ಕಾನ್ ಸಿನಿಮೋತ್ಸವದಲ್ಲಿ ಕನ್ನಡದ ನಿರ್ದೇಶಕ; ಪ್ರದರ್ಶನ ಕಂಡ ‘ಸನ್ಫ್ಲವರ್’ ಕಿರುಚಿತ್ರ
ಕಾನ್ ಸಿನಿಮೋತ್ಸವದಲ್ಲಿ ಭಾಗವಿಹಿಸುವ ಅವಕಾಶ ಸಿಕ್ಕರೆ ಸಾಮಾನ್ಯವಾಗಿ ಎಲ್ಲರಿಗೂ ಖುಷಿ ಆಗಿಯೇ ಆಗುತ್ತದೆ. ಅದೇ ರೀತಿ ಚಿದಾನಂದ ಅವರಿಗೂ ಪ್ರತಿಷ್ಠಿತ ಸಿನಿಮೋತ್ಸವದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಖುಷಿ ಇದೆ. ಈ ಕಿರುಚಿತ್ರವನ್ನು ವೀಕ್ಷಿಸಿದ ವಿದೇಶಿ ಮಂದಿ ಮೆಚ್ಚಿಕೊಂಡಿದ್ದಾರೆ.
ಕಾನ್ ಫಿಲ್ಮ್ ಫೆಸ್ಟಿವಲ್ (2024 Cannes Film Festival) ಅದ್ದೂರಿಯಾಗಿ ನಡೆದಿದೆ. ಈ ಸಿನಿಮೋತ್ಸವದಲ್ಲಿ ಭಾಗವಹಿಸೋದು ಎಂದರೆ ನಿಜಕ್ಕೂ ಹೆಮ್ಮೆಯ ವಿಚಾರ. ಐಶ್ವರ್ಯಾ ರೈ ಅವರು ‘ಕಾನ್’ ಸಿನಿಮೋತ್ಸವದಲ್ಲಿ ಭಾಗಿ ಆಗಿದ್ದರು. ಇದರಲ್ಲಿ ಕನ್ನಡದ ಚಿದಾನಂದ ಎಸ್. ನಾಯಕ್ ಹೆಸರಿನ ನಿರ್ದೇಶಕ ಕೂಡ ಭಾಗಿ ಆಗಿದ್ದಾರೆ. ವೈದ್ಯರಾಗಿದ್ದ ಅವರು ನಂತರ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅವರು ‘ಸನ್ಫ್ಲವರ್’ ಹೆಸರಿನ ಕಿರುಚಿತ್ರ ಮಾಡಿದ್ದು, ಇದು ಕಾನ್ ಸಿನಿಮೋತ್ಸವದಲ್ಲಿ ಪ್ರದರ್ಶನ ಕಂಡಿದೆ.
ಕಾನ್ ಸಿನಿಮೋತ್ಸವದಲ್ಲಿ ಭಾಗವಿಹಿಸುವ ಅವಕಾಶ ಸಿಕ್ಕರೆ ಸಾಮಾನ್ಯವಾಗಿ ಎಲ್ಲರಿಗೂ ಖುಷಿ ಆಗಿಯೇ ಆಗುತ್ತದೆ. ಅದೇ ರೀತಿ ಚಿದಾನಂದ ಅವರಿಗೂ ಪ್ರತಿಷ್ಠಿತ ಸಿನಿಮೋತ್ಸವದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಖುಷಿ ಇದೆ. ಈ ಕಿರುಚಿತ್ರವನ್ನು ವೀಕ್ಷಿಸಿದ ವಿದೇಶಿ ಮಂದಿ ಮೆಚ್ಚಿಕೊಂಡಿದ್ದಾರಂತೆ. ಕನ್ನಡದವರು ಈ ರೀತಿಯ ಕಿರುಚಿತ್ರ ಮಾಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ ಎನ್ನುವುದು ಅವರ ಮಾತು.
‘ಸನ್ಫ್ಲವರ್’ ಕಿರುಚಿತ್ರ ಕೇವಲ 16 ನಿಮಿಷ ಇದೆ. ಈ ಅವಧಿಯಲ್ಲಿ ಹಾಸ್ಯ, ಫ್ಯಾಂಟಸಿ ಮೊದಲಾದ ವಿಚಾರಗಳನ್ನು ಚಿದಾನಂದ ಸೇರಿಸಿದ್ದಾರೆ. ವೈದ್ಯರಾಗಿದ್ದ ಚಿದಾನಂದ ಅವರಿಗೆ ಸಿನಿಮಾ ರಂಗ ಆಕರ್ಷಿಸಿತು. ಕಥೆ ಹೇಳಬೇಕು ಎನ್ನುವ ಆಸೆ ಅವರದ್ದು. ಸಿನಿಮಾಗಳ ಮೂಲಕ ಹೆಚ್ಚಿನದ್ದನ್ನು ಅಭಿವ್ಯಕ್ತಿಪಡಿಸಬಹುದು ಎಂದು ಅವರಿಗೆ ಅನಿಸಿದೆ. ಹೀಗಾಗಿ ಅವರು ಸಿನಿಮಾ ನಿರ್ದೇಶನ ಆಯ್ಕೆ ಮಾಡಿಕೊಂಡರು.
ಕಾನ್ ಸಿನಿಮೋತ್ಸವದ ಬಳಿಕ ಚಿದಾನಂದ ಅವರು ಪ್ಯಾರಿಸ್ಗೆ ತೆರಳಲಿದ್ದಾರೆ. ಅಲ್ಲಿ ಅವರ ಕಿರುಚಿತ್ರ ಪ್ರದರ್ಶನ ಕಾಣಲಿದೆ. ಕಿರುಚಿತ್ರದಲ್ಲಿ ಕೆಲಸ ಮಾಡಿದವರು ನಂತರ ಪೂರ್ಣಪ್ರಮಾಣದ ಸಿನಿಮಾ ನಿರ್ಮಾಣ ಮಾಡಲು ಆಸಕ್ತಿ ತೋರಿಸುತ್ತಾರೆ. ಚಿದಾನಂದ ಅವರಿಗೂ ಅದೇ ರೀತಿಯ ಆಸೆ ಇದೆ. ಇದಕ್ಕಾಗಿ ಅವರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ವರ್ಷದ ವೇಳೆಗೆ ಈ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.
ಇದನ್ನೂ ಓದಿ: ಕೈಗೆ ಪೆಟ್ಟಾದರೂ ಕಾನ್ ಚಿತ್ರೋತ್ಸವದಲ್ಲಿ ಮಿಂಚಿದ ಐಶ್ವರ್ಯಾ ರೈ
ಕಾನ್ ಸಿನಿಮೋತ್ಸವದಲ್ಲಿ ಭಾಗ ಆಗಬೇಕು ಎಂಬುದು ಸಿನಿಮಾ ನಿಮ್ರಾತೃರ ಆಸೆ ಆಗಿರುತ್ತದೆ. ಆದರೆ, ಎಲ್ಲರಿಗೂ ಈ ಅವಕಾಶ ಸಿಗುವುದಿಲ್ಲ. ಹೀಗೊಂದು ಅಪರೂಪದ ಅವಕಾವನ್ನು ಪಡೆದು ಖುಷಿಯಾಗಿದ್ದಾರೆ ಚಿದಾನಂದ ಅವರು. ಅದರಲ್ಲೂ ಕನ್ನಡ ಕಿರುಚಿತ್ರವನ್ನು ಸಿನಿಮೋತ್ಸವದಲ್ಲಿ ಪ್ರದರ್ಶಿಸಿದ್ದಕ್ಕೆ ಅವರಿಗೆ ಖುಷಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:31 pm, Thu, 23 May 24