‘ನಾನು ಮತ್ತೊಮ್ಮೆ ಹಳೆಯ ದಿನಗಳನ್ನು ಜೀವಿಸಿದೆ’; ‘ರತ್ನನ್ ಪ್ರಪಂಚ’ದ ಬಗ್ಗೆ ಧನಂಜಯ ಮಾತು
‘ರತ್ನನ್ ಪ್ರಪಂಚ’ ಸಿನಿಮಾದ ಟ್ರೇಲರ್ ನೋಡಿದವರಿಗೆ ಧನಂಜಯ್ ಪಾತ್ರ ಇಷ್ಟವಾಗಿದೆ. ಈ ಸಿನಿಮಾ ಶುಕ್ರವಾರ (ಅ.22) ಅಮೇಜಾನ್ ಪ್ರೈಂ ವಿಡಿಯೋದಲ್ಲಿ ರಿಲೀಸ್ ಆಗುತ್ತಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಜತೆಗೆ ಅವರು ಮಾತನಾಡಿದ್ದಾರೆ.
ನಟ ಡಾಲಿ ಧನಂಜಯ ಎಂದಾಗ ಅವರು ಮಾಡುವ ಪಾತ್ರದ ಖಡಕ್ ರೂಪ ಕಣ್ಣೆದುರು ಹಾದು ಹೋಗುತ್ತದೆ. ಧನಂಜಯ ಸದಾ ನಟನೆಗೆ ಪ್ರಾಮುಖ್ಯತೆ ಕೊಡುವ ನಟ. ಈ ಕಾರಣಕ್ಕೆ ಅವರು ಸಿನಿಮಾದಿಂದ ಸಿನಿಮಾಗೆ ಭಿನ್ನ ಪಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಈಗ ರಗಡ್ ಅವತಾರ ಬಿಟ್ಟು ಹೊಸ ಪಾತ್ರ ಆಯ್ಕೆ ಮಾಡಿಕೊಂಡಿದ್ದಾರೆ. ‘ರತ್ನನ್ ಪ್ರಪಂಚ’ ಸಿನಿಮಾದ ಟ್ರೇಲರ್ ನೋಡಿದವರಿಗೆ ಧನಂಜಯ್ ಪಾತ್ರ ಇಷ್ಟವಾಗಿದೆ. ಈ ಸಿನಿಮಾ ಶುಕ್ರವಾರ (ಅ.22) ಅಮೇಜಾನ್ ಪ್ರೈಂ ವಿಡಿಯೋದಲ್ಲಿ ರಿಲೀಸ್ ಆಗುತ್ತಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಜತೆಗೆ ಅವರು ಮಾತನಾಡಿದ್ದಾರೆ.
ರತ್ನನ್ ಪ್ರಪಂಚದಲ್ಲಿ ಏನೆಲ್ಲ ಇರುತ್ತೆ?
ಇದು ಮಧ್ಯಮ ವರ್ಗದವರ ಪ್ರಪಂಚ. ಒಂದಷ್ಟು ಒಳ್ಳೆಯ ಪಾತ್ರಗಳು ಇವೆ. ಫಿಲಾಸಫಿ ಇದೆ. ನನಗೆ ತುಂಬಾ ಹತ್ತಿರವಾದಂತಹ ಸಿನಿಮಾ ಇದು. ನಾನು ಈ ರೀತಿಯ ಪಾತ್ರ ಮಾಡಿ ತುಂಬಾನೇ ಸಮಯ ಆಗಿತ್ತು. ಇಷ್ಟು ದಿನ ಮಾಸ್ ಪಾತ್ರ ಮಾಡುವುದರಲ್ಲಿ ಬ್ಯುಸಿ ಇದ್ದೆ. ಈ ಸಿನಿಮಾ ಮಾಡಿದ ಮೇಲೆ ನನ್ನ ಮೊದಲ ಶಾರ್ಟ್ ಮೂವಿ ‘ಜಯನಗರ 4th ಬ್ಲಾಕ್’ ನೆನಪಾಯಿತು. ರೋಹಿತ್ ಪದಕಿ ಅವರು ಈ ಸಿನಿಮಾದ ಕಥೆ ಹೇಳಿ ಮುಗಿಸುವಾಗ ಕಣ್ಣಲ್ಲಿ ನೀರು ಇತ್ತು. ಅದೇ ರೀತಿ ಸಿನಿಮಾ ಕೂಡ ಮೂಡಿ ಬಂದಿದೆ.
ಮಾಸ್ ಪಾತ್ರಗಳ ಮೂಲಕ ಕಾಣಿಸಿಕೊಳ್ತಾ ಇದ್ರಿ. ಈಗ ಒಂದು ಮಧ್ಯಮ ವರ್ಗದವನ ಪಾತ್ರ ಮಾಡಿದೀರಾ. ಜನರು ಇದನ್ನು ಹೇಗೆ ಸ್ವೀಕರಿಸಬಹುದು?
ಖಂಡಿತವಾಗಿಯೂ ಇದನ್ನು ಜನರು ತುಂಬಾನೇ ಇಷ್ಟಪಡುತ್ತಾರೆ. ಮಾಸ್ ಸಿನಿಮಾಗಳನ್ನು ಇಷ್ಟಪಡುವ ಹುಡುಗರೇ ಈ ಸಿನಿಮಾದ ಟ್ರೇಲರ್ ಇಷ್ಟಪಟ್ಟಿದ್ದಾರೆ. ಸಿನಿಮಾ ಯಶಸ್ಸು ಕಾಣುತ್ತೆ ಎನ್ನುವ ಭರವಸೆ ಇದೆ. ಇದು ಎಲ್ಲಾ ಮಧ್ಯಮವರ್ಗದ ಹುಡುಗರಿಗೆ ಇಷ್ಟವಾಗುತ್ತದೆ. ಇದರಲ್ಲಿ ಬರುವ ಸಂಬಂಧಗಳ ವಿಚಾರ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುತ್ತದೆ.
ನೀವು ಮಧ್ಯಮ ವರ್ಗದಿಂದ ಬಂದವರು. ಈಗ ಸ್ಟಾರ್ ಆಗಿದ್ದೀರಿ. ಈಗ ಮತ್ತೆ ಮಧ್ಯಮ ವರ್ಗದ ಜೀವನ ಜೀವಿಸೋದು ಹೇಗನಿಸುತ್ತಿದೆ?
ನನಗೆ ಅದೇ ಖುಷಿ. ಆ್ಯಕ್ಷನ್ ಸಿನಿಮಾ ಮಾಡ್ತಾ ಇದ್ದೆ. ಅವುಗಳ ಮಧ್ಯೆ ಈ ರೀತಿಯ ಪಾತ್ರಗಳನ್ನು ಮತ್ತೆ ಜೀವಿಸುವ ಅವಕಾಶ ಸಿಕ್ಕಾಗ ಖುಷಿಯಾಗುತ್ತದೆ. ಬದುಕಲ್ಲಿ ಬೇರೆಬೇರೆ ದಾರಿಗಳಲ್ಲಿ ಸಾಗ್ತಾನೇ ಇರ್ತೀವಿ. ಹೀಗೆ ಹೋಗುವಾಗ ಮತ್ತೆ ಹಳೇ ಬದುಕಲ್ಲಿ ಜೀವಿಸೋಕೆ ಅವಕಾಶ ಸಿಕ್ಕಾಗ ಅದನ್ನು ಬಿಡಬಾರದು. ಈ ಸಿನಿಮಾವನ್ನು ತುಂಬಾನೇ ಇಷ್ಟಪಟ್ಟಿದೀನಿ. ಕೃತಿ ಕಾಡಿದ ರೀತಿಯೇ ಈ ಸಿನಿಮಾ ಕೂಡ ಕಾಡುತ್ತದೆ. ನಾನು ಸಿನಿಮಾದಲ್ಲಿ ಕಳೆದೇ ಹೋಗಿದ್ದೆ.
ಥಿಯೇಟರ್ ರಿಲೀಸ್ ಮಿಸ್ ಮಾಡ್ಕೋಳ್ತಾ ಇದೀರಾ?
ಚಿತ್ರಮಂದಿರ ಮತ್ತು ಒಟಿಟಿ ಎರಡೂ ಚೆಂದ. ಸಲಗ ಸೆಲಬ್ರೇಷನ್ ಆಗುತ್ತಲೇ ಇದೆ. ನನ್ನ ‘ಬಡವ ರಾಸ್ಕಲ್’ ಸಿನಿಮಾ ಥಿಯೇಟರ್ ಮೂಲಕವೆ ಬರುತ್ತದೆ. ಆಗ ಸೆಲಬ್ರೇಷನ್ ಇದ್ದೇ ಇರುತ್ತದೆ. ‘ರತ್ನನ್ ಪ್ರಪಂಚ’ ಇಡೀ ಕುಟುಂಬ ನೋಡೋ ಸಿನಿಮಾ. ಇದರ ಜತೆ 250 ರಾಷ್ಟ್ರಗಳಲ್ಲಿ ಪ್ರೈಮ್ ನೋಡಬಹುದು. ಈ ಮೂಲಕ ಹೆಚ್ಚು ಜನರಿಗೆ ರೀಚ್ ಆಗ್ತೀವಿ.
ಒಟಿಟಿಗೆ ರಿಲೀಸ್ ಮಾಡಬೇಕು ಎನ್ನುವುದು ಮೊದಲೇ ಪ್ಲ್ಯಾನ್ ಆಗಿತ್ತಾ?
ಇಲ್ಲ, ಚಿತ್ರಮಂದಿರಗಳು ಓಪನ್ ಆಗಿಲ್ಲ ಎಂದಾಗ ನಮಗೆ ಈ ರೀತಿಯ ಆಲೋಚನೆ ಬಂತು. ರತ್ನನ್ ಪ್ರಪಂಚಕ್ಕೆ ಎಲ್ಲರನ್ನೂ ರೀಚ್ ಆಗುವ ಶಕ್ತಿ ಇದೆ. ಒಟಿಟಿ ವ್ಯಾಪ್ತಿ ತುಂಬಾನೇ ದೊಡ್ಡದಿದೆ. ಅದನ್ನು ಎಕ್ಸ್ಪ್ಲೋರ್ ಮಾಡಬೇಕು ಎನ್ನುವ ಕಾರಣಕ್ಕೆ ನಾವು ಈ ನಿರ್ಧಾರ ತೆಗೆದುಕೊಂಡೆವು.
ಉಮಾಶ್ರೀ ಎಷ್ಟು ಇನ್ಸ್ಪೈರ್ ಮಾಡಿದ್ರು..
ಉಮಾಶ್ರೀ ಅವರು ಚಿತ್ರಮಂದಿರದಲ್ಲಿ ಸೀಟಿ ಹೊಡೆಸಿಕೊಳ್ಳುವುದನ್ನು ನೋಡಿದ್ದೇನೆ. ಅವರ ಪರ್ಫಾರ್ಮೆನ್ಸ್ ಅದ್ಭುತ. ದೊಡ್ಡ ಅನುಭವ ಇರುವಂತ ಕಲಾವಿದೆ. ನಮ್ಮ ಎದುರು ಇರುವವರು ಹೇಗೆ ನಟಿಸುತ್ತಾರೆ ಅನ್ನೋದು ಕೂಡ ಬೇರೆ ತರಹ ಮೋಟಿವೇಷನ್.
ಇದನ್ನೂ ಓದಿ: Dhananjay: ಇದು ಡಾಲಿ ಅಲ್ಲ ರತ್ನಾಕರ; ಹೊಸ ಪ್ರಪಂಚದ ಸ್ಯಾಂಪಲ್ ತೋರಿಸಿದ ಧನಂಜಯ್