ರಾಯ್ ನಿಧನದಿಂದ ಶಾಕ್ ಆದ ಹರ್ಷಿಕಾ; ಮನೆ ಹೇಗಿತ್ತು ಎಂದು ವಿವರಿಸಿದ ನಟಿ

ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ಕನ್ನಡ ಚಿತ್ರರಂಗ ಹಾಗೂ ರಿಯಲ್ ಎಸ್ಟೇಟ್ ವಲಯದಲ್ಲಿ ಆಘಾತ ಮೂಡಿಸಿದೆ. ಐಷಾರಾಮಿ ಜೀವನ ನಡೆಸಿದ ಸಿಜೆ ರಾಯ್, ಐಟಿ ದಾಳಿ ಬಳಿಕ ಈ ನಿರ್ಧಾರಕ್ಕೆ ಬಂದಿದ್ದು ಅಚ್ಚರಿ ಮೂಡಿಸಿದೆ. ನಟಿ ಹರ್ಷಿಕಾ ಪೂಣಚ್ಚಾ ಅವರು ರಾಯ್ ಅವರ ವ್ಯಕ್ತಿತ್ವ, ಕುಟುಂಬದೊಂದಿಗಿನ ಸಂಬಂಧ ಹಾಗೂ ಅವರ ರಾಜನಂತಹ ಬದುಕಿನ ಬಗ್ಗೆ ಮಾಹಿತಿ ನೀಡಿದ್ದಾರೆ.

ರಾಯ್ ನಿಧನದಿಂದ ಶಾಕ್ ಆದ ಹರ್ಷಿಕಾ; ಮನೆ ಹೇಗಿತ್ತು ಎಂದು ವಿವರಿಸಿದ ನಟಿ
ರಾಯ್-ಹರ್ಷಿಕಾ
Edited By:

Updated on: Jan 31, 2026 | 10:48 AM

ರಿಯಲ್ ಎಸ್ಟೇಟ್ ಉದ್ಯಮಿ ಸಿಜೆ ರಾಯ್ (CJ Roy) ಆತ್ಮಹತ್ಯೆ ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಅವರ ಆಪ್ತರು ಎನಿಸಿಕೊಂಡವರಿಗೆ ಈ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಟಿ ಹರ್ಷಿಕಾ ಅವರು ‘ಕಾನ್ಫಿಡೆಂಟ್ ಗ್ರೂಪ್​’ನ ಪ್ರಚಾರ ರಾಯಭಾರಿ ಆಗಿದ್ದರು. ಸಿಜೆ ರಾಯ್​​​ನ ಅವರು ಹತ್ತಿರದಿಂದ ಕಂಡಿದ್ದರು. ಅವರು ರಾಯ್ ಅವರ ಒಡನಾಟದ ಬಗ್ಗೆ, ಅವರ ವ್ಯಕ್ತಿತ್ವದ ಬಗ್ಗೆ, ಅವರ ಐಷಾರಾಮಿ ಜೀವನದ ಬಗ್ಗೆ ಮಾತನಾಡಿದ್ದಾರೆ.

‘ರಾಯ್ ಅವರು ಈ ರೀತಿಯ ನಿರ್ಧಾರವನ್ನು ಏಕೆ ತೆಗೆದುಕೊಂಡರೋ ಗೊತ್ತಿಲ್ಲ. ಇದು ನಿಜಕ್ಕೂ ಶಾಕಿಂಗ್ ಆಗಿದೆ. ನನ್ನ ಸಿನಿಮಾನ ಅವರು ನಿರ್ಮಾಣ ಮಾಡಿದ್ದರು. ಅವರ ಕಾನ್ಫಿಡೆಂಟ್ ಗ್ರೂಪ್​​ಗೆ ನಾನು ಪ್ರಚಾರ ರಾಯಭಾರಿ ಆಗಿದ್ದೆ. ಅವರು ಒಳ್ಳೆಯ ವ್ಯಕ್ತಿ. ನನ್ನ ಮದುವೆಗೆ ಬಂದಿದ್ದರು, ಮಗುವಿನ ಹುಟ್ಟುಹಬ್ಬಕ್ಕೆ ಬಂದಿದ್ದರು. ಅವರು ಕುಟುಂಬದಲ್ಲಿ ಒಬ್ಬರಾಗಿದ್ದರು’ ಎಂದು ಹರ್ಷಿಕಾ ಹೇಳಿದ್ದಾರೆ.

‘ಸಿಜೆ ರಾಯ್ ಕೊಂಚವೂ ಲೋನ್ ಹೊಂದಿರಲಿಲ್ಲ. ರಾಜನ ರೀತಿ ಬದುಕಿದ್ದರು. ದುಬೈನಲ್ಲಿ ಅವರ ಮನೆ ಮ್ಯಾನ್ಶನ್ ರೀತಿ ಇತ್ತು. ಕಾರಿನ ಕಲೆಕ್ಷನ್ ಬಗ್ಗೆ ಅಂತೂ ಹೇಳೋದೇ ಬೇಡ. ಅವರ ಇಡೀ ಕುಟುಂಬ ತುಂಬಾನೇ ಸ್ವೀಟ್. ಜನರಿಗೆ ಒಳ್ಳೆಯದನ್ನು ಮಾಡುವವರು ಇವರು. ಆದರೆ, ಹೀಗೇಕೆ ಮಾಡಿಕೊಂಡರು ಎಂಬುದೇ ಪ್ರಶ್ನೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಹನುಮಂತಗೆ ಲಕ್ಷಲಕ್ಷ ಹಣ, ಪುನೀತ್​​ಗೆ ಪ್ರಾಪರ್ಟಿ ನೀಡಿದ್ದ ಉದ್ಯಮಿ ರಾಯ್

‘ನಾನು ಚಿಕ್ಕಬಳ್ಳಾಪುರದ ಈವೆಂಟ್​​​ಗೆ ಹೋಗಿದ್ದೆ. ಆಗ ಸಾವಿನ ಸುದ್ದಿ ಗೊತ್ತಾಯ್ತು. ನನಗೆ 10-20 ನಿಮಿಷ ಮಾತು ಬರಲೇ ಇಲ್ಲ’ ಎಂದು ದುಃಖ ಹೊರಹಾಕಿದ್ದಾರೆ. ರಾಯ್ ಅವರ ಕಚೇರಿ ಮೇಲೆ ಐಟಿ ದಾಳಿ ಆಗಿತ್ತು. ಅಧಿಕಾರಗಳು ತನಿಖೆ ನಡೆಸುವಾಗಲೇ ರಾಯ್ ಅವರು ಎದೆಗೆ ಗುಂಡು ಹೊಡೆದುಕೊಂಡು ನಿಧನ ಹೊಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.