ಬೆಳಗ್ಗೆ ಮದುವೆ, ಸಂಜೆ ಪೊಲೀಸ್​ ಸ್ಟೇಷನ್​ಗೆ ಹಾಜರ್​​; ವಿವಾದದಲ್ಲಿ ಚೈತ್ರಾ ಕೋಟೂರ್ ವಿವಾಹ ವಿಚಾರ!

ಚೈತ್ರಾ ಕೈ ಹಿಡಿದಿರುವ ಹುಡುಗ ನಾಗಾರ್ಜುನ್​ ಅವರು ಮಂಡ್ಯ ಮೂಲದವರು. ಕನ್​ಸ್ಟ್ರಕ್ಷನ್ ಮತ್ತು ರಿಯಲ್​ ಎಸ್ಟೇಟ್​​ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ.

ಬೆಳಗ್ಗೆ ಮದುವೆ, ಸಂಜೆ ಪೊಲೀಸ್​ ಸ್ಟೇಷನ್​ಗೆ ಹಾಜರ್​​; ವಿವಾದದಲ್ಲಿ ಚೈತ್ರಾ ಕೋಟೂರ್ ವಿವಾಹ ವಿಚಾರ!
ಚೈತ್ರಾ ಕೋಟೂರ್​ -ನಾಗಾರ್ಜುನ್
Follow us
ರಾಜೇಶ್ ದುಗ್ಗುಮನೆ
|

Updated on:Mar 28, 2021 | 10:55 PM

ಕೋಲಾರ (ಮಾರ್ಚ್​ 28): ಬಿಗ್​ ಬಾಸ್ ಮಾಜಿ​ ಸ್ಪರ್ಧಿ ಚೈತ್ರಾ ಕೋಟೂರ್​ ಅವರು ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಉದ್ಯಮಿ ನಾಗಾರ್ಜುನ್​ ಎಂಬುವವರ ಜೊತೆ ಭಾನುವಾರ (ಮಾ.28) ಬೆಳಗ್ಗೆ ಸಿಂಪಲ್ ಆಗಿ ವಿವಾಹ ಆಗಿದ್ದರು. ಈ ವಿಚಾರ ಅವರ ಅಭಿಮಾನಿಗಳಿಗೂ ಖುಷಿ ನೀಡಿತ್ತು. ಆದರೆ, ಈಗ ಈ ಮದುವೆ ವಿಚಾರ ಪೊಲೀಸ್​ ಠಾಣೆ ಮೆಟ್ಟಿಲೇರಿದೆ. ಚೈತ್ರಾ ಕೈ ಹಿಡಿದಿರುವ ಹುಡುಗ ನಾಗಾರ್ಜುನ್​ ಅವರು ಮಂಡ್ಯ ಮೂಲದವರು. ಕನ್​ಸ್ಟ್ರಕ್ಷನ್ ಮತ್ತು ರಿಯಲ್​ ಎಸ್ಟೇಟ್​​ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ಕಳೆದ ಒಂದು ವರ್ಷದಿಂದ, ಅಂದರೆ ಚೈತ್ರಾ ಬಿಗ್​ ಬಾಸ್​ ಕನ್ನಡ ಸೀಸನ್​ 7ರಲ್ಲಿ ಸ್ಪರ್ಧಿಸಿ ಹೊರಬಂದ ಬಳಿಕ ನಾಗಾರ್ಜುನ್​ ಪರಿಚಯ ಆಯಿತು. ನಂತರ ಅವರ ನಡುವೆ ಪ್ರೀತಿ ಚಿಗುರಿತ್ತು. ಈಗ ಆ ಪ್ರೀತಿಗೆ ಮದುವೆಯ ಮುದ್ರೆ ಬಿದ್ದಿತ್ತು. ಆದರೆ, ಈಗ ಈ ಪ್ರಕರಣ ಪೊಲೀಸ್​ ಠಾಣೆವರೆಗೆ ಹೋಗಿದೆ.

ಈ ಮದುವೆ ನಾಗಾರ್ಜುನ್ ಕುಟುಂಬಸ್ಥರಿಗೆ ಇಷ್ಟವಿಲ್ಲವಾಗಿತ್ತಂತೆ. ಹೀಗಾಗಿ, ಕೋಲಾರದ ಕುರುಬರಪೇಟೆಯ ಚೈತ್ರಾ ಮನೆಗೆ ಬಂದ ಮೇಲೆ ನಾಗಾರ್ಜುನ್ ಈ ಬಗ್ಗೆ ತಗಾದೆ ತಗೆದಿದ್ದಾರೆ. ಕೋಲಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿಚಾರಣೆ ನಡೆಸಲಾಗಿದೆ. ಬುಧವಾರದವರೆಗೆ ಈ ಜೋಡಿಗೆ ಪೊಲೀಸರು ಸಮಯ ನೀಡಿದ್ದಾರೆ.

CHAITHRA KOTTUR

ಪೊಲೀಸ್​ ಠಾಣೆಯಲ್ಲಿ ಚೈತ್ರಾ

ಬೆಳಗ್ಗೆ ಮದುವೆ ಆಗಿತ್ತು..

ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಇರುವ ಗಣಪತಿ ದೇವಸ್ಥಾನದಲ್ಲಿ ತುಂಬ ಸರಳವಾಗಿ ಚೈತ್ರಾ ಮತ್ತು ನಾಗಾರ್ಜುನ್​ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ‘ಹೀಗೆ ಸಿಂಪಲ್​ ಆಗಿ ಮದುವೆ ಆಗಬೇಕು ಎಂಬುದೇ ನನ್ನ ಉದ್ದೇಶ ಆಗಿತ್ತು. ಅದ್ದೂರಿ ವಿವಾಹದ ಬಗ್ಗೆ ನನಗೆ ಮೊದಲಿನಿಂದಲೂ ಆಸಕ್ತಿ ಇರಲಿಲ್ಲ. ಹಾಗಾಗಿ ಈ ನಿರ್ಧಾರ ತೆಗೆದುಕೊಂಡೆವು. ನನ್ನ ವೃತ್ತಿಜೀವನಕ್ಕೆ ನಾಗಾರ್ಜುನ್ ಬೆಂಬಲವಾಗಿದ್ದಾರೆ’ ಎಂದು ಚೈತ್ರಾ ಕೋಟೂರ್​ ಅವರು ಟಿವಿ9 ಡಿಜಿಟಲ್​ಗೆ ಮಾಹಿತಿ ನೀಡಿದ್ದರು.ಚೈತ್ರಾ ಮತ್ತು ನಾಗಾರ್ಜುನ್​ ಹಾರ ಬದಲಾಯಿಸಿಕೊಂಡಿರುವ ಫೋಟೋಗಳು ಹೊರಬಂದಿತ್ತು. ಅದನ್ನು ಕಂಡು ಎಲ್ಲರೂ ನವ ಜೋಡಿಗೆ ಶುಭಾಶಯ ಕೋರುತ್ತಿದ್ದರು.

ಬಿಗ್​ ಮೂಲಕ ಖ್ಯಾತಿ ಹೆಚ್ಚಿಸಿಕೊಂಡಿದ್ದ ಚೈತ್ರಾ..

ರಂಗಭೂಮಿ ಕಲಾವಿದೆಯಾಗಿ, ಸಿನಿಮಾ ನಟಿಯಾಗಿ ಮಾತ್ರವಲ್ಲದೆ ಬರಹಗಾರ್ತಿಯಾಗಿಯೂ ಚೈತ್ರಾ ಗುರುತಿಸಿಕೊಂಡಿದ್ದಾರೆ. ‘ಸೂಜಿದಾರ’ ಸಿನಿಮಾದಲ್ಲಿ ಅವರೊಂದು ಗಮನಾರ್ಹ ಪಾತ್ರ ಮಾಡಿದ್ದರು. ಬಿಗ್​ ಬಾಸ್​ ಕನ್ನಡ ಸೀಸನ್​ 7ರಲ್ಲಿ ಸ್ಪರ್ಧಿಸಿದ ಬಳಿಕ ಅವರ ಖ್ಯಾತಿ ಹೆಚ್ಚಿತು. ನಂತರ ಜಾಹೀರಾತು ನಿರ್ದೇಶನದಲ್ಲಿ ಅವರು ತೊಡಗಿಕೊಂಡರು. ಸಿನಿಮಾ ನಿರ್ದೇಶನಕ್ಕೂ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಒಂದು ಆಲ್ಬಂ ಹಾಡಿನಲ್ಲೂ ಚೈತ್ರಾ ನಟಿಸಿದ್ದು, ಅವರೇ ಸಾಹಿತ್ಯ ಬರೆದಿದ್ದಾರೆ. ಈ ನಡುವೆ ಅವರ ಮದುವೆ ಸುದ್ದಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್​ ಬಾಸ್​ ಚೈತ್ರಾ ಕೋಟೂರ್​! ಉದ್ಯಮಿ ಜೊತೆ ಸಿಂಪಲ್​ ವಿವಾಹ

Published On - 10:43 pm, Sun, 28 March 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ