ಕಾಸ್ಟಿಂಗ್​ ಕೌಚ್: ನಿರ್ದೇಶಕನ ವಿರುದ್ಧ ದೂರು ನೀಡಿದ ನಟಿ ಅಮೂಲ್ಯ ಗೌಡ

| Updated By: ಮದನ್​ ಕುಮಾರ್​

Updated on: May 06, 2024 | 4:40 PM

ನಟಿಗೆ ಅಶ್ಲೀಲವಾಗಿ ಮೆಸೇಜ್​ ಮಾಡಿದ ಆರೋಪ ಹೊತ್ತಿರುವ ಸೂರ್ಯ ಎಂಬಾತನು ಕಾಸ್ಟಿಂಗ್​ ಡೈರೆಕ್ಟರ್​ ಎಂದು ಹೇಳಿಕೊಂಡಿದ್ದಾನೆ. ಆಡಿಷನ್​ಗೆ ಬಾ ಎಂದು ಕೇಳುತ್ತಲೇ ಅಶ್ಲೀಲವಾಗಿ ಮೆಸೇಜ್ ಮಾಡಿದ ಆತನ ವಿರುದ್ಧ ಅಮೂಲ್ಯ ಗೌಡ ದೂರು ನೀಡಿದ್ದಾರೆ. ರಾತ್ರಿ ಇಡೀ ಮೆಸೇಜ್​, ಕಾಲ್ ಮಾಡಿ ಕಿರುಕುಳ ನೀಡಿದ್ದಕ್ಕೆ ಬೇಸತ್ತ ನಟಿ ಈಗ ಕಾನೂನಿನ ಮೂಲಕ ಬುದ್ಧಿ ಕಲಿಸಲು ಮುಂದಾಗಿದ್ದಾರೆ.

ಕಾಸ್ಟಿಂಗ್​ ಕೌಚ್: ನಿರ್ದೇಶಕನ ವಿರುದ್ಧ ದೂರು ನೀಡಿದ ನಟಿ ಅಮೂಲ್ಯ ಗೌಡ
ಅಮೂಲ್ಯ ಗೌಡ
Follow us on

ಚಿತ್ರರಂಗದಲ್ಲಿ ಕಾಸ್ಟಿಂಗ್​ ಕೌಚ್ (Casting Couch) ಬಗ್ಗೆ ಆಗಾಗ ನಟಿಯರು ಧ್ವನಿ ಎತ್ತುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಮತ್ತೆ ಅಂಥ ಪ್ರಕರಣ ನಡೆದಿದೆ. ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ ಮಂಚಕ್ಕೆ ಕರೆದಿದ್ದಾನೆ ಎಂದು ಸೂರ್ಯ ಎಂಬ ನಿರ್ದೇಶಕನ ಮೇಲೆ ನಟಿ ಅಮೂಲ್ಯ ಗೌಡ (Amulya Gowda) ಅವರು ಆರೋಪ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಅವರು ಬೆಂಗಳೂರಿನ ಆರ್​.ಆರ್​. ನಗರ ಪೊಲೀಸ್​ ಠಾಣೆಗೆ (RR Nagar Police Station) ದೂರು ನೀಡಿದ್ದಾರೆ.

ಆಡಿಷನ್​​ಗೆ ಕರೆಯುವ ನೆಪದಲ್ಲಿ ಅಶ್ಲೀಲವಾಗಿ ಮೆಸೇಜ್​ ಮಾಡಿದ್ದಾನೆ. ವಾಟ್ಸಾಪ್​​ನಲ್ಲಿ ಕೆಟ್ಟದಾಗಿ ಮೆಸೇಜ್​ ಕಳಿಸಿದ್ದಾನೆ ಎಂದು ಅಮೂಲ್ಯ ಗೌಡ ಅವರು ಸೂರ್ಯ ವಿರುದ್ಧ ದೂರಿನಲ್ಲಿ ಆರೋಪ ಹೊರಿಸಿದ್ದಾರೆ. ಏಪ್ರಿಲ್​ 30ರಂದು ಅಮೂಲ್ಯ ಗೌಡ ಅವರು ವಾಟ್ಸಪ್​ ಸ್ಟೇಟಸ್​ನಲ್ಲಿ ಹಾಕಿಕೊಂಡಿದ್ದ ತಮ್ಮ ಫೋಟೋಗೆ ಸೂರ್ಯ ಕೀಳಾಗಿ ಪ್ರತಿಕ್ರಿಯಿಸಿದ್ದಾನೆ ಎನ್ನಲಾಗಿದೆ. ಅದನ್ನು ಪ್ರಶ್ನಿಸಿದ್ದಕ್ಕೆ ‘ಯಾವ ಪೊಲೀಸರಿಗೆ ಬೇಕಾದರೂ ಕೇಳಿಕೋ’ ಎಂದು ನಟಿಗೆ ಆತ ಬೈಯ್ದಿದ್ದ. ಹಾಗಾಗಿ ನಟಿಯು ಪೊಲೀಸರ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: ‘ಪರಮೇಶ ಪಾನ್​ವಾಲ’ ನಟಿ ಸುರ್ವೀನ್​ ಚಾವ್ಲಾಗೆ ಹಲವು ಬಾರಿ ಕಾಸ್ಟಿಂಗ್​ ಕೌಚ್​ ಕಾಟ; ಕೆಟ್ಟ ಅನುಭವ ತೆರೆದಿಟ್ಟಿದ್ದ ನಟಿ

ನಟಿಗೆ ಅಶ್ಲೀಲವಾಗಿ ಮೆಸೇಜ್​ ಮಾಡಿದ ಆರೋಪ ಹೊತ್ತಿರುವ ಸೂರ್ಯ ಎಂಬಾತನು ಕಾಸ್ಟಿಂಗ್​ ಡೈರೆಕ್ಟರ್​ ಎಂದು ಹೇಳಿಕೊಂಡಿದ್ದಾನೆ. ಆಡಿಷನ್​ಗೆ ಬಾ ಅಂತ ಕೇಳುತ್ತಲೇ ಅಶ್ಲೀಲವಾಗಿ ಮೆಸೇಜ್ ಮಾಡಿದ ಆತನ ವಿರುದ್ಧ ಅಮೂಲ್ಯ ಗೌಡ ದೂರು ನೀಡಿದ್ದಾರೆ. ರಾತ್ರಿ ಇಡೀ ಮೆಸೇಜ್​, ಕಾಲ್ ಮಾಡಿ ಕಿರುಕುಳ ನೀಡಿದ್ದಕ್ಕೆ ಬೇಸತ್ತ ನಟಿ ಈಗ ಕಾನೂನಿನ ಮೂಲಕ ಬುದ್ಧಿ ಕಲಿಸಲು ಮುಂದಾಗಿದ್ದಾರೆ.

ಆತನನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಬೇಕು ಎಂದು ನಟಿಯು ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆರಂಭದಲ್ಲಿ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಸೂರ್ಯ ಎಂಬ ಆ ವ್ಯಕ್ತಿಯ ವರ್ತನೆ ಅತಿರೇಕ ಆದ್ದರಿಂದ ಇಂದು (ಮೇ 6) ಆತನನ್ನ ಪತ್ತೆ ಹಚ್ಚಿ ಠಾಣೆಗೆ ಕರೆತಂದಿದ್ದಾರೆ ಎಂಬ ಮಾಹಿತಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.