‘ಕಂಗುವ’ ಹೀನಾಯ ಸೋಲು; ಸೂರ್ಯಗೆ ಸಿಕ್ಕ ಬಿಗ್ ಬಜೆಟ್ ಸಿನಿಮಾ ಬಂದ್
ಬಾಲಿವುಡ್ನಲ್ಲಿ ‘ಕರ್ಣ’ ಹೆಸರಿನ ಸಿನಿಮಾ ಪ್ಲ್ಯಾನ್ ಮಾಡಲಾಗಿತ್ತು. ಇದು ಬರೋಬ್ಬರಿ 350 ಕೋಟಿ ರೂಪಾಯಿ ಬಜೆಟ್ ಸಿನಿಮಾ. ಇದರಲ್ಲಿ ಸೂರ್ಯ ಅವರು ಕರ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ, ಈಗ ಈ ಚಿತ್ರಕ್ಕೆ ಬ್ರೇಕ್ ಬಿದ್ದಿದೆ.
ನಟ ಸೂರ್ಯ ಅವರಿಗೆ ದೊಡ್ಡ ಮಾರುಕಟ್ಟೆ ಇದೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಈ ಕಾರಣಕ್ಕೆ ದೊಡ್ಡ ಮೊತ್ತದ ಹಣ ಹಾಕಿದರೆ ಮರಳಿ ಬರುತ್ತವೆ ಎಂಬ ನಂಬಿಕೆ ನಿರ್ಮಾಪಕರಿಗೆ ಇತ್ತು. ‘ಕಂಗುವ’ ಸಿನಿಮಾ ಸೋಲಿನಿಂದ ಇದು ಸುಳ್ಳಾಗಿದೆ. ‘ಕಂಗುವ’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಹೀನಾಯ ಸೋಲು ಕಂಡಿದೆ. ಇದು ಸೂರ್ಯ ಅವರ ಮುಂದಿನ ಸಿನಿಮಾಗಳ ಮೇಲೆ ಪರಿಣಾಮ ಬೀರಿದೆ. ಅವರಿಗೆ ನೀಡಲಾದ ಬಿಗ್ ಬಜೆಟ್ ಚಿತ್ರವನ್ನು ಹಿಂಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ.
ಬಾಲಿವುಡ್ನಲ್ಲಿ ‘ಕರ್ಣ’ ಹೆಸರಿನ ಸಿನಿಮಾ ಪ್ಲ್ಯಾನ್ ಮಾಡಲಾಗಿತ್ತು. ಇದು ಬರೋಬ್ಬರಿ 350 ಕೋಟಿ ರೂಪಾಯಿ ಬಜೆಟ್ ಸಿನಿಮಾ. ಇದರಲ್ಲಿ ಸೂರ್ಯ ಅವರು ಕರ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಇದು ಮಹಾಭಾರತದ ಕರ್ಣ ಅವರನ್ನು ಆಧರಿಸಿ ಸಿದ್ಧಗೊಳ್ಳಬೇಕಿದ್ದ ಸಿನಿಮಾ ಆಗಿತ್ತು. ‘ಭಾಗ್ ಮಿಲ್ಕಾ ಭಾಗ್’ ನಿರ್ದೇಶಕ ರಾಕೇಶ್ ಓಂ ಪ್ರಕಾಶ್ ಮೆಹ್ರಾ ಈ ಚಿತ್ರವನ್ನು ನಿರ್ದೇಶನ ಮಾಡಬೇಕಿತ್ತು. ಈ ಸಿನಿಮಾ ಎರಡು ಪಾರ್ಟ್ನಲ್ಲಿ ಬರಬೇಕಿತ್ತು. ಈ ಚಿತ್ರದಲ್ಲಿ ಜಾನ್ವಿ ಅವರು ದ್ರೌಪದಿ ಪಾತ್ರ ಮಾಡಬೇಕಿತ್ತು.
ಸೂರ್ಯ ಅವರ ‘ಕಂಗುವ’ ಸಿನಿಮಾ ನೋಡಿದ ಬಳಿಕ ‘ಕರ್ಣ’ ನಿರ್ಮಾಪಕರು ಭಯ ಬಿದ್ದಿದ್ದಾರೆ. ಹೀಗಾಗಿ, ಈ ಚಿತ್ರವನ್ನು ಮಾಡದೆ ಇರಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಶಾಹಿದ್ ಕಪೂರ್ ಜೊತೆ ‘ಅಶ್ವತ್ಥಾಮ’ ಸಿನಿಮಾ ಆಗಬೇಕಿತ್ತು. ಆದರೆ, ಈ ಚಿತ್ರವೂ ಸೆಟ್ಟೇರಿಲ್ಲ. ಈ ಸಿನಿಮಾದ ಬಜೆಟ್ 500 ಕೋಟಿ ರೂಪಾಯಿ ದಾಟಿತ್ತು. ಇದನ್ನು ‘ಕರ್ಣ’ ನಿರ್ಮಾಪಕರು ಗಮನಿಸಿದ್ದಾರೆ.
ಇದನ್ನೂ ಓದಿ: ಸಾಯಿ ಪಲ್ಲವಿ ವಿರುದ್ಧ ಧನುಶ್, ಸೂರ್ಯ ಅಭಿಮಾನಿಗಳ ಅಸಮಾಧಾನ
ಸೂರ್ಯ ಅವರ ‘ಕಂಗುವ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ರೂಪಾಯಿ ಗಳಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಅದೇ ರೀತಿ ‘ಕಂಗುವ 2’ ಘೋಷಣೆ ಆಗಿದೆ. ಈ ಸಿನಿಮಾದಲ್ಲಿ ಕಾರ್ತಿ ಕೂಡ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.