AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್​ನಲ್ಲಿ ಲೈಂಗಿಕ ಜೀವನದ ಬಗ್ಗೆ ಇರೋ ಅತಿಯಾದ ನಿರೀಕ್ಷೆಯಿಂದ ವಿಚ್ಛೇದನ; ಸೈರಾ ಬಾನು ವಕೀಲರ ಹೇಳಿಕೆ

ರೆಹಮಾನ್ ಅವರ ವಿಚ್ಛೇದನಕ್ಕೆ ಅವರದ್ದೇ ಬ್ಯಾಂಡ್​ನಲ್ಲಿರುವ ಮೋಹಿನಿ ಡೇ ಕಾರಣ ಎಂದು ಹೇಳಲಾಗಿತ್ತು. ಆದರೆ, ಎರಡೂ ಪ್ರಕರಣಕ್ಕೆ ಯಾವುದೇ ಸಂಬಂಧ ಇಲ್ಲ, ಇದು ಕಾಕತಾಳೀಯ ಎಂಬ ಸ್ಪಷ್ಟನೆ ಸಿಕ್ಕಿತ್ತು. ಈ ಬೆನ್ನಲ್ಲೇ ಸೈರಾ ಬಾನು ಪರ ವಕೀಲರು ಕೆಲವು ಶಾಕಿಂಗ್ ವಿಚಾರ ರಿವೀಲ್ ಮಾಡಿದ್ದಾರೆ.

ಬಾಲಿವುಡ್​ನಲ್ಲಿ ಲೈಂಗಿಕ ಜೀವನದ ಬಗ್ಗೆ ಇರೋ ಅತಿಯಾದ ನಿರೀಕ್ಷೆಯಿಂದ ವಿಚ್ಛೇದನ; ಸೈರಾ ಬಾನು ವಕೀಲರ ಹೇಳಿಕೆ
ರಾಜೇಶ್ ದುಗ್ಗುಮನೆ
|

Updated on:Nov 22, 2024 | 12:19 PM

Share

ಎಆರ್ ರೆಹಮಾನ್ ಅವರ ಸಂಬಂಧ ಮುರಿದು ಬಿದ್ದಿದೆ. ಸೈರಾ ಬಾನು ಜೊತೆಗಿನ 29 ವರ್ಷಗಳ ಸಂಸಾರ ಕೊನೆ ಆಗಿದೆ. ಇದು ಅನೇಕರಿಗೆ ಶಾಕ್ ಎನಿಸಿದೆ. ಇತ್ತೀಚೆಗೆ ಚಿತ್ರರಂಗದಲ್ಲಿ ಡಿವೋರ್ಸ್ ಪ್ರಕರಣ ಹೆಚ್ಚುತ್ತಿದೆ. ಇದಕ್ಕೆ ಕಾರಣ ಏನು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಸೈರಾ ಬಾನು ಪರ ವಕೀಲೆ ವಂದನಾ ಶಾ ಈ ಬಗ್ಗೆ ಮಾತನಾಡಿದ್ದಾರೆ. ಅವರು ಕೆಲವು ಶಾಕಿಂಗ್ ವಿಚಾರ ರಿವೀಲ್ ಮಾಡಿದ್ದಾರೆ. ಬಾಲಿವುಡ್​ನಲ್ಲಿನ ವಿಚ್ಛೇದನಕ್ಕೆ ಕಾರಣಗಳನ್ನು ಅವರು ಸ್ಪಷ್ಟವಾಗಿ ಹೇಳಿದ್ದಾರೆ.

‘ಬಾಲಿವುಡ್​ ಜೀವನ ಬೇರೆಯದೇ ರೀತಿ ಇದೆ. ದಾಂಪತ್ಯದಲ್ಲಿ ವಿಚ್ಛೇದನಕ್ಕೆ ದ್ರೋಹ ಕಾರಣ ಎಂದು ನಾನು ಭಾವಿಸುವುದಿಲ್ಲ. ಅಲ್ಲಿ ಮದುವೆ ಮುರಿದು ಬೀಳಲು ಕಾರಣವೇನು? ನೀವು ಎಲ್ಲವನ್ನೂ ನೋಡಿದ್ದೀರಿ ಎಂದಾಗ ದಾಂಪತ್ಯದಲ್ಲಿ ವಿರಸ ಮೂಡುತ್ತದೆ. ವಿರಸದ ಕಾರಣದಿಂದ ಒಂದು ದಾಂಪತ್ಯ ತೊರೆದು ಮತ್ತೊಂದು ಮದುವೆ ಆಗುತ್ತಾರೆ. ಬಾಲಿವುಡ್ ಮತ್ತು ಶ್ರೀಮಂತ ಕುಟುಂಬದಲ್ಲಿ ವಿಚ್ಛೇದನಕ್ಕೆ ಕಾರಣ ಬೇರೆಯದೇ ಇರುತ್ತದೆ’ ಎಂದಿದ್ದಾರೆ ಅವರು.

‘ಬಾಲಿವುಡ್​ನವರು ವಿಭಿನ್ನ ಲೈಂಗಿಕ ಜೀವನವನ್ನು ನಡೆಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಲೈಂಗಿಕ ಜೀವನದಿಂದ ನಿರೀಕ್ಷೆ ಹೆಚ್ಚಿರುತ್ತದೆ. ವ್ಯಭಿಚಾರ ಸಂಭವಿಸುತ್ತದೆ. ಒನ್ ನೈಟ್​ ಸ್ಟ್ಯಾಂಡ್​ಗಳು ಅಲ್ಲಿ ಗಂಭೀರ ಎನಿಸಿಕೊಳ್ಳುವುದಿಲ್ಲ. ನಾನು ಬಾಲಿವುಡ್‌ನ ಭಾಗವಾಗಿಲ್ಲ. ಆದರೆ ನನ್ನ ಬಳಿ ಬಂದ ಪ್ರಕರಣಗಳನ್ನು ಆಧರಿಸಿ ಹೇಳುತ್ತಿದ್ದೇನೆ’ ಎಂದಿದ್ದಾರೆ ಅವರು.

Vandana Shah, one of India’s top divorce lawyer talks about celebrity marriages. Any guesses about the South Indian film star she is referring to? byu/Moviebuff1233 inBollyBlindsNGossip

ರೆಹಮಾನ್ ಅವರ ವಿಚ್ಛೇದನಕ್ಕೆ ಅವರದ್ದೇ ಬ್ಯಾಂಡ್​ನಲ್ಲಿರುವ ಮೋಹಿನಿ ಡೇ ಕಾರಣ ಎಂದು ಹೇಳಲಾಗಿತ್ತು. ರೆಹಮಾನ್ ಅವರು ವಿಚ್ಛೇದನ ಘೋಷಿಸಿದ ಬೆನ್ನಲ್ಲೇ ಮೋಹಿನಿ ಕೂಡ ಡಿವೋರ್ಸ್ ಘೋಷಣೆ ಮಾಡಿದ್ದರು. ಆದರೆ, ಎರಡೂ ಪ್ರಕರಣಕ್ಕೆ ಯಾವುದೇ ಸಂಬಂಧ ಇಲ್ಲ, ಇದು ಕಾಕತಾಳೀಯ ಎಂಬ ಸ್ಪಷ್ಟನೆ ಸಿಕ್ಕಿತ್ತು.

ಇದನ್ನೂ ಓದಿ: ಮತ್ತೊಂದು ಹುಡುಗಿಯ ಜೊತೆ ರೆಹಮಾನ್ ಹೆಸರು ಲಿಂಕ್; ಇಲ್ಲಿದೆ ಅಸಲಿ ವಿಚಾರ

ಬಾಲಿವುಡ್​ನಲ್ಲಿ ಸಾಕಷ್ಟು ವಿಚ್ಛೇದನಗಳು ನಡೆದು ಹೋಗಿವೆ. ಇದಕ್ಕೆ ಕಾರಣಗಳು ಹಲವು. ಆದರೆ, ಯಾವ ಕಾರಣವೂ ಹೊರಕ್ಕೆ ಬಂದಿಲ್ಲ. ಐಶ್ವರ್ಯಾ ಹಾಗೂ ಅಭಿಷೇಕ್ ಕೂಡ ವಿಚ್ಛೇದನ ಪಡೆದಿದ್ದಾರೆ ಎನ್ನಲಾಗಿದೆ. ಇದಕ್ಕೆ ಅಮಿತಾಭ್ ಬಚ್ಚನ್ ಸ್ಪಷ್ಟನೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:53 am, Fri, 22 November 24

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ