ಕೊವಿಡ್ ಒಂದಾದಮೇಲೆ ಒಂದು ಅಲೆಗಳನ್ನು ಹೊತ್ತು ತರುತ್ತಿದೆ. ಕೊರೊನಾ ಎರಡನೇ ಅಲೆ ಕಡಿಮೆ ಆಗುತ್ತಿದೆ ಎನ್ನುವಾಗಲೇ ಮೂರನೇ ಅಲೆ ಬಗ್ಗೆ ಆತಂಕ ಕಾಡಿದೆ. ಈ ಮಧ್ಯೆ ಒಟಿಟಿ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದ್ದು, ಇದರಿಂದ ಸಿನಿಮಾ ಥಿಯೇಟರ್ಗೆ ಭವಿಷ್ಯ ಇಲ್ಲ ಎನ್ನುವ ಮಾತು ಕೂಡ ಕೇಳಿ ಬಂದಿದೆ. ಆದರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದನ್ನು ಒಪ್ಪಿಲ್ಲ. ಅವರು ಉದಾಹರಣೆ ಸಹಿತ ಇದನ್ನು ವಿವರಿಸಿದ್ದಾರೆ.
ಖಾಸಗಿ ಸುದ್ದಿ ವೆಬ್ಸೈಟ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ದರ್ಶನ್, ‘ಕಿರುತೆರೆ ಎಂಬುದು ಯಾವಾಗಲೂ ಕಿರುತೆರೆಯಾಗೇ ಉಳಿಯಲಿದೆ. ಇದಕ್ಕೆ ನಾನು ಒಳ್ಳೆಯ ಉದಾಹರಣೆ ಕೊಡುತ್ತೇನೆ. ರಾಬರ್ಟ್ ಟ್ರೇಲರ್ ರಿಲೀಸ್ ಆದ ಸಂದರ್ಭದಲ್ಲಿ ನಾನು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮಗ ಯತಿರಾಜ್ನನ್ನು ಭೇಟಿ ಮಾಡಿದ್ದೆ. ಅವರು ರಾಬರ್ಟ್ ಟ್ರೇಲರ್ ಚೆನ್ನಾಗಿಲ್ಲ ಎಂದಿದ್ದರು. ಇದು ನನಗೆ ಅಚ್ಚರಿ ಮೂಡಿಸಿತ್ತು’ ಎಂದು ಮಾತು ಆರಂಭಿಸಿದ್ದಾರೆ.
‘ಯತಿರಾಜ್ ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ನೋಡಿದರು. ಆಗ ಅದ್ಭುತವಾಗಿದೆ ಎನ್ನುವ ಉತ್ತರ ಅವರಿಂದ ಬಂತು. ಮೊಬೈಲ್ನಲ್ಲಿ ನೋಡಿದಾಗ ಅಷ್ಟು ಪರಿಣಾಮಕಾರಿ ಆಗಿ ಇರದೇ ಇರುವುದು ಚಿತ್ರಮಂದಿರದಲ್ಲಿ ಇಷ್ಟವಾಗುತ್ತದೆ. ಇದುವೇ ವ್ಯತ್ಯಾಸ. ದೊಡ್ಡ ಪರದೆ ಮೇಲೆ ನೋಡಿದರೆ ಸಿಗುವ ಫೀಲ್ ಬೇರೆ. ಹೀಗಾಗಿ, ಸಿನಿಮಾ ಮಂದಿರಗಳು ಕೊನೆಯವರೆಗೂ ಉಳಿದುಕೊಳ್ಳುತ್ತವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಲಾಕ್‌ಡೌನ್‌ನಿಂದಾಗಿ ರಾಜ್ಯದ 9 ಮೃಗಾಲಯಗಳೂ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿವೆ. ಇದರಿಂದಾಗಿ ಪ್ರಾಣಿಗಳ ಆಹಾರಕ್ಕೂ ಹಣವಿಲ್ಲದೆ ಪರದಾಡುತ್ತಿರುವ ಸ್ಥಿತಿ ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ ಬಂದೊದಗಿದೆ. ಹೀಗಾಗಿ ಮೃಗಾಲಯದ ಸಂಕಷ್ಟಕ್ಕೆ ನೆರವಾಗಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ನಟ ದರ್ಶನ್ ಅವರಿಗೆ ಮನವಿ ಮಾಡಿದ್ದರು. ನಟ ದರ್ಶನ್ ಅವರು ಮನವಿ ಮಾಡಿದ ಆರು ದಿನಗಳಲ್ಲೇ ಒಂದು ಕೋಟಿಯಷ್ಟು ಹಣ ಮೃಗಾಲಯ ಪ್ರಾಧಿಕಾರದ ಖಾತೆಗೆ ಸಂದಾಯವಾಗಿದೆ.
ಇದನ್ನೂ ಓದಿ:
ಮಣ್ಣಿನಲ್ಲಿ ಸ್ನಾನ ಮಾಡಿದ ದರ್ಶನ್ ಸಿನಿಮಾ ಹೀರೋಯಿನ್; ಇವರು ಯಾರೆಂದು ಗುರುತಿಸಬಲ್ಲಿರಾ?