AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kichcha Sudeep: ನಟ ಕಿಚ್ಚ ಸುದೀಪ್ ಅವರ ಬಾಲಿವುಡ್ ಕ್ರಶ್ ಯಾರು? ನೀವೇ ಊಹಿಸಿ

ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು 28 ವರ್ಷಗಳು ಪೂರ್ಣಗೊಂಡಿವೆ. ಸುದೀಪ್ ಕಂಡರೆ ಅನೇಕರಿಗೆ ಇಷ್ಟ. ಹಾಗಾದರೆ ಸುದೀಪ್ ಅವರಿಗೆ ಯಾರನ್ನು ಕಂಡರೆ ಇಷ್ಟ? ಬಾಲಿವುಡ್​ನಲ್ಲಿ ಅವರಿಗೆ ಒಬ್ಬರ ಮೇಲೆ ಕ್ರಶ್ ಇದೆ. ಯಾವುದೇ ಸ್ಟಾರ್ ಕಲಾವಿದರು ಆದರೂ ಅವರಿಗೆ ಒಬ್ಬರು ನೆಚ್ಚಿನ ನಟ/ನಟಿ ಇರುತ್ತಾರೆ. ಕಿಚ್ಚ ಸುದೀಪ್ ಅವರಿಗೂ ಫೇವರಟಿ ನಟಿ ಇದ್ದಾರೆ.

Kichcha Sudeep: ನಟ ಕಿಚ್ಚ ಸುದೀಪ್ ಅವರ ಬಾಲಿವುಡ್ ಕ್ರಶ್ ಯಾರು? ನೀವೇ ಊಹಿಸಿ
ಸುದೀಪ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Feb 12, 2024 | 9:31 AM

Share

ಕಿಚ್ಚ ಸುದೀಪ್ (Kichcha Sudeep) ಅವರಿಗೆ ಚಿತ್ರರಂಗದಲ್ಲಿ ಇರೋ ಬೇಡಿಕೆ ತುಂಬಾನೇ ದೊಡ್ಡದು. ಕೇವಲ ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಅವರಿಗೆ ಬೇಡಿಕೆ ಇದೆ. ನಿರ್ದೇಶಕ ಎಸ್​ಎಸ್​ ರಾಜಮೌಳಿ, ನಟ ಸಲ್ಮಾನ್ ಖಾನ್ ಜೊತೆ ಅವರು ಕೆಲಸ ಮಾಡಿದ್ದಾರೆ. ಅವರಿಗೆ ಇರೋ ಬೇಡಿಕೆ ಸದ್ಯಕ್ಕೆ ಕಡಿಮೆ ಆಗುವಂಥದ್ದಲ್ಲ. ಅವರು ಚಿತ್ರರಂಗಕ್ಕೆ ಕಾಲಿಟ್ಟು 28 ವರ್ಷಗಳು ಕಳೆದಿವೆ. ಸುದೀಪ್ ಕಂಡರೆ ಅನೇಕರಿಗೆ ಇಷ್ಟ. ಹಾಗಾದರೆ ಸುದೀಪ್ ಅವರಿಗೆ ಯಾರು ಇಷ್ಟ? ಬಾಲಿವುಡ್​ನಲ್ಲಿ ಅವರಿಗೆ ಯಾರ ಮೇಲೆ ಕ್ರಶ್ ಇದೆ? ಈ ಪ್ರಶ್ನೆಗೆ ಈ ಸ್ಟೋರಿಯಲ್ಲಿದೆ ಉತ್ತರ.

ಯಾವುದೇ ಸ್ಟಾರ್ ಕಲಾವಿದರು ಆದರೂ ಅವರಿಗೆ ಒಬ್ಬರು ನೆಚ್ಚಿನ ನಟ/ನಟಿ ಇರುತ್ತಾರೆ. ಕಿಚ್ಚ ಸುದೀಪ್ ಅವರಿಗೂ ಫೇವರಟಿ ನಟಿ ಇದ್ದಾರೆ. ಅವರು ಬೇರಾರೂ ಅಲ್ಲ ಬಾಲಿವುಡ್​​ ನಟಿ ಕಾಜೋಲ್. ಬಾಲಿವುಡ್​ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರನ್ನು ಕಂಡರೆ ಕಿಚ್ಚ ಸುದೀಪ್ ಅವರಿಗೆ ಅಚ್ಚುಮೆಚ್ಚು. ಈ ವಿಚಾರವನ್ನು ಅವರು ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಇದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ. ಈ ವಿಡಿಯೋನ ಫ್ಯಾನ್​ ಪೇಜ್​ಗಳಲ್ಲಿ ಅಭಿಮಾನಿಗಳು ಈಗ ವೈರಲ್ ಮಾಡುತ್ತಿದ್ದಾರೆ.

‘ಬಾಲಿವುಡ್​ನ ಮೊದಲ ಕ್ರಶ್ ಯಾರು’ ಎಂದು ಸುದೀಪ್ ಅವರಿಗೆ ಕೇಳಲಾಗಿತ್ತು. ಇದಕ್ಕೆ ಅವರು ಕಾಜೋಲ್ ಹೆಸರನ್ನು ತೆಗೆದುಕೊಂಡಿದ್ದರು. ಅಷ್ಟೇ ಅಲ್ಲ ಈ ಕಾರಣಕ್ಕೆ ಅವರು ಅಜಯ್ ದೇವಗನ್​ ಅವರನ್ನು ಹೇಟ್ ಮಾಡುತ್ತಾರಂತೆ. ‘ಬಾಲಿವುಡ್​ನಲ್ಲಿ ಯಾವುದಾದರೂ ಎರಡು ನಾಯಕಿಯರ ಜೊತೆ ಕೆಲಸ ಮಾಡಬೇಕು ಎಂದರೆ ಅವರು ಯಾರು’ ಎಂದು ಕೇಳಿದ ಪ್ರಶ್ನೆಗೆ ಸುದೀಪ್ ಅವರು ಒಂದರಿಂದ ಒಂಭತ್ತು ಕಾಜೋಲ್ ಎಂದು ಹೇಳಿದ್ದರು.

ಇದನ್ನೂ ಓದಿ: ‘ನಾನು ಮುಂಗಾರು ಮಳೆ ಮಾಡಿದ್ರೆ ಅಟ್ಟರ್​ ಫ್ಲಾಪ್ ಆಗುತ್ತಿತ್ತು’; ಓಪನ್ ಆಗಿ ಹೇಳಿದ್ದ ಸುದೀಪ್

‘ನಿಮ್ಮ ಫೇವರಿಟ್ ನಟಿ ಯಾರು’ ಎಂದು ಕೇಳಿದ್ದಕ್ಕೆ ಸುದೀಪ್ ಅವರು ಕಾಜೋಲ್ ಹೆಸರನ್ನು ತೆಗೆದುಕೊಂಡಿದ್ದರು. 20-25 ವರ್ಷಗಳಿಂದ ಅವರು ಬದಲಾಗೇ ಇಲ್ಲ ಎಂದು ಅವರು ಹೇಳಿಕೊಂಡಿದ್ದರು. ಅಷ್ಟೇ ಅಲ್ಲ ಮುಂದೊಂದು ದಿನ ಸಿನಿಮಾ ರಂಗದಲ್ಲಿ ಅವರ ಜೊತೆ ಕೆಲಸ ಮಾಡಬೇಕು ಎಂದು ಸುದೀಪ್ ಹೇಳಿದ್ದರು. ಅದು ಯಾವುದೇ ಸಿನಿಮಾ ಆದರೂ ತೊಂದರೆ ಇಲ್ಲ ಎಂಬುದು ಸುದೀಪ್ ಮಾತು. ಈ ವಿಚಾರ ಅನೇಕರಿಗೆ ಅಚ್ಚರಿ ತಂದಿದೆ.

ಸುದೀಪ್ ಮಾತನಾಡಿದ ವಿಡಿಯೋ..

View this post on Instagram

A post shared by Ruhi (@kajolsworld)

ಕಾಜೋಲ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 1992ರಲ್ಲಿ. ‘ಬೇಖುಡಿ’ ಅವರ ನಟನೆಯ ಮೊದಲ ಸಿನಿಮಾ. 1997ರಲ್ಲಿ ಅವರು ತಮಿಳು ಚಿತ್ರರಂಗಕ್ಕೆ ಕಾಲಿಟ್ಟರು. ಇದಲ್ಲದೆ ಹಲವು ಹಿಟ್ ಹಾಡುಗಳಲ್ಲಿ ಅವರು ಹೆಜ್ಜೆ ಹಾಕಿದ್ದಾರೆ. ‘ಕಲ್ ಹೋ ನಾ ಹೋ’, ‘ಬಾಜಿಗರ್’ ಅಂಥ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರು 1999ರಲ್ಲಿ ಅಜಯ್ ದೇವಗನ್ ಅವರನ್ನು ಮದುವೆ ಆದರು. ಈ ದಂಪತಿಗೆ ಇಬ್ಬರು ಮಕ್ಕಳು. ಅವರಿಗೆ ಪದ್ಮಶ್ರೀ ಅಂಥ ಅವಾರ್ಡ್ ಸಿಕ್ಕಿದೆ. ಕಿಚ್ಚ ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ