ಕ್ರಿಸ್‌ಮಸ್ ದಿನದ್ದೇ ಕೊನೆ ಪಾರ್ಟಿ: ಗ್ರಹಚಾರ ಅಂದು ಆ ಜಾಗಕ್ಕೆ ಹೋಗಬೇಕಾಯ್ತು-ಸಂಜನಾ
ಬೆಂಗಳೂರು: ಡ್ರಗ್ ಮಾಫಿಯಾ ಜಾಲದಲ್ಲಿ ತಮ್ಮ ಆಪ್ತ ಎಂದು ಹೇಳಲಾಗಿರುವ ರಾಹುಲ್‌ನನ್ನ CCB ಪೊಲೀಸರು ವಿಚಾರಣೆಗೆ ಒಳಪಡಿಸಿರುವ ಬೆನ್ನಲ್ಲೇ ನಟಿ ಸಂಜನಾ ವಿಷಾದಿಂದ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಕೊನೆಯದಾಗಿ ಪಾರ್ಟಿ ಮಾಡಿದ್ದು ಕ್ರಿಸ್‌ಮಸ್ ದಿನ. ನನ್ನ ಗ್ರಹಚಾರಕ್ಕೆ ಅಂದು ನಾನು ಆ ಜಾಗಕ್ಕೆ ಹೋಗಬೇಕಾಗಿತ್ತು. ಆ ಬಳಿಕ ನಾನು ಯಾವುದೇ ಪಾರ್ಟಿಯನ್ನು ಮಾಡಿಲ್ಲ ಎಂದು ನಟಿ ಸಂಜನಾ ಗಲ್ರಾನಿ ಹೇಳಿಕೆ ನೀಡಿದ್ದಾರೆ. ರಾಹುಲ್‌ನನ್ನ ರಾಖಿ ಭಾಯ್ ಅಂತಲೇ ಕರೆಯುತ್ತೇನೆ. ನನಗೆ ಆತ ತುಂಬಾ ಕ್ಲೋಸ್ ಫ್ರೆಂಡ್. ಅವನು […]
ಬೆಂಗಳೂರು: ಡ್ರಗ್ ಮಾಫಿಯಾ ಜಾಲದಲ್ಲಿ ತಮ್ಮ ಆಪ್ತ ಎಂದು ಹೇಳಲಾಗಿರುವ ರಾಹುಲ್‌ನನ್ನ CCB ಪೊಲೀಸರು ವಿಚಾರಣೆಗೆ ಒಳಪಡಿಸಿರುವ ಬೆನ್ನಲ್ಲೇ ನಟಿ ಸಂಜನಾ ವಿಷಾದಿಂದ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಕೊನೆಯದಾಗಿ ಪಾರ್ಟಿ ಮಾಡಿದ್ದು ಕ್ರಿಸ್‌ಮಸ್ ದಿನ. ನನ್ನ ಗ್ರಹಚಾರಕ್ಕೆ ಅಂದು ನಾನು ಆ ಜಾಗಕ್ಕೆ ಹೋಗಬೇಕಾಗಿತ್ತು. ಆ ಬಳಿಕ ನಾನು ಯಾವುದೇ ಪಾರ್ಟಿಯನ್ನು ಮಾಡಿಲ್ಲ ಎಂದು ನಟಿ ಸಂಜನಾ ಗಲ್ರಾನಿ ಹೇಳಿಕೆ ನೀಡಿದ್ದಾರೆ.
ರಾಹುಲ್‌ನನ್ನ ರಾಖಿ ಭಾಯ್ ಅಂತಲೇ ಕರೆಯುತ್ತೇನೆ. ನನಗೆ ಆತ ತುಂಬಾ ಕ್ಲೋಸ್ ಫ್ರೆಂಡ್. ಅವನು ನನ್ನ ರಾಖಿ ಅಣ್ಣ ಸಹ ಹೌದು. ರಾಹುಲ್ ಆದಷ್ಟು ಬೇಗ ಇದರಿಂದ ಹೊರಗಡೆ ಬರುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಶಾಂತ್ ಸಂಬರಗಿ ಯಾರು ಅನ್ನೋದೇ ನನಗೆ ಗೊತ್ತಿಲ್ಲ. ಕಳೆದ 2-3 ದಿನಗಳಿಂದ ನಾನು ಅವರ ಹೆಸರು ಕೇಳ್ತಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Drug peddler ರಾಹುಲ್ ನಟಿ ಸಂಜನಾಗೆ ಸೋದರ ಅಲ್ಲ ಎಂಬುದಕ್ಕೆ ಆ ಮೊಬೈಲ್ನಲ್ಲಿದೆ ಸಾಕ್ಷ್ಯ!
ಡ್ರಗ್ಸ್ ದಂಧೆ: ನಟಿ ಸಂಜನಾ ಆಪ್ತ ರಾಹುಲ್ನನ್ನು ವಶಕ್ಕೆ ಪಡೆದ CCB
Published On - 11:26 am, Fri, 4 September 20