AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಚಾರಣೆ ಮಾಡಿದ್ರೂ ರಾಗಿಣಿಯನ್ನ ಬಂಧಿಸಬೇಡಿ -ದಮ್ಮಯ್ಯ ಅಂದ ಪ್ರಭಾವಿಗಳು!

[lazy-load-videos-and-sticky-control id=”jgcpoYjWIw4″] ಬೆಂಗಳೂರು: ಖಡಕ್​ ಅಧಿಕಾರಿ ಸಂದೀಪ್ ಪಾಟೀಲ್ ನೇತೃತ್ವದಲ್ಲಿ CCB ಅಧಿಕಾರಿಗಳು ಗಂಧದಗುಡಿಯಲ್ಲಿ ದುರ್ಗಂಧ ಪ್ರಕರಣದಲ್ಲಿ ಮಟ್ಟಸವಾಗಿ ತಮ್ಮ ಕೆಲಸ ಮಾಡುತ್ತಿದ್ದಾರೆ. ಒಂದು ಕಡೆ ನಿನ್ನೆ ರಾತ್ರಿಯೆಲ್ಲ ಅವರು ಪ್ರಮುಖ ಆರೋಪಿ ರವಿಶಂಕರ್​ ಮೇಲೆ ವರ್ಕೌಟ್​ ಮಾಡುತ್ತಾ ಅವನ ಬಾಯಿಬಿಡಿಸ್ತಿದ್ರೆ.. ಈ ನಡುವೆ, ಅನೇಕ ಕಡೆಗಳಿಂದ ಅವರ ಮೇಲೆ ಪ್ರಭಾವ ಬೀರಿ, ನಟಿ ರಾಗಿಣಿಯನ್ನು ಬಂಧಿಸಬೇಡಿ, ಅವರ ಮನೆಯ ಕಡೆ ಹೋಗಬೇಡಿ ಎಂದು ಪ್ರಭಾವಿಗಳು ಮತ್ತು ರಾಜಕೀಯ ನಾಯಕರಿಂದ CCB ಗೆ ಒತ್ತಡ ಹಾಕುತ್ತಿದ್ರಂತೆ! CCB […]

ವಿಚಾರಣೆ ಮಾಡಿದ್ರೂ ರಾಗಿಣಿಯನ್ನ ಬಂಧಿಸಬೇಡಿ -ದಮ್ಮಯ್ಯ ಅಂದ ಪ್ರಭಾವಿಗಳು!
KUSHAL V
| Edited By: |

Updated on:Sep 04, 2020 | 5:10 PM

Share

[lazy-load-videos-and-sticky-control id=”jgcpoYjWIw4″]

ಬೆಂಗಳೂರು: ಖಡಕ್​ ಅಧಿಕಾರಿ ಸಂದೀಪ್ ಪಾಟೀಲ್ ನೇತೃತ್ವದಲ್ಲಿ CCB ಅಧಿಕಾರಿಗಳು ಗಂಧದಗುಡಿಯಲ್ಲಿ ದುರ್ಗಂಧ ಪ್ರಕರಣದಲ್ಲಿ ಮಟ್ಟಸವಾಗಿ ತಮ್ಮ ಕೆಲಸ ಮಾಡುತ್ತಿದ್ದಾರೆ. ಒಂದು ಕಡೆ ನಿನ್ನೆ ರಾತ್ರಿಯೆಲ್ಲ ಅವರು ಪ್ರಮುಖ ಆರೋಪಿ ರವಿಶಂಕರ್​ ಮೇಲೆ ವರ್ಕೌಟ್​ ಮಾಡುತ್ತಾ ಅವನ ಬಾಯಿಬಿಡಿಸ್ತಿದ್ರೆ.. ಈ ನಡುವೆ, ಅನೇಕ ಕಡೆಗಳಿಂದ ಅವರ ಮೇಲೆ ಪ್ರಭಾವ ಬೀರಿ, ನಟಿ ರಾಗಿಣಿಯನ್ನು ಬಂಧಿಸಬೇಡಿ, ಅವರ ಮನೆಯ ಕಡೆ ಹೋಗಬೇಡಿ ಎಂದು ಪ್ರಭಾವಿಗಳು ಮತ್ತು ರಾಜಕೀಯ ನಾಯಕರಿಂದ CCB ಗೆ ಒತ್ತಡ ಹಾಕುತ್ತಿದ್ರಂತೆ!

CCB ಕಚೇರಿಯಲ್ಲಿ ನಟಿ ರಾಗಿಣಿ ವಿಚಾರಣೆ ನಡೆಯುತ್ತಿದ್ದು ಕಚೇರಿಗೆ ಬಂದ ತಕ್ಷಣ ರಾಗಿಣಿ ‘ಟೆನ್ ಮಿನಿಟ್ಸ್​ ಪ್ಲೀಸ್’ ಅಂದರಂತೆ. ಅದರಂತೆ ರಾಗಿಣಿಗೆ 10 ನಿಮಿಷ ಟೈಂ ಕೊಟ್ಟ ಸಿಸಿಬಿಯವರು ಮೊದಲೇ ರೆಡಿ ಮಾಡಿಟ್ಟುಕೊಂಡಿದ್ದ ಸುಮಾರು 40 ಪ್ರಶ್ನೆಗಳನ್ನ ಕೇಳಲು ಅನುವಾದರಂತೆ.

ಪ್ರತೀಕ್ ಹೇಳಿಕೆ ತೋರಿಸಿ ರಾಗಿಣಿಗೆ ಪ್ರಶ್ನೆ 2018ರ ಡ್ರಗ್ ಕೇಸ್ ರಿಒಪನ್ ಮಾಡಿರೋ ಸಿಸಿಬಿ ಅಧಿಕಾರಿಗಳು ಪ್ರತೀಕ್ ಶೆಟ್ಟಿ ನೀಡಿದ್ದ ಹೇಳಿಕೆ ತೋರಿಸಿ ರಾಗಿಣಿಗೆ ಪ್ರಶ್ನೆ ಮಾಡುತ್ತಿದ್ದಾರೆ. ಪ್ರತೀಕ್ ಶೆಟ್ಟಿ ನಿಮ್ಮ ಹೆಸರು ಹೇಳಿದ್ದಾರೆ ಅಂತಾ.. ಅಲ್ಲಿಂದಲೇ ವಿಚಾರಣೆ ನಡೆಸ್ತಿರೋ ಅಧಿಕಾರಿಗಳು ರವಿಶಂಕರ್ ಜೊತೆಗಿನ ಸ್ನೇಹ ಹಾಗೂ ಡ್ರಗ್ ಬಗ್ಗೆ ನಿಮಗೇನು ಗೊತ್ತು ಎಂದು ಪ್ರಶ್ನೆ ಮಾಡ್ತಿದ್ದಾರಂತೆ.

ಈ ಮಧ್ಯೆ, ನಟಿ ರಾಗಿಣಿಯನ್ನು ವಿಚಾರಣೆ ಮಾಡಬಾರದೆಂದು CCB ಗೆ ಪ್ರಭಾವಿಗಳು, ರಾಜಕೀಯ ನಾಯಕರಿಂದ ಒತ್ತಡ ಹೇರಲಾಗುತ್ತಿದೆ. ಒಂದು ವೇಳೆ, ವಿಚಾರಣೆ ಮಾಡಿದರೂ ನಟಿ ರಾಗಿಣಿಯನ್ನು ಬಂಧಿಸಬಾರದು ಎಂದು ನಿನ್ನೆಯಿಂದಲೂ ನಿರಂತರವಾಗಿ ಸಿಸಿಬಿ ಅಧಿಕಾರಿಗಳಿಗೆ ಒತ್ತಡ ಹೇರಲಾಗುತ್ತಿದೆ ಎಂದು ತಿಳಿದುಬಂದಿದೆ. ಪ್ರಭಾವಿ ವ್ಯಕ್ತಿಗಳು, ರಾಜಕಾರಣಿಗಳಿಂದ ಫೋನ್​ ಕಾಲ್ ಬರುತ್ತಿದ್ದು ರಾಗಿಣಿಗೆ ಕನಿಷ್ಠ ಸಮಯಾವಕಾಶವಾದ್ರೂ ನೀಡಿ ಎಂದು ಹಲವರು ಕೇಳಿಕೊಳ್ಳುತ್ತಿದ್ದಾರಂತೆ.

ಆದರೆ, ಪ್ರಕರಣದಲ್ಲಿ ಈಗಾಗಲೇ ಸಾಕಷ್ಟು ಸಾಕ್ಷ್ಯ ಕಲೆಹಾಕಿರುವ ಸಿಸಿಬಿ ಅಧಿಕಾರಿಗಳು.. ರಾಗಿಣಿ ವಿರುದ್ಧವೂ ಹಲವಾರು ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ. ಜೊತೆಗೆ, ರವಿಶಂಕರ್​ ಹೇಳಿಕೆಯಲ್ಲೂ ರಾಗಿಣಿ ಹೆಸರು ಉಲ್ಲೇಖವಾಗಿದ್ದು ಅದರಲ್ಲಿ ನಟಿ ರಾಗಿಣಿ ದ್ವಿವೇದಿಗೆ ಡ್ರಗ್​​ ಪೆಡ್ಲರ್​ ಪರಿಚಯ ಇತ್ತು. ರಾಗಿಣಿಯ ಮನೆಯಲ್ಲಿ ಹಲವು ಪಾರ್ಟಿಗಳನ್ನ ಮಾಡಿದ್ದೆವು ಎಂಬ ಮಾಹಿತಿ ನೀಡಿದ್ದಾನಂತೆ.

3 ವರ್ಷಗಳ ಹಿಂದೆಯಷ್ಟೇ ನನಗೆ ಪರಿಚಯವಾಗಿತ್ತು. ನನ್ನ ಪರಿಚಯಕ್ಕೂ ಮೊದಲೇ ಡ್ರಗ್​​ ಪೆಡ್ಲರ್ ಜೊತೆ ನಟಿ ರಾಗಿಣಿ ದ್ವಿವೇದಿಗೆ​ ಪರಿಚಯವಿತ್ತು ಎಂದು ರಾಗಿಣಿ ವಿಚಾರವನ್ನ CCB ಮುಂದೆ ರವಿಶಂಕರ್​ ಬಾಯಿಬಿಟ್ಟಿದ್ದಾನಂತೆ.ಈ ಹಿನ್ನೆಲೆಯಲ್ಲಿ ರಾಗಿಣಿಯನ್ನ ವಶಕ್ಕೆ ಪಡೆಯಲೇಬೇಕಾಗಿದ್ದು ಇದರಿಂದ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯುತ್ತಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ತುಪ್ಪದ ರಾಣಿ CCB ವಶಕ್ಕೆ, ಪೊಲೀಸ್​ ವಾಹನದಲ್ಲೇ CCB ಕಚೇರಿಗೆ..

WhatsApp ಡಿಲೀಟ್ ಹಿನ್ನಡೆಯಾ? ಅಥ್ವಾ ಆಪ್ತರ ಸಂದೇಶದಿಂದ ಸಿಕ್ಕಿಬೀಳ್ತಾರಾ ತುಪ್ಪದ ಬೆಡಗಿ?

Published On - 12:47 pm, Fri, 4 September 20