‘ನಿನ್ನೆ ಮೊನ್ನೆ ಬಂದವ್ರೆಲ್ಲ ನಂಬರ್ 1 ಅಂತಾರೋ’; ವೈಲ್ಡ್ ಕಾರ್ಡ್ ಎಂಟ್ರಿಗಳ ಪರ್ಫಾರ್ಮೆನ್ಸ್​ಗೆ ಮೂಲ ನಿವಾಸಿಗಳಿಗೆ ಹೊಟ್ಟೆ ಉರಿ

ಈ ವಾರ ಬಿಗ್ ಬಾಸ್ ಕನ್ನಡದಲ್ಲಿ ರಜತ್ ಮತ್ತು ಶೋಭಾ ಶೆಟ್ಟಿ ಅವರ ವೈಲ್ಡ್ ಕಾರ್ಡ್ ಎಂಟ್ರಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಮೊದಲಿನಿಂದಲೂ ಇದ್ದ ಸ್ಪರ್ಧಿಗಳು ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕ್ಯಾಪ್ಟನ್ಸಿ ರೇಸ್‌ನಲ್ಲಿ ರಜತ್ ಮತ್ತು ಶೋಭಾ ಅವರ ಇರುವಿಕೆ ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ.

‘ನಿನ್ನೆ ಮೊನ್ನೆ ಬಂದವ್ರೆಲ್ಲ ನಂಬರ್ 1 ಅಂತಾರೋ’; ವೈಲ್ಡ್ ಕಾರ್ಡ್ ಎಂಟ್ರಿಗಳ ಪರ್ಫಾರ್ಮೆನ್ಸ್​ಗೆ ಮೂಲ ನಿವಾಸಿಗಳಿಗೆ ಹೊಟ್ಟೆ ಉರಿ
ರಜತ್, ಶೋಭಾ ಶೆಟ್ಟಿ
Follow us
ರಾಜೇಶ್ ದುಗ್ಗುಮನೆ
|

Updated on:Nov 23, 2024 | 7:22 AM

ಈ ವಾರ ರಜತ್ ಹಾಗೂ ಶೋಭಾ ಶೆಟ್ಟಿ ಅವರು ದೊಡ್ಮನೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದಾರೆ. ಇಬ್ಬರೂ ಪ್ರಬಲ ಸ್ಪರ್ಧಿಗಳು ಎಂದು ಎನಿಸಿಕೊಂಡಿದ್ದಾರೆ. ಅವರು ಈ ವಾರ ಉತ್ತಮವಾಗಿ ಆಟ ಆಡಿದರು. ಇದಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ. ಆದರೆ, ಮೊದಲಿನಿಂದಲೂ ಇಲ್ಲಿಯೇ ಇದ್ದ ಸ್ಪರ್ಧಿಗಳಿಗೆ ಅವರ ಬಗ್ಗೆ ಹೊಟ್ಟೆ ಉರಿ ಶುರುವಾಗಿದೆ. ಈ ಬಗ್ಗೆ ಅವರು ನೇರವಾಗಿ ಹೇಳಿಕೊಂಡಿದ್ದಾರೆ.

ಈ ವಾರ ಎರಡು ತಂಡಗಳನ್ನು ಮಾಡಲಾಗಿತ್ತು. ಶೋಭಾ ಶೆಟ್ಟಿ, ಮಂಜು, ರಜತ್, ಹನುಮಂತ, ಗೌತಮಿ, ಚೈತ್ರಾ ಒಂದು ತಂಡದಲ್ಲಿ ಇದ್ದರೆ ಮತ್ತೊಂದು ತಂಡದಲ್ಲಿ ಭವ್ಯಾ, ತ್ರಿವಿಕ್ರಂ, ಧನರಾಜ್, ಶಿಶಿರ್ ಮೊದಲಾದವರು ಇದ್ದರು. ಶೋಭಾ ತಂಡದಲ್ಲಿ ಇದ್ದ ಶೋಭಾ, ಮಂಜು, ರಜತ್, ಹನುಮಂತ, ಚೈತ್ರಾ ಕ್ಯಾಪ್ಟನ್ಸಿ ರೇಸ್​ಗೆ ಬಂದರು. ಈ ಪೈಕಿ ರಜತ್ ಹಾಗೂ ಶೋಭಾ ಶೆಟ್ಟಿ ವೈಲ್ಡ್ ಕಾರ್ಡ್ ಎಂಟ್ರಿಗಳು. ಈ ವಿಚಾರ ಚರ್ಚೆಯ ಕೇಂದ್ರ ಬಿಂದು ಆಗಿದೆ.

ತ್ರಿವಿಕ್ರಂ ಅವರು ಗೌತಮಿ ಹಾಗೂ ಮಂಜು ಬಳಿ ಈ ವಿಚಾರ ಮಾತನಾಡಿದ್ದಾರೆ. ‘ನಮ್ಮ ತಂಡದ ಒಬ್ಬರೂ ಕ್ಯಾಪ್ಟನ್ಸಿ ರೇಸ್​ನಲ್ಲಿ ಇಲ್ಲ. ಅದು ಬೇಸರದ ವಿಚಾರ’ ಎಂದು ಹೇಳಿಕೊಂಡರು ತ್ರಿವಿಕ್ರಂ. ‘ನಾನು ಶೋಭಾ ತಂಡದಲ್ಲಿ ಇದ್ದ ಹೊರತಾಗಿಯೂ ಕ್ಯಾಪ್ಟನ್ಸಿ ರೇಸ್​ಗೆ ಹೋಗೋಕೆ ಆಗುತ್ತಿಲ್ಲ. ಅದು ನನಗೆಷ್ಟು ಬೇಸರ ಮೂಡಿಸಿರಬಹುದು ಎಂದು ಯೋಚಿಸಿದ್ದೀರಾ’ ಎಂಬುದಾಗಿ ಗೌತಮಿ ಹೇಳಿದರು. ಆಗ ತ್ರಿವಿಕ್ರಂ ಅವರು ಮಂಜು ಬಳಿ ಕೆಲ ವಿಚಾರವನ್ನು ನೇರವಾಗಿ ಹೇಳಿಕೊಂಡರು.

ಇದನ್ನೂ ಓದಿ: ಹನುಮಂತನಿಗೆ ಕ್ಯಾಪ್ಟನ್​ ಪಟ್ಟ ಜಸ್ಟ್ ಮಿಸ್; ನಾಯಕತ್ವ ಸಿಕ್ಕಿದ್ದು ಯಾರಿಗೆ?

ಶಿವರಾಜ್​ಕುಮಾರ್ ಹಾಗೂ ಸುದೀಪ್ ನಟನೆಯ ‘ದಿ ವಿಲನ್’ ಸಿನಿಮಾದ ಸಾಂಗ್​ನಲ್ಲಿ ಬರುವ ‘ನಿನ್ನೆ ಮೊನ್ನೆ ಬಂದವ್ರೆಲ್ಲ ನಂಬರ್ 1 ಅಂತಾರೋ..’ ಸಾಲುಗಳನ್ನು ಹೇಳಿದ್ದಾರೆ ತ್ರಿವಿಕ್ರಂ. ‘ಏನೇ ಆಗಲಿ ನೀವು ಕ್ಯಾಪ್ಟನ್ ಆಗಬೇಕು. ಅವರಿಗೆ (ರಜತ್ ಹಾಗೂ ಶೋಭಾ) ಬಿಟ್ಟುಕೊಡಬಾರದು’ ಎಂದರು. ಈ ಮೂಲಕ ಮೊದಲಿನಿಂದ ದೊಡ್ಮನೆಯಲ್ಲಿ ಇರುವ ಆಟಗಾರರನ್ನು ಕ್ಯಾಪ್ಟನ್ ಆಗಬೇಕು ಎಂದು ಅವರು ಅಂದುಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:21 am, Sat, 23 November 24

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ