‘ಇಂಥ ಗಿಫ್ಟ್ ನೀಡಲು ಅಲ್ಲಾಹಗೆ ಮಾತ್ರ ಅಧಿಕಾರ ಇದೆ’; ಎರಡನೇ ಬಾರಿ ತಾಯಿ ಆಗಲಿದ್ದಾರೆ ‘ಕೂಲ್’ ಸಿನಿಮಾ ನಟಿ

‘ಕೂಲ್’ ಸಿನಿಮಾದ ನಟಿ ಸನಾ ಖಾನ್ ಅವರು ಎರಡನೇ ಮಗುವನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಘೋಷಿಸಿದ್ದಾರೆ. ಇದು ಅಲ್ಲಾಹನ ಆಶೀರ್ವಾದ ಎಂದು ತಿಳಿಸಿರುವ ಅವರು ತಮ್ಮ ಸಂತೋಷವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸನಾ ಅವರಿಗೆ ಅಭಿಮಾನಿಗಳಿಂದ ಶುಭಾಶಯಗಳು ಹರಿದುಬರುತ್ತಿವೆ.

‘ಇಂಥ ಗಿಫ್ಟ್ ನೀಡಲು ಅಲ್ಲಾಹಗೆ ಮಾತ್ರ ಅಧಿಕಾರ ಇದೆ’; ಎರಡನೇ ಬಾರಿ ತಾಯಿ ಆಗಲಿದ್ದಾರೆ ‘ಕೂಲ್’ ಸಿನಿಮಾ ನಟಿ
ಸನಾ ಖಾನ್

Updated on: Nov 23, 2024 | 12:03 PM

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಕೂಲ್’ ಚಿತ್ರದಲ್ಲಿ ನಟಿಸಿದ್ದ ಸನಾ ಖಾನ್ ಅವರು ಇತ್ತೀಚೆಗೆ ಚಿತ್ರರಂಗ ತೊರೆದಿದ್ದಾರೆ. ಮುಸ್ಲಿಂ ಧರ್ಮಗುರು ಅನಾಸ್ ಸಯ್ಯದ್ ಅವರನ್ನು ಮದುವೆ ಆಗಿದ್ದರು. ಈಗ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಈ ವಿಚಾರವನ್ನು ಅವರು ಇತ್ತೀಚೆಗೆ ರಿವೀಲ್ ಮಾಡಿದ್ದಾರೆ. ಸೋಶಿಯಲ್ ವೀಡಿಯಾದಲ್ಲಿ ಈ ಬಗ್ಗೆ ಅವರು ವಿಡಿಯೋ ಪೋಸ್ಟ್ ಮಾಡಿದ್ದಾರೆ.  ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ.

‘ಅಲ್ಲಾಹನ ಆಶೀರ್ವಾದದಿಂದ ನಾವು ಮೂವರು ಈಗ ನಾಲ್ವರಾಗುತ್ತಿದ್ದೇವೆ. ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದೇವೆ. ಸೈಯದ್ ತಾರಿಕ್ ಜಮೀಲ್ ಅಣ್ಣನಾಗಲು ಉತ್ಸುಕನಾಗಿದ್ದಾನೆ. ಮಗುವಿಗಾಗಿ ನಾವು ಕಾಯುತ್ತಿದ್ದೇವೆ. ಅಲ್ಲಾಹ ನಿಮ್ಮ ಆಶೀರ್ವಾದ ಇರಲಿ’ ಎಂದು ಅವರು ಬರೆದುಕೊಂಡಿದ್ದಾರೆ.

‘ಇಂಥ ಉಡುಗೊರೆಯನ್ನು ನೀಡಲು ಅಲ್ಲಾಹನಿಗೆ ಮಾತ್ರ ಅಧಿಕಾರವಿದೆ. ನಮಗೆ ಒಳ್ಳೆಯದು ಮಾಡಲಿ. ಅಲ್ಲಾಹ ನಮ್ಮ ಪ್ರಾರ್ಥನೆಯನ್ನು ಸ್ವೀಕರಿಸಲಿ’ ಎಂದು ಅವರು ಕೋರಿದ್ದಾರೆ. ಸನಾ ಖಾನ್ ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ.

ಸನಾ ಅವರು ಮೂಲತಃ ಕೇರಳದವರು. ಅವರು ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಅವರು 2005ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಅವರು ಹಿಂದಿ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದರು. 2011ರಲ್ಲಿ ‘ಕೂಲ್’ ಸಿನಿಮಾದಲ್ಲಿ ನಟಿಸಿದ್ದರು. ಗಣೇಶ್​ಗೆ ಅವರು ಜೊತೆಯಾಗಿದ್ದರು. ಅವರು ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲೂ ನಟಿಸಿದ್ದಾರೆ. 2019ರಲ್ಲಿ ರಿಲೀಸ್ ಆದ ತಮಿಳಿನ ‘ಅಯೋಗ್ಯ’ ಅವರ ನಟನೆಯ ಕೊನೆಯ ಚಿತ್ರ.

ಇದನ್ನೂ ಓದಿ: ರೆಹಮಾನ್ ಜೊತೆ ಲಿಂಕ್; ಮಾಧ್ಯಮಗಳ ಎದುರು ಬರಲು ಭಯಬಿದ್ದ ಮೋಹಿನಿ ಡೇ

ಸನಾ 2020ರಲ್ಲಿ ಚಿತ್ರರಂಗ ತೊರೆದರು. ‘ನಾನು ಸಿನಿಮಾ ರಂಗಕ್ಕೆ ಗುಡ್​ಬೈ ಹೇಳುತ್ತಿದ್ದೇನೆ’ ಎಂದು ಹೇಳಿದ್ದರು. ಅವರು 2020ರ ನವೆಂಬರ್​ನಲ್ಲಿ ಮದುವೆ ಆದರು. ಸೈಯ್ಯದ್ ತಾರಿಖ್ ಜಮೀಲ್​ ಹೆಸರಿನ ಮಗುವಿಗೆ ಅವರು ಜನ್ಮನೀಡಿದರು. ಅವರು ಕೆಲವು ಫೌಂಡೇಷನ್ ಸ್ಥಾಪಿಸಿ ಸಾಮಾಜಿಕ ಕೆಲಸ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

Published On - 12:02 pm, Sat, 23 November 24