‘ಡಾಲಿ ಪಿಕ್ಚರ್ಸ್’ ಮೂಲಕ ಹೊಸ ಸುದ್ದಿ ನೀಡಿದ ಡಾಲಿ ಧನಂಜಯ್​

|

Updated on: Feb 12, 2024 | 6:45 PM

ಧನಂಜಯ್​ ಅವರ ನಿರ್ಮಾಣದಲ್ಲಿ ಮೂಡಿಬಂದ ‘ಟಗರು ಪಲ್ಯ’ ಸಿನಿಮಾ ಸಕ್ಸಸ್ ಆಯಿತು. ಅದೇ ಖುಷಿಯಲ್ಲಿರುವ ‘ಡಾಲಿ ಪಿಕ್ಚರ್ಸ್​’ ನಿರ್ಮಾಣ ಸಂಸ್ಥೆಯು ಇನ್ನೊಂದು ಭಿನ್ನ ಕಥಾಹಂದರದ ಸಿನಿಮಾವನ್ನು ಪ್ರೇಕ್ಷಕರ ಮುಂದಿಡಲು ತಯಾರಿ ಮಾಡಿಕೊಳ್ಳುತ್ತಿದೆ. ಈ ಬಾರಿ ಡಾಲಿ ಧನಂಜಯ್ ಅವರು ಯಾರಿಗೆ ಚಾನ್ಸ್​ ನೀಡುತ್ತಿದ್ದಾರೆ ಎಂಬುದನ್ನು ತಿಳಿಯುವ ಕುತೂಹಲ ಮೂಡಿದೆ.

‘ಡಾಲಿ ಪಿಕ್ಚರ್ಸ್’ ಮೂಲಕ ಹೊಸ ಸುದ್ದಿ ನೀಡಿದ ಡಾಲಿ ಧನಂಜಯ್​
ಡಾಲಿ ಧನಂಜಯ್​
Follow us on

ಖ್ಯಾತ ನಟ, ನಿರ್ಮಾಪಕ ಡಾಲಿ ಧನಂಜಯ (Daali Dhananjay) ಅವರ ಕಡೆಯಿಂದ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಸಿಹಿ ಸುದ್ದಿ ಎಂದರೆ ಇದು ಅವರ ಮದುವೆಯ ವಿಷಯ ಆಗಿರಬಹುದಾ ಎಂದು ಅಚ್ಚರಿಪಡಬೇಡಿ. ಸದ್ಯಕ್ಕೆ ಅವರು ಸಿಹಿ ಸುದ್ದಿ ನೀಡಿರುವುದು ಹೊಸ ಸಿನಿಮಾ ಬಗ್ಗೆ. ‘ಡಾಲಿ ಪಿಕ್ಚರ್ಸ್​’ (Daali Pictures) ಕಡೆಯಿಂದ ಮತ್ತೊಂದು ಸಿನಿಮಾ (Kannada Cinema) ಸೆಟ್ಟೇರುತ್ತಿದೆ. ಡಾಲಿ ಧನಂಜಯ್​ ಅವರು ನಿರ್ಮಾಣ ಮಾಡುವ ಸಿನಿಮಾ ಎಂದರೆ ಅದರಲ್ಲಿ ವಿಶೇಷತೆ ಇದ್ದೇ ಇರುತ್ತದೆ ಎಂಬುದು ಅಭಿಮಾನಿಗಳ ನಂಬಿಕೆ. ಹಾಗಾಗಿ ಅವರ ಕಡೆಯಿಂದ ಅನೌನ್ಸ್​ ಆಗುತ್ತಿರುವ ಹೊಸ ಸಿನಿಮಾದ ಬಗ್ಗೆ ಫ್ಯಾನ್ಸ್​ ಬಹಳ ಕೌತುಕ ಇಟ್ಟುಕೊಂಡಿದ್ದಾರೆ.

ಡಾಲಿ ಧನಂಜಯ ಅವರ ನಿರ್ಮಾಣದಲ್ಲಿ ಮೂಡಿಬರಲಿರುವ 5ನೇ ಸಿನಿಮಾ ಈಗ ಸೆಟ್ಟೇರುತ್ತಿದೆ. ತಮ್ಮದೇ ನಿರ್ಮಾಣ ಸಂಸ್ಥೆಯಾದ ‘ಡಾಲಿ ಪಿಕ್ಚರ್ಸ್’ ಮೂಲಕ ಈಗಾಗಲೇ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿರುವ ಧನಂಜಯ್​ ಅವರು ಈಗ ಮತ್ತೊಂದು ಸಿನಿಮಾಗೆ ಬಂಡವಾಳ ಹೂಡಲು ಸಜ್ಜಾಗಿದ್ದಾರೆ. ಆ ಬಗ್ಗೆ ಸೋಶಿಯಲ್​ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: ಡಾಲಿ ಧನಂಜಯ್ ಅವರನ್ನು ಲಿಡ್ಕರ್ ಬ್ರ್ಯಾಂಡ್ ರಾಯಭಾರಿಯಾಗಿ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಧನಂಜಯ್​ ಅವರ ನಿರ್ಮಾಣದಲ್ಲಿ ಮೂಡಿಬಂದ ‘ಟಗರು ಪಲ್ಯ’ ಸಿನಿಮಾ ಸಕ್ಸಸ್ ಆಯಿತು. ಅದೇ ಖುಷಿಯಲ್ಲಿರುವ ‘ಡಾಲಿ ಪಿಕ್ಚರ್ಸ್​’ ನಿರ್ಮಾಣ ಸಂಸ್ಥೆಯು ಇನ್ನೊಂದು ಭಿನ್ನ ಕಥಾಹಂದರದ ಸಿನಿಮಾವನ್ನು ಪ್ರೇಕ್ಷಕರ ಮುಂದಿಡಲು ತಯಾರಿ ಮಾಡಿಕೊಳ್ಳುತ್ತಿದೆ. ಸದ್ಯಕ್ಕೆ ಈ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಸಿನಿಮಾದ ಟೈಟಲ್​ ಏನು? ಹೀರೋ ಯಾರು ಎಂಬಿತ್ಯಾದಿ ವಿವರಗಳು ಶೀಘ್ರದಲ್ಲೇ ಹೊರಬರಲಿವೆ.

‘ಬಡವರ ಮಕ್ಕಳು ಬೆಳಿಬೇಕು’ ಎಂಬುದು ಡಾಲಿ ಧನಂಜಯ್​ ಅವರ ಫೇಮಸ್​ ಮಾತು. ಅದರಂತೆ ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಅನೇಕ ಹೊಸಬರಿಗೆ ಈಗಾಗಲೇ ಅವರು ಅವಕಾಶ ನೀಡಿ, ಬೆನ್ನು ತಟ್ಟಿದ್ದಾರೆ. ಈ ಬಾರಿ ಅವರು ಯಾರಿಗೆ ಚಾನ್ಸ್​ ನೀಡುತ್ತಿದ್ದಾರೆ ಎಂಬುದನ್ನು ತಿಳಿಯುವ ಕುತೂಹಲ ಮೂಡಿದೆ. ಧನಂಜಯ ಅವರ ನಿರ್ಮಾಣ ಸಂಸ್ಥೆಯಿಂದ ಯಾವ ಹೀರೋ, ಹೀರೋಯಿನ್​, ನಿರ್ದೇಶಕರು ಚಂದನವನಕ್ಕೆ ಎಂಟ್ರಿ ನೀಡಬಹುದು ಎನ್ನುವ ಕುತೂಹಲ ಸೃಷ್ಟಿ ಆಗಿದೆ. ಈ ಎಲ್ಲ ಪ್ರಶ್ನೆಗಳಿಗೆ ಫೆಬ್ರವರಿ 14ರಂದು ಉತ್ತರ ಸಿಗಲಿದೆ. ಅಂದು, ಸಿನಿಮಾದ ಶೀರ್ಷಿಕೆ ಏನು ಮತ್ತು ಹೀರೋ ಯಾರು ಎಂಬ ಮಾಹಿತಿ ಬಹಿರಂಗ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ