‘ಸಿಎಂ ಯಡಿಯೂರಪ್ಪ ನಿಜವಾದ ರಾಜಾಹುಲಿ’: ಹೌಸ್​ಫುಲ್ ಅವಕಾಶ ನೀಡಿದ್ದಕ್ಕೆ ಕೇಳಿಬಂತು ಹೊಗಳಿಕೆ

| Updated By: ganapathi bhat

Updated on: Apr 05, 2022 | 12:53 PM

ಸ್ಯಾಂಡಲ್​ವುಡ್ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರಕ್ಕೆ ಸಿನಿರಂಗದವರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ನಟ ಪುನೀತ್ ರಾಜ್​ಕುಮಾರ್, ಪುನೀತ್ ಅಭಿಮಾನಿಗಳು ಹಾಗೂ ಸಿನಿಪ್ರಿಯರು ಸಂತಸ ವ್ಯಕ್ತಪಡಿಸಿದ್ದಾರೆ.

‘ಸಿಎಂ ಯಡಿಯೂರಪ್ಪ ನಿಜವಾದ ರಾಜಾಹುಲಿ’: ಹೌಸ್​ಫುಲ್ ಅವಕಾಶ ನೀಡಿದ್ದಕ್ಕೆ ಕೇಳಿಬಂತು ಹೊಗಳಿಕೆ
ಸಿಎಂ ಯಡಿಯೂರಪ್ಪ
Follow us on

ಬೆಂಗಳೂರು: ಸಿನಿಮಾ ಹಾಲ್​ಗಳಲ್ಲಿ ಶೇ. 100ರಷ್ಟು ಸೀಟು ಭರ್ತಿಗೆ ಅವಕಾಶ ನೀಡಬೇಕು ಎಂಬ ಸ್ಯಾಂಡಲ್​ವುಡ್​ ಮನವಿಗೆ ರಾಜ್ಯ ಸರ್ಕಾರ ಕೊನೆಗೂ ಸಕಾರಾತ್ಮಕವಾಗಿ ಸ್ಪಂದಿಸಿದೆ. ಏಪ್ರಿಲ್ 7ರ ವರೆಗೆ, ಅಂದರೆ ಇನ್ನು ಮೂರು ದಿನಗಳ ಕಾಲ ಥಿಯೇಟರ್ ಹೌಸ್​ಫುಲ್​ಗೆ ಅವಕಾಶ ನೀಡಿ ಆದೇಶ ಹೊರಡಿಸಿದೆ.

ಸ್ಯಾಂಡಲ್​ವುಡ್ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರಕ್ಕೆ ಸಿನಿರಂಗದವರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ನಟ ಪುನೀತ್ ರಾಜ್​ಕುಮಾರ್, ಪುನೀತ್ ಅಭಿಮಾನಿಗಳು ಹಾಗೂ ಸಿನಿಪ್ರಿಯರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ಮಾಪಕ ಕ. ಮಂಜು, ಸಿಎಂ ಯಡಿಯೂರಪ್ಪ ಅವರೇ ನಿಜವಾದ ರಾಜಾಹುಲಿ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ನಿರ್ಮಾಪಕ ಕೆ.ಮಂಜು ಧನ್ಯವಾದ ತಿಳಿಸಿದ್ದಾರೆ. ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಕೂಡ ಮುಖ್ಯಮಂತ್ರಿಗೆ ಧನ್ಯವಾದ ಹೇಳಿದ್ದಾರೆ.

3 ದಿನಗಳ ಕಾಲ ಥಿಯೇಟರ್​ ಫುಲ್​ ಭರ್ತಿಗೆ ಅವಕಾಶ ನೀಡಿರುವ ಕಾರಣ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನಟ ಪುನೀತ್ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ, ಕೊವಿಡ್ ನಿಯಮ ಪಾಲಿಸಿ ಸಿನಿಮಾ ವೀಕ್ಷಿಸುವಂತೆ ಸಲಹೆ ಸಿನಿಪ್ರಿಯರಿಗೆ ಸಲಹೆ ನೀಡಿದ್ದಾರೆ.

ಈಗಾಗಲೇ ‘ಯುವರತ್ನ’ ಟಿಕೆಟ್​ ಬುಕ್​ ಆಗಿರುವ ಹಿನ್ನೆಲೆಯಲ್ಲಿ, ಥಿಯೇಟರ್​ ಭರ್ತಿಗೆ ಚಿತ್ರ ಪೇಮಿಗಳು ಅವಕಾಶ ಕೇಳಿದ್ದರು. ನಟ ಪುನೀತ್ ಸೇರಿದಂತೆ, ಶಿವರಾಜ್​ಕುಮಾರ್, ಸುದೀಪ್, ಯಶ್ ಹಾಗೂ ಇತರ ನಟರು ಕೂಡ ಒತ್ತಾಯಿಸಿದ್ದರು. ಸಿಎಂ ಬಿಎಸ್​ವೈ ಭೇಟಿಯಾಗಿ ನಟ ಪುನೀತ್ ಮನವಿ ಸಲ್ಲಿಸಿದ್ದರು. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು, ನಟ ಪುನೀತ್ ಅಭಿಮಾನಿಗಳು ಕೂಡ ಮನವಿ ಮಾಡಿದ್ದರು. ತಮ್ಮ ಮನವಿಗೆ ಸ್ಪಂದಿಸಿ ಅವಕಾಶ ನೀಡಿದ್ದಕ್ಕೆ ಸಿನಿರಂಗ ಫುಲ್​ಖುಷ್​ ಆಗಿದೆ.

ಇದನ್ನೂ ಓದಿ: ಯುವರತ್ನನಿಗೆ ರಿಲೀಫ್: ಏಪ್ರಿಲ್ 7ರವರೆಗೂ ಥಿಯೇಟರ್​ ಹೌಸ್ ಫುಲ್​ಗೆ ಅವಕಾಶ

ಇದನ್ನೂ ಓದಿ: ಯುವರತ್ನ ಚಿತ್ರಕ್ಕೆ ತೊಂದರೆ: ಮೌನ ಮುರಿದ ಯಶ್​, ಶಿವರಾಜ್​ಕುಮಾರ್​!

Published On - 9:53 pm, Sat, 3 April 21