‘ಲವ್ ಯೂ ರಚ್ಚು’ ಶೂಟಿಂಗ್​ ಅವಘಡ ಪ್ರಕರಣ; ಮೂವರು ಆರೋಪಿಗಳಿಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ

| Updated By: ರಾಜೇಶ್ ದುಗ್ಗುಮನೆ

Updated on: Aug 24, 2021 | 5:03 PM

ರಾಮನಗರ ತಾಲೂಕಿನ ಜೋಗನದೊಡ್ಡಿ ಬಳಿ ‘ಲವ್​​ ಯೂ ರಚ್ಚು’ ಚಿತ್ರದ ಶೂಟಿಂಗ್​ ನಡೆಯುತ್ತಿತ್ತು. ಈ ವೇಳೆ ರೋಪ್​ ಎಳೆಯುವಾಗ ಫೈಟರ್​ ವಿವೇಕ್​ ಮೃತಪಟ್ಟಿದ್ದರು.​

‘ಲವ್ ಯೂ ರಚ್ಚು’ ಶೂಟಿಂಗ್​ ಅವಘಡ ಪ್ರಕರಣ; ಮೂವರು ಆರೋಪಿಗಳಿಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ
ಫೈಟರ್ ವಿವೇಕ್
Follow us on

‘ಲವ್ ಯೂ ರಚ್ಚು’ ಚಿತ್ರದ ವೇಳೆ ಫೈಟರ್ ವಿವೇಕ್​ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಸಿನಿಮಾ ನಿರ್ದೇಶಕ ಶಂಕರಯ್ಯ, ಸಾಹಸ ನಿರ್ದೇಶಕ ವಿನೋದ್ ಕುಮಾರ್, ಕ್ರೇನ್ ಚಾಲಕ ಮಹದೇವ್ ಅವರನ್ನು ಬಂಧಿಸಲಾಗಿತ್ತು. ಈ ಮೂವರು ಆರೋಪಿಗಳಿಗೆ ರಾಮನಗರ ಹೆಚ್ಚುವರಿ ಸಿವಿಲ್ ಕೋರ್ಟ್ ಮತ್ತೆ 14 ದಿನ ನ್ಯಾಯಾಂಗ ಬಂಧನ ಆದೇಶವನ್ನು ಹೊರಡಿಸಿದೆ.

ರಾಮನಗರ ತಾಲೂಕಿನ ಜೋಗನದೊಡ್ಡಿ ಬಳಿ ‘ಲವ್​​ ಯೂ ರಚ್ಚು’ ಚಿತ್ರದ ಶೂಟಿಂಗ್​ ನಡೆಯುತ್ತಿತ್ತು. ಈ ವೇಳೆ ರೋಪ್​ ಎಳೆಯುವಾಗ ಫೈಟರ್​ ವಿವೇಕ್​ ಮೃತಪಟ್ಟಿದ್ದರು.​ ವಿದ್ಯುತ್​ ತಂತಿಗೆ ರೋಪ್ ಸ್ಪರ್ಶಿಸಿದ್ದು ಇದಕ್ಕೆ ಕಾರಣವಾಗಿತ್ತು. ಇದರಲ್ಲಿ ಚಿತ್ರತಂಡದ ನಿರ್ಲಕ್ಷ್ಯ ಎದ್ದು ಕಂಡಿದೆ. ಹೀಗಾಗಿ, ನಿರ್ದೇಶಕ ಶಂಕರಯ್ಯ, ಸಾಹಸ ನಿರ್ದೇಶಕ ವಿನೋದ್ ಕುಮಾರ್, ಕ್ರೇನ್ ಚಾಲಕ ಮಹದೇವ್ ಅವರನ್ನು ಬಂಧಿಸಲಾಗಿತ್ತು. ಆಗಸ್ಟ್​ 10ರಂದು ಇವರನ್ನು ರಾಮನಗರ ಹೆಚ್ಚುವರಿ ಸಿವಿಲ್ ಕೋರ್ಟ್ ಮುಂದೆ ಹಾಜರು ಪಡಿಸಲಾಗಿತ್ತು. ಈ ವೇಳೆ ನ್ಯಾಯಾಧೀಶೆ ಅನುಪಮಾ ಲಕ್ಷ್ಮೀ ಅವರು 14 ದಿನ ನ್ಯಾಯಾಂಗ ಬಂಧನ ವಿಧಿಸಿದ್ದರು.

ಇಂದು ಮತ್ತೆ ಈ ಮೂವರನ್ನು ರಾಮನಗರ ಹೆಚ್ಚುವರಿ ಸಿವಿಲ್ ಕೋರ್ಟ್ ಮುಂದೆ ವಿಡಿಯೋ ಕಾಳ್​ ಮೂಲಕ ಹಾಜರು ಪಡಿಸಲಾಯಿತು . ಈ ವೇಳೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹೀಗಾಗಿ, ಇವರು ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ಇರಬೇಕಾಗಿದೆ.

‘ಲವ್​ ಯೂ ರಚ್ಚು’ ಸಿನಿಮಾದಲ್ಲಿ ಅಜಯ್​ ರಾವ್​ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದು, ರಚಿತಾ ರಾಮ್ ಚಿತ್ರದ ನಾಯಕಿಯಾಗಿದ್ದಾರೆ. ಶಂಕರ್​ ರಾಜ್​ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಗುರು ದೇಶಪಾಂಡೆ ಚಿತ್ರದ ನಿರ್ಮಾಪಕರಾಗಿದ್ದಾರೆ.

ಇದನ್ನೂ ಓದಿ: Fighter Vivek Death: ‘ಲವ್​ ಯೂ ರಚ್ಚು’ ಚಿತ್ರದ ನಿರ್ದೇಶಕ ಸೇರಿದಂತೆ ಮೂವರಿಗೆ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನ

‘ಲವ್​ ಯೂ ರಚ್ಚು’ ಫೈಟರ್​ ವಿವೇಕ್​ ಸಾವಿಗೆ ಅಸಲಿ ಕಾರಣ ಏನು? ಪ್ರತ್ಯಕ್ಷದರ್ಶಿ ರಂಜಿತ್​ ತೆರೆದಿಟ್ಟ ಸತ್ಯ

Published On - 4:33 pm, Tue, 24 August 21