ರೆಹಮಾನ್ ಜೊತೆ ಲಿಂಕ್; ಮಾಧ್ಯಮಗಳ ಎದುರು ಬರಲು ಭಯಬಿದ್ದ ಮೋಹಿನಿ ಡೇ

ಮೋಹಿನಿ ಹಾಗೂ ರೆಹಮಾನ್ ಮಧ್ಯೆ ಏನೋ ನಡೆಯುತ್ತಿದೆ ಎಂದು ಅನೇಕರು ಊಹಿಸಿದ್ದರು. ಆದರೆ, ಈ ಊಹೆ ಸುಳ್ಳಾಗಿದೆ. ಈ ಬಗ್ಗೆ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಬರೆಯಲಾಗಿದೆ. ‘ನನಗೆ ನನ್ನ ಎನರ್ಜಿ ಬಗ್ಗೆ ನಂಬಿಕೆ ಇದೆ. ಅದನ್ನು ವದಂತಿಗಳನ್ನು ಹಬ್ಬಿಸಲು ಖರ್ಚು ಮಾಡುವುದಿಲ್ಲ. ಖಾಸಗಿತನಕ್ಕೆ ಗೌರವ ನೀಡಿ’ ಎಂದು ಅವರು ಕೋರಿದ್ದಾರೆ.

ರೆಹಮಾನ್ ಜೊತೆ ಲಿಂಕ್; ಮಾಧ್ಯಮಗಳ ಎದುರು ಬರಲು ಭಯಬಿದ್ದ ಮೋಹಿನಿ ಡೇ
ಮೋಹಿನಿ-ರೆಹಮಾನ್
Follow us
ರಾಜೇಶ್ ದುಗ್ಗುಮನೆ
|

Updated on:Nov 23, 2024 | 12:09 PM

ಎಆರ್ ರೆಹಮಾನ್ ಹಾಗೂ ಸೈರಾ ಬಾನು ವಿಚ್ಛೇದನ ಪಡೆದಿದ್ದು ಗೊತ್ತೇ ಇದೆ. 29 ವರ್ಷಗಳ ದಾಂಪತ್ಯ ಕೊನೆ ಆಗಿದ್ದು ಅನೇಕರಿಗೆ ಶಾಕಿಂಗ್ ತಂದಿದೆ. ಇದರ ಬೆನ್ನಲ್ಲೇ ರೆಹಮಾನ್ ಬ್ಯಾಂಡ್​ನಲ್ಲಿ ಇದ್ದ ಮೋಹಿನಿ ಡೇ ಅವರು ಪತಿ ಮಾರ್ಕ್​ ಜೊತೆ ವಿಚ್ಛೇದನ ಪಡೆದಿದ್ದಾರೆ. ಇದು ಚರ್ಚೆಯ ಕೇಂದ್ರ ಬಿಂದು ಆಗಿದೆ. ಈ ಎರಡೂ ವಿಚ್ಛೇದನವನ್ನು ಲಿಂಕ್ ಮಾಡಲಾಗಿದೆ. ಮೋಹಿನಿ ಡೇ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮೋಹಿನಿ ಹಾಗೂ ರೆಹಮಾನ್ ಮಧ್ಯೆ ಏನೋ ನಡೆಯುತ್ತಿದೆ ಎಂದು ಅನೇಕರು ಊಹಿಸಿದ್ದರು. ಆದರೆ, ಈ ಊಹೆ ಸುಳ್ಳಾಗಿದೆ. ಈ ಬಗ್ಗೆ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಬರೆಯಲಾಗಿದೆ. ‘ಸಂದರ್ಶನಕ್ಕಾಗಿ ನನಗೆ ಆಹ್ವಾನ ಬರುತ್ತಿದೆ. ಅದು ಯಾಕೆ ಎಂದು ನನಗೆ ಗೊತ್ತು. ನಾನು ಅದನ್ನು ಗೌರವಯುತವಾಗಿ ತಿರಸ್ಕರಿಸುತ್ತಿದ್ದೇನೆ. ವದಂತಿ ಹೆಚ್ಚಿಸಲು ನನಗೆ ಇಷ್ಟ ಇಲ್ಲ’ ಎಂದಿದ್ದಾರೆ ಅವರು.

‘ನನಗೆ ನನ್ನ ಎನರ್ಜಿ ಬಗ್ಗೆ ನಂಬಿಕೆ ಇದೆ. ಅದನ್ನು ವದಂತಿಗಳನ್ನು ಹಬ್ಬಿಸಲು ಖರ್ಚು ಮಾಡುವುದಿಲ್ಲ. ಖಾಸಗಿತನಕ್ಕೆ ಗೌರವ ನೀಡಿ’ ಎಂದು ಅವರು ಕೋರಿದ್ದಾರೆ. ರೆಹಮಾನ್ ಹಾಗೂ ಸೈರಾ ದೂರ ಆಗಲು ಮೋಹಿನಿ ಕಾರಣ ಎಂದು ಹೇಳಲಾಗಿತ್ತು. ಆದರೆ, ಸೈರಾ ತಂಡದವರು ಇದನ್ನು ಅಲ್ಲ ಗಳೆದಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ನಲ್ಲಿ ಲೈಂಗಿಕ ಜೀವನದ ಬಗ್ಗೆ ಇರೋ ಅತಿಯಾದ ನಿರೀಕ್ಷೆಯಿಂದ ವಿಚ್ಛೇದನ; ಸೈರಾ ಬಾನು ವಕೀಲರ ಹೇಳಿಕೆ 

ರೆಹಮಾನ್ ಹಾಗೂ ಸೈರಾ 29 ವರ್ಷಗಳ ಕಾಲ ದಾಂಪತ್ಯ ನಡೆಸಿದ್ದರು. 1995ರಲ್ಲಿ ವಿವಾಹ ಆದ ಅವರು ಇಬ್ಬರೂ ಮದುವೆ ಆದರು. ಅವರ ಮಧ್ಯೆ ಯಾವ ರೀತಿಯ ತೊಂದರೆ ಬಂತೋ ಏನೋ. ಒಟ್ಟಿನಲ್ಲಿ ಇವರು ಬೇರೆ ಆಗುವ ನಿರ್ಧಾರ ಮಾಡಿದ್ದಾರೆ. ಇದು ಅನೇಕರಿಗೆ ಅಚ್ಚರಿ ತಂದಿದೆ. ಸೈರಾ ಬಾನು ಪರ ವಕೀಲರು ಕೂಡ ಈ ಬಗ್ಗೆ ಮಾತನಾಡಿದ್ದಾರೆ. ರೆಹಮಾನ್ ವಿಚ್ಛೇದನಕ್ಕೂ ಮೋಹಿನಿ ವಿಚ್ಛೇದನಕ್ಕೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:56 am, Sat, 23 November 24

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ