
ಮಂಜುನಾಥ ಸಿ.
|

Updated on:Jun 22, 2023 | 11:28 PM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇತ್ತೀಚೆಗೆ ಸಿನಿಮಾ ಬದಲಿಗೆ ಬೇರೆಯ ಕಾರಣಕ್ಕೆ ಸುದ್ದಿಯಲ್ಲಿದ್ದರು. ರಶ್ಮಿಕಾ ಮಂದಣ್ಣ ತಮ್ಮ ಮ್ಯಾನೇಜರ್​ನಿಂದ ಮೋಸ ಹೋಗಿದ್ದಾರೆ. ರಶ್ಮಿಕಾರ ಮ್ಯಾನೇಜರ್ (Manager) ಅವರಿಗೆ ಸುಮಾರು 80 ಲಕ್ಷ ರೂಪಾಯಿ ಮೋಸ ಮಾಡಿದ್ದಾನೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಈ ಬಗ್ಗೆ ನಟಿಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿರಲಿಲ್ಲ. ಯಾವುದೇ ದೂರು ಸಹ ದಾಖಲಾಗಿರಲಿಲ್ಲ. ಆದರೆ ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಶ್ಮಿಕಾ ಮಂದಣ್ಣ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.

ರಶ್ಮಿಕಾ ಮಂದಣ್ಣ ಮತ್ತು ಅವರ ಮ್ಯಾನೇಜರ್ ಇಬ್ಬರೂ ಸೌಹಾರ್ದಯುತ ನಿರ್ಧಾರವನ್ನು ತೆಗೆದುಕೊಂಡು ಇಬ್ಬರೂ ಪರಸ್ಪರ ಸೌಹಾರ್ದಯುತವಾಗಿ ಬೇರೆ-ಬೇರೆ ಆಗಿದ್ದಾರೆ. ಆದರೆ ಈ ಪ್ರತ್ಯೇಕತೆಯ ಬಗ್ಗೆ ಹಲವು ಋಣಾತ್ಮಕ ಸುದ್ದಿಗಳು ಹರಿದಾಡುತ್ತಿದ್ದು, ಈ ಬಗ್ಗೆ ಅಧಿಕೃತವಾಗಿ ಸ್ಪಷ್ಟಪಡಿಸುವುದೇನೆಂದರೆ ರಶ್ಮಿಕಾ ಮತ್ತು ಅವರ ಮ್ಯಾನೇಜರ್ ಇಬ್ಬರೂ ತಮ್ಮ ನಡುವೆ ಯಾವುದೇ ದ್ವೇಷವಿಲ್ಲ. ರಶ್ಮಿಕಾ ಅವರ ಮ್ಯಾನೇಜರ್ ನಿರ್ಗಮಿಸಿರುವುದರ ಸುತ್ತ ಹರಿದಾಡುತ್ತರುವ ಸುದ್ದಿಗಳು ಸತ್ಯವಲ್ಲ ಎಂದಿದೆ ರಶ್ಮಿಕಾರ ತಂಡ.

ರಶ್ಮಿಕಾರ ಮ್ಯಾನೇಜರ್ ವೃತ್ತಿಪರಗೆ ಬದ್ಧವಾಗಿದ್ದರು. ಮತ್ತು ಪರಸ್ಪರ ಒಪ್ಪಂದದ ಮೇಲೆ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಸ್ವತಂತ್ರ್ಯ ನಿರ್ಧಾರವನ್ನು ತೆಗೆದುಕೊಂಡರು. ಆದರೆ ರಶ್ಮಿಕಾ ಹಾಗೂ ಅವರ ಮ್ಯಾನೇಜರ್ ಬೇರಾದ ಬಗ್ಗೆ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಊಹಾಪೋಹಗಳನ್ನು ನಿಗ್ರಹಿಸಲು ಮತ್ತು ಅವರ ವೃತ್ತಿಪರ ಸಂಬಂಧದ ಸುತ್ತಲಿನ ಆಧಾರರಹಿತ ವದಂತಿಗಳನ್ನು ಕೊನೆಗೊಳಿಸಲು ಈ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ” ಎಂದು ರಶ್ಮಿಕಾ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:Rashmika Mandanna: ರಣಬೀರ್ ಕಪೂರ್ ಜೊತೆ ಆಪ್ತವಾಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ; ಇಲ್ಲಿದೆ ಫೋಟೋ ಆಲ್ಬಂ

ರಶ್ಮಿಕಾರು ಕಳೆದ ಕೆಲ ವರ್ಷಗಳಿಂದ ಮ್ಯಾನೇಜರ್ ಒಬ್ಬರನ್ನು ಹೊಂದಿದ್ದರು. ರಶ್ಮಿಕಾರ ಸಿನಿಮಾ ಒಪ್ಪಂದ, ಸಂಭಾವನೆ, ಜಾಹೀರಾತು, ಉದ್ಯಮ, ಬಂಡವಾಳ ಹೂಡಿಕೆ ಅವರ ಖರ್ಚು-ಜಮೆ ಇನ್ನಿತರೆಗಳನ್ನು ಅವರು ನಿಭಾಯಿಸುತ್ತಿದ್ದರು. ಆದರೆ ಇತ್ತೀಚೆಗೆ ಅವರ ಮ್ಯಾನೇಜರ್ ರಶ್ಮಿಕಾರ ಬಳಿಕ ಕೆಲಸ ತ್ಯಜಿಸಿ ಬೇರಾಗಿದ್ದಾರೆ. ಆದರೆ ಈ ಸುದ್ದಿಯು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಬೇರೆಯದ್ದೇ ರೂಪ ಪಡೆದುಕೊಂಡು, ರಶ್ಮಿಕಾರ ಮ್ಯಾನೇಜರ್ ಅವರಿಗೆ ಸುಮಾರು 80 ಲಕ್ಷ ಮೋಸ ಮಾಡಿದ್ದಾರೆ ಹಾಗಾಗಿ ಅವರನ್ನು ರಶ್ಮಿಕಾ ಕೆಲಸದಿಂದ ತೆಗೆದು ಹಾಕಿದ್ದಾರೆ ಎಂದಾಗಿತ್ತು. ಆದರೆ ಆ ಸುದ್ದಿಗಳನ್ನೆಲ್ಲ ಸ್ವತಃ ರಶ್ಮಿಕಾ ಮಂದಣ್ಣ ನಿರಾಕರಿಸಿದ್ದು, ಪರಸ್ಪರ ಒಪ್ಪಿಗೆ ಮೇಲೆ ಮ್ಯಾನೇಜರ್ ಕೆಲಸ ತ್ಯಜಿಸಿದ್ದಾರೆ ಎಂದಿದ್ದಾರೆ.

ರಶ್ಮಿಕಾ ಮಂದಣ್ಣ ಇದೀಗ ಹಲವು ಸಿನಿಮಾಗಳನ್ನು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬಾಲಿವುಡ್​ನಲ್ಲಿ ರಣ್​ಬೀರ್ ಕಪೂರ್ ಜೊತೆಗೆ ಅನಿಮಲ್ ಸಿನಿಮಾದ ಚಿತ್ರೀಕರಣವನ್ನು ಇತ್ತೀಚೆಗಷ್ಟೆ ಮುಗಿಸಿದ್ದಾರೆ. ತೆಲುಗಿನಲ್ಲಿ ಪುಷ್ಪ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ದೊಡ್ಡ ನಟರೊಬ್ಬರ ಸಿನಿಮಾ ಒಪ್ಪಿಕೊಂಡಿದ್ದಾರೆ. ತೆಲುಗಿನಲ್ಲಿಯೂ ಮತ್ತೊಬ್ಬ ಸ್ಟಾರ್ ನಟನ ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದರ ಜೊತೆಗೆ ಬಾಲಿವುಡ್​ನಲ್ಲಿ ಸಹ ಟೈಗರ್ ಶ್ರಾಫ್ ಜೊತೆ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಗಾಳಿಮಾತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:26 pm, Thu, 22 June 23

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ