Savi Madappa: ನಟಿ ಸವಿ ಮಾದಪ್ಪ ಆತ್ಮಹತ್ಯೆ ಪ್ರಕರಣ; ಡೆತ್ನೋಟನ್ನು FSL ಪರೀಕ್ಷೆಗೆ ಕಳುಹಿಸಲು ಮುಂದಾದ ಪೊಲೀಸರು
ನಟಿ ಸವಿ ಮಾದಪ್ಪ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಪೊಲೀಸರ ಕೈಸೇರಿದೆ. ಎಫ್ಎಸ್ಎಲ್ ವರದಿ ಕೈಸೇರಿದ ನಂತರ ಅಂತಿಮ ವರದಿಯನ್ನು ವೈದ್ಯರು ನೀಡಲಿದ್ದಾರೆ.
ನಟಿ ಸವಿ ಮಾದಪ್ಪ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮರಣೋತ್ತರ ಪರೀಕ್ಷೆ ವರದಿ ಪೊಲೀಸರ ಕೈ ಸೇರಿದೆ. ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಯ ವೈದ್ಯರಿಂದ ಪ್ರಾಥಮಿಕ ವರದಿ ಸಲ್ಲಿಕೆಯಾಗಿದ್ದು, ನೇಣುಬಿಗಿದುಕೊಂಡು ಸಾವನ್ನಪ್ಪಿರುವುದನ್ನು ಖಚಿತಪಡಿಸಿದ್ದಾರೆ. ತಾವಿದ್ದ ಅಪಾರ್ಟ್ಮೆಂಟ್ ನಲ್ಲಿ ಐದು ಪುಟಗಳ ಡೆತ್ ನೋಟ್ ಬರೆದಿಟ್ಟು, ಸೆಪ್ಟೆಂಬರ್ 30 ರಂದು ಸವಿ ಮಾದಪ್ಪ ನೇಣಿಗೆ ಶರಣಾಗಿದ್ದರು. ಮಗಳ ಸಾವಿಗ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕುಂಬಳಗೂಡು ಠಾಣೆಗೆ ಸವಿ ತಂದೆ ಪ್ರಭು ಮಾದಪ್ಪ ದೂರು ನೀಡಿದ್ದರು.
ಪ್ರಸ್ತುತ ವೈದ್ಯರು ಅಂತಿಮ ವರದಿ ನೀಡಲು ಕಾಯುತ್ತಿದ್ದಾರೆ. ಎಫ್ಎಸ್ಎಲ್ ವರದಿ ಬಂದ ನಂತರ ಅಂತಿಮ ವರದಿಯನ್ನು ವೈದ್ಯರು ನೀಡಲಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ನೇಣುಬಿಗಿದುಕೊಂಡು ಸಾವು ಎಂದು ವರದಿ ನೀಡಲಾಗಿದೆ. ಆದರೆ, ದೇಹದ ಇತರೆ ಭಾಗಕ್ಕೆ ಬೇರೆ ಏನಾದರೂ ಸೇರಿದೆಯಾ ಎಂದು ತಿಳಿಯಲು ಎಫ್ಎಸ್ಎಲ್ಗೆ ಕಳುಹಿಸಲಾಗಿತ್ತು. ಆ ವರದಿ ಬಂದ ನಂತರ ಸಾವಿನ ಅಂತಿಮ ವರದಿಯನ್ನು ವೈದ್ಯರು ಕುಂಬಳಗೂಡು ಪೊಲೀಸರಿಗೆ ನೀಡಲಿದ್ದಾರೆ.
ಇನ್ನು ಡೆತ್ ನೋಟ್ಗಳನ್ನು ಕೂಡ ಎಫ್ಎಸ್ಎಲ್ ಪರೀಕ್ಷೆಗೆ ಕಳುಹಿಸಲು ಕುಂಬಳಗೂಡು ಪೊಲೀಸರು ಮುಂದಾಗಿದ್ದಾರೆ. ಡೆತ್ ನೋಟ್ ನಲ್ಲಿ ಇರುವ ಬರವಣಿಗೆ ಸವಿ ಮಾದಪ್ಪ ಅವರದ್ದೇ ಹೌದೇ ಎಂದು ಖಚಿತಪಡಿಸಲು ಎಫ್ಎಸ್ಎಲ್ ಪರೀಕ್ಷೆಗೆ ರವಾನಿಸಲಾಗುವುದು. ಈ ಕುರಿತು ರಾಮನಗರ ಎಸ್ಪಿ ಗಿರೀಶ್.ಎಸ್ ಹೇಳಿಕೆ ನೀಡಿದ್ದಾರೆ.
ಡೆತ್ನೋಟ್ನಲ್ಲಿ ಸವಿಮಾದಪ್ಪ ಬರೆದಿದ್ದೇನು? ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಸವಿ ಮಾದಪ್ಪ ಅವರು ಡೆತ್ ನೋಟ್ ಬರೆದಿಟ್ಟಿದ್ದರು. ಆ ಪತ್ರದಲ್ಲಿ ಗೆಳೆಯ ವಿವೇಕ್ಗೆ ಅವರು ಕ್ಷಮೆ ಕೇಳಿದ್ದರು. ಜೀವನದಲ್ಲಿ ಅಂದುಕೊಂಡಿದ್ದು ಆಗಲಿಲ್ಲ. ಕೆಲಸದ ವಿಚಾರದಲ್ಲಿ ಯಶಸ್ಸು ಸಿಗಲಿಲ್ಲ. ಹಣಕಾಸಿನ ಸಮಸ್ಯೆಯಿಂದ ಸಾಲ ಮಾಡಿಕೊಳ್ಳುವಂತಾಯಿತು. ಹೆಣ್ಣುಮಕ್ಕಳಿಗೆ ಆಗುವು ದೈಹಿಕ ಸಮಸ್ಯೆಯಿಂದಲೂ ಸಾಕಷ್ಟು ನೋವು ಅನುಭವಿಸಬೇಕಾಯಿತು. ಈ ಎಲ್ಲ ಕಾರಣದಿಂದ ಡಿಪ್ರೆಷನ್ ಮೂಡಿತು. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ನಲ್ಲಿ ಸವಿ ಮಾದಪ್ಪ ಬರೆದಿದ್ದರು. ತಮ್ಮ ಎಲ್ಲ ಸಮಸ್ಯೆಗಳನ್ನು 5 ಪುಟಗಳ ಡೆತ್ ನೋಟ್ನಲ್ಲಿ ಅವರು ವಿವರಿಸಿದ್ದರು.
ಇದನ್ನೂ ಓದಿ:
Savi Madappa: ನಟಿ ಸವಿ ಮಾದಪ್ಪ ಸಾವಿನ ಸತ್ಯ ಬಯಲು; ಪೊಲೀಸರ ಕೈ ಸೇರಿದ ಮರಣೋತ್ತರ ಪರೀಕ್ಷೆ ವರದಿ
ನಟಿ ಸಂಜನಾಗೆ ವಂಚನೆ ಪ್ರಕರಣ; ರಾಹುಲ್ ಥೋನ್ಸೆ ಸೇರಿ ಮೂವರ ವಿರುದ್ಧ ಎಫ್ಐಆರ್ ದಾಖಲು
ಈ 3 ರಾಶಿಯ ಜನರು ಪ್ರೇಮ-ಪ್ರಣಯದ ಉತ್ಕರ್ಷದಲ್ಲಿ ಇರುತ್ತಾರೆ! ಯಾವುವು ಆ ಮೂರು ರೋಮ್ಯಾಂಟಿಕ್ ರಾಶಿ ತಿಳಿಯೋಣ ಬನ್ನೀ